ಲೋಕದರ್ಶನವರದಿ
ರಾಣೇಬೆನ್ನೂರು10: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ತಾಲೂಕಿನ ಕೊಡಿಯಾಲ ಹೊಸಪೇಟೆ ಮತ್ತು ಕವಲೆತ್ತು ಗ್ರಾಮಗಳಲ್ಲಿ ಗುರುವಾರ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ನಡೆಸಿದರು.
ಈ ಎರಡು ಗ್ರಾಮಗಳಲ್ಲಿ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿರುವವರ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿರುವುದು ಸಾಮಾನ್ಯವಾಗಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವರಾಜ ಶಿಮಿಕೇರಿ ಹಾಗೂ ಶಿಕ್ಷಕರು ಸಮೀಕ್ಷೆ ನಡೆಸಿದರು.
ಈ ವೇಳೆ ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ ಮಾತನಾಡಿ, ಬಿಜಾಪುರ, ರಾಯಚೂರ, ಬಾಗಲಕೋಟೆ ಮತ್ತು ಹಾವೇರಿ ತಾಲುಕಿನ ವಿವಿಧ ಲಮಾಣಿ ತಾಂಡಾಗಳ ಜನರು ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡಲು ಆಗಮಿಸಿದ್ದು, ಈ ಸಂದರ್ಭದಲ್ಲಿ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಸಮೀಕ್ಷೆ ನಡೆಸಿ ಸ್ಥಳೀಯ ಶಾಲೆಗಳಲ್ಲಿ ತಾತ್ಕಾಲಿಕ ನೊಂದಣಿ ಮಾಡಿಕೊಂಡು ಶಿಕ್ಷಣ ನೀಡುತ್ತಿದೆ, ಇದರ ಪ್ರಯೋಜನವನ್ನು ನೀವು ಪಡದುಕೊಳ್ಳಬೇಕು ಎಂದರು.ಆರ್ಪಿ ಅಶೋಕ ಬಿ.ಕೆ, ಮುಖ್ಯಶಿಕ್ಷಕ ಮಲ್ಲಿಕಾಜರ್ುನ ಬಾವಿಕಟ್ಟಿ, ಶ್ರೀನಿವಾಸ ರಾಯಚೂರ, ಹನುಮಂತಪ್ಪ, ರೇಖಾ, ಜಗದೀಶ ಲಮಾಣಿ, ರೇಣುಕಾ, ಸೂರಲಿಂಗಯ್ಯ, ಬೀರಪ್ಪ ಆರೇರ, ಫಕ್ಕೀರಪ್ಪ ಜಾಡರ, ಮಹಾಂತೇಶ ಸೇರಿದಂತೆ ಮತ್ತಿತರರು ಇದ್ದರು.