ಸಂಬರಗಿ 27:ಸಂಬರಗಿ ಗ್ರಾಮದ ಹೊರವಲಯ ಅವಳೆ ತೋಟದ ವಸತಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಮಧ್ಯ ನಡೆಯುತ್ತಿರುವ ಗೊಂದಲಮಯ ವಾತಾವರಣ ಸ್ಥಳಕ್ಕೆ ಶಿಕ್ಷಣ ಸಂಯೋಜಕ ಶ್ರಾವಣ ಗಸ್ತಿ, ಸಿ.ಆರ್.ಪಿ. ಗಂಗಾಧರ ಕೋಷ್ಠಿ ಹಾಗೂ ಗಣ್ಯರೊಂದಿಗೆ ಚರ್ಚೆಮಾಡಿ ಇಬ್ಬರು ಶಿಕ್ಷಕರ ನಡುವೆ ಇರುವ ಗೊಂದಲದ ವಾತಾವರಣ ಪರಿಹರಿಸಿದರು. ಆ ನಂತರ ಶಿಕ್ಷಕರು ತಮ್ಮ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿದರು.
ಸಂಬರಗಿ ಗ್ರಾಮದ ಅವಳೆ ತೋಟದ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸಂಜು ಗಿರಿಕಲ್ಮೇಶ್ವರ ಇವರನ್ನು ಬನ್ನೂರ ಪ್ರಾಥಮಿಕ ಶಾಲೆಗೆ ಡೆಪಿಟೆಷನ್ ಮೇಲೆ ವರ್ಗಾವಣೆ ಮಾಡಲಾಯಿತು. ಆದರೆ ಮಾರ್ಚ ತಿಂಗಳ ಕೊನೆಯ ವಾರದಲ್ಲಿ ತಮ್ಮ ಶಾಲೆಗೆ ಹಾಜರಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೊರಟಗಿ ಇವರು ಆದೇಶ ಮಾಡಿದರು. ಆದರೆ ಅಲ್ಲಿನ ಸ್ಥಳಿಯ ಶಿಕ್ಷಕರು ತಾನಾಜಿ ಪಾಟೀಲ ಇವರಿಬ್ಬರ ನಡುವೆ ಗೊಂದಲದಿಂದ ಸಂಜಯ ಗಿರಿಕಲ್ಮೇಶ್ವರ ಇವರು ಗೊಂದಲದಲ್ಲಿ ಇದ್ದರು.
ಅಥಣಿ ತಾಲೂಕಾ ಮಾದಿಗ ಹೋರಾಟ ಸಮೀತಿಯ ಅಧ್ಯಕ್ಷರು ಹಣಮಂತ ಅರದಾಊರ, ಕೆ.ಪಿ.ಸಿ.ಸಿ ಮಹಿಳಾ ಘಟಕ ಕೋಆರ್ಡಿನೆಟರ್ ಶ್ರೀಮತಿ ಸುನಿತಾ ಐಹೋಳೆ, ಶಿವಾನಂದ ಸೌದಾಗರ, ಕುಮಾರ ಗಸ್ತಿ, ಸುರೇಶ ವಾಘಮೋಡೆ ಇವರ ಸಹಕಾರದಿಂದ ಇಬ್ಬರ ಶಿಕ್ಷಕರ ನಡುವೆ ನಡೆಯುತ್ತಿರುವ ಗೊಂಡಲಮಯ ವಾತಾವರಣವನ್ನು ಬಗೆಹರಿಸಿದರು. ಇಬ್ಬರು ಶಿಕ್ಷಕರಿಗೆ ಮುಖಂಡರು ಹಾಗೂ ಶಾಲಾ ಸುದಾಧರಣ ಸಮೀತಿಯಿಂದ ತಿಳುವಳಿಕೆ ನೀಡಲಾಯಿತು. ಶಾಲೆಯಲ್ಲಿ ಸರಿಯಾಗಿ ಬಂದು ಸರಿಯಾಗಿ ಪಾಠ ಮಾಡಬೇಕೆಂದು ಎಲ್ಲರೂ ತಿಳಿಸಿದರು.