ಮಿಲಿಟರಿ ತಂತ್ರಜ್ಞಾನಗಳ ಸಂಶೋಧನೆ ಅಗತ್ಯ: ಬೆಲ್ಲದ

ಲೋಕದರ್ಶನವರದಿ

ಧಾರವಾಡ೨೮: ವಿಜ್ಞಾನ ಕೇಂದ್ರವು ಹಲವಾರು ಇಂತಹ  ವೈಜ್ಞಾನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾಥರ್ಿಗಳಿಗೆ  ಮತ್ತು ಸಾರ್ವಜನಿಕರಿಗೆ ವಿಜ್ಞಾನವನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ನಾನು ಸದಾ ಸಿದ್ದನಿದ್ದೇನೆ. ಇಲ್ಲಿರುವ ಮಿಲಿಟರಿ ಯುದ್ದ ಟ್ಯಾಂಕ್ ಮತ್ತು ಯುದ್ದ ವಿಮಾನದಲ್ಲಿರುವ ತಂತ್ರಜ್ಞಾನಗಳ ಬಗ್ಗೆ ವಿದ್ಯಾಥಿಗಳು ಗಳು ಅಧ್ಯಯನ ಮಾಡಿ ಮುಂದೆ ಉನ್ನತ ವ್ಯಾಸಂಗದ ನಂತರ ಸಂಶೋಧನೆಗಳನ್ನು ಕೈಗೊಳ್ಳಲುಗುವುದೇ ಪ್ರಾದೇಶಿಕ ವಿಜ್ಞಾನ ಕೇಂದ್ರದ ವಾಷರ್ಿಕೋತ್ಸವ, ಎಚ್.ಪಿ. ಟಿ-32 ಪೈಲೆಟ್ ತರಬೇತಿ ವಿಮಾನ ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾ ಉದ್ಘಾಟನೆ ಹಾಗೂ "ಪ್ರಕೃತಿ ದಿನಾಚರಣೆ"ಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಶಾಸಕರು (ವಿಧಾನಸಭೆ) ಹುಬ್ಬಳ್ಳಿ ಧಾರವಾಡ ಪಶ್ಚಿಮದ ಅರವಿಂದ ಬೆಲ್ಲದ ಕರೆ ನೀಡಿದರು. 

ಅತಿಥಿಗಳಾದ ಸಿ.ಎಸ್. ಹವಾಲ್ದಾರ, ನಿವೃತ್ತ ಏರ್ ಕಮಾಂಡರ್ ಇವರು ವಿದ್ಯಾಥರ್ಿಗಳು ಈ ಯುದ್ಧ ವಿಮಾನವನ್ನು ಸುಮ್ಮನೆ ನೋಡಿ ಹೋಗುವ ಬದಲು ಅದರಲ್ಲಿರುವ ತಂತ್ರಜ್ಞಾನ ಮತ್ತು ಕೆಲಸದ ವೈಖರಿಯನ್ನು ಗಮನಿಸಿ ಅದನ್ನು ಹೆಚ್ಚಿನ ಗುಣಮಟ್ಟಕ್ಕೆ ತೆಗೆದುಕೊಂಡು ಹೋಗುವಂತ ಕೆಲಸ ಮಾಡಬೇಕು. ಆಗಲೇ ಈ ಯುದ್ಧ ವಿಮಾನವನ್ನು ಇಲ್ಲಿ ತಂದಿರುವ ಸಾರ್ಥಕತೆ ಆಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಕೇಂದ್ರದ ನಿದರ್ೇಶಕರಾದ ಡಾ. ಕೆ.ಬಿ.ಗುಡಸಿ ಅವರು ಕೇಂದ್ರದ ಯೋಜನೆಗಳ ವಿವರವನ್ನು ಪ್ರಸ್ತುತ ಪಡಿಸಿ ಇಲ್ಲಯವರೆಗೂ ನಡೆದಿರುವ ಕಾರ್ಯಕ್ರಮಗಳು ಮತ್ತು ಮುಂಬರುವ ಯೋಜನೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.

ಸುರೇಶ ಕುಲಕಣರ್ಿ ಅವರು ಚಿತ್ರಕಲೆ ಸ್ಪಧರ್ೆಯಲ್ಲಿ ಎಲ್ಲ ಮಕ್ಕಳೂ ಅದ್ಭುತವಾಗಿ ಚಿತ್ರ ಬಿಡಿಸಿದ್ದು, ಈ ಚಿತ್ರಕಲೆ ಎಲ್ಲ ಆಲೋಚನೆಗಳನ್ನು ವ್ಯಕ್ತಪಡಿಸುವ ಒಂದು ವಿಶೇಷ ಕಲೆ ಎಂದು ತಿಳಿಸಿದರು.

ಚಿತ್ರಕಲೆ ಸ್ಪರ್ಧೆಯಲ್ಲಿ  ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಸಿ.ಎಫ್.ಚಂಡೂರ ಅವರು ನಿರೂಪಿಸಿದರು. ವಿಶಾಲಾಕ್ಷಿ ಎಸ್.ಜೆ. ವಂದಿಸಿದರು. 

      ಈ ಕಾರ್ಯಕ್ರಮಕ್ಕೆ ಆಗಮಿಸಿದ ಮಹನೀಯರುಗಳಾದ ಚಂದ್ರಕಾಂತ ಬೆಲ್ಲದ, ವಿಜಯಕುಮಾರ ಗಿಡ್ನವರ, ನಿವೃತ್ತ ವಾಯು ಪಡೆಯ ಅಧಿಕಾರಿಗಳು,  ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿಗಳಾದ ಸಂದೀಪ ರಂಜಣಗಿ, ಅಡಿವೆಪ್ಪ ಅಂತಣ್ಣವರ,  ಎಂ.ಸಿ. ಕಂದಗಲ್ಲ, ಎಸ್. ಎಫ್. ಆಡಿನ, ಆರ್. ಪಿ. ಗಾಳಿ, ಅಭಿಷೇಕ ಸಿ., ಪ್ರಮೋದ ಆರ್., ಎಂ. ಕೆ. ಹೊರಕೇರಿ, ಕೆ. ಎನ್. ಲಕ್ಷ್ಮಣ, ಬಿ.ಎಸ್. ಗಾಂವಕರ, ಶ್ಯಾಮ ತೇಲಗಾರ, ಎಂ.ಸಿ. ಶಂಕರೇಗೌಡ, ಶಂಕರ ಹಿರೇಮಠ, ವಿವಿಧ ಶಾಲೆಯ ಶಿಕ್ಷಕರು ಮತ್ತು ಎನ್.ಸಿ.ಸಿ. ವಿದ್ಯಾಥರ್ಿಗಳು, ಸಾರ್ವಜನಿಕರು, ವಿದ್ಯಾಥರ್ಿಗಳ ಪೋಷಕರು ಉಪಸ್ಥಿತರಿದ್ದರು.