ಸಂಖ್ಯಾಶಾಸ್ತ್ರವಿಲ್ಲದೆ ಸಂಶೋಧನೆಅಪೂರ್ಣ: ಡಾ. ಆಶಾಲತಾ ಕೆ.ವಿ
Research is incomplete without statistics: Dr. Ashalatha K.V.
ಬಿ.ಎಲ್.ಡಿ.ಇಸಂಸ್ಥೆಯಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ವಿಜಯಪುರ 26 : ನಮ್ಮಜೀನವದ ದಿನಿತ್ಯದಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಪಾತ್ರವಹಿಸುತಿದ್ದುಮಾಹಿತಿ ಪ್ರತಿಯೊಂದು ಹಂತದಲ್ಲೂ ಸೃಷ್ಟಿಯಾಗುತ್ತದೆಆರೋಗ್ಯ ಪರೀಕ್ಷೆಯಿಂದ ಮಳೆ ಅಂಕಿಅಂಶಗಳವರೆಗೆ, ಕಂಪನಿಗಳ ಮಾರಾಟದವರೆಗೆ, ಮಣ್ಣಿನ ಪರೀಕ್ಷೆಯವರೆಗೆ. ಈ ಅಂಕಿಅಂಶಗಳಿಗೆ ಅರ್ಥಕೊಡುವುದು ಸಂಖ್ಯಾಶಾಸ್ತ್ರಎಂದುಧಾರವಾಡದ ಕೃಷಿ ಕಾಲೇಜಿನ ಕೃಷಿ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆಡಾ.ಆಶಾಲತಾ ಕೆ.ವಿಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯಎಸ್. ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿಐಕ್ಯೂಎಸಿ, ಸಂಖ್ಯಾಶಾಸ್ತ್ರವಿಭಾಗದ ಸಹಯೋಗದಲಿ ್ಲದಿನಾಂಕ 26-08-2025 ಸೋಮವಾರದಂದುಜರುಗಿದ‘ರಾಷ್ಟ್ರೀಯ ಸಂಖ್ಯಾಶಾಸ್ತ್ರ’ದಿನಾಚರಣೆಕಾರ್ಯಕ್ರಮದಲ್ಲಿ ಮಾತನಾಡಿದಅವರುಕೃಷಿ, ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ಅಂಕಿ ಅಂಶಗಳ ಪಾತ್ರವನ್ನುಒತ್ತಿ ಹೇಳಿದರು.ಸಂಖ್ಯಾಶಾಸ್ತ್ರವೆಂಬ ಸ್ನೇಹಿತನ ಸಹಕಾರವಿಲ್ಲದೆಯಾವುದೇ ವಿಜ್ಞಾನವೂ ಸಂಪೂರ್ಣವಾಗುವುದಿಲ್ಲ ಅಲ್ಲದೆಎಲ್ಲಾ ವಿಜ್ಞಾನಗಳಿಗೆ ಸಂಖ್ಯಾಶಾಸ್ತ್ರ ಒಳ್ಳೆಯ ಗೆಳೆಯ”.ವೈದ್ಯಕೀಯಕ್ಷೇತ್ರದಲ್ಲಿ, ಬಾಡಿ ಮಾಸ್‌ಇಂಡೆಕ್ಸ್ ಅಂಕಿಅಂಶಗಳ ಮೂಲಕ ಅಳೆಯಲಾಗುತ್ತದೆ.ಓಷಧಿಗಳ ಪ್ರಮಾಣ ನಿಗದಿಪಡಿಸುವುದೂದೊಡ್ಡ ಮಟ್ಟದ ಅಂಕಿಅಂಶಗಳ ಅಧ್ಯಯನದ ಫಲಿತಾಂಶವೆಂದುಅವರು ಹೇಳಿದರು.ಕೋವಿಡ್ ಮಹಾಮಾರಿಯ ಸಮಯದಲ್ಲಿ ಸೋಂಕಿನ ಪ್ರಮಾಣ, ಹರಡುವಿಕೆಯ ವೇಗ, ಲಸಿಕೆಗಳ ಪರಿಣಾಮ, ಸರ್ಕಾರದ ನೀತಿಗಳ ನಿರ್ಧಾರಇವೆಲ್ಲವನ್ನೂ ಸಂಖ್ಯಾಶಾಸ್ತ್ರವೇ ಮಾರ್ಗದರ್ಶಿಸಿತು ಎಂದರು.ಪ್ರತಿಯೊಂದು ವಿಜ್ಞಾನಕ್ಕೂ ಸಂಖ್ಯಾಶಾಸ್ತ್ರಜ್ಞರಅಗತ್ಯವಿದೆಎಂದುಒತ್ತಿ ಹೇಳಿದರು.ಸಂಖ್ಯಾಶಾಸ್ತ್ರವಿಲ್ಲದೆ ಸಂಶೋಧನೆಅಪೂರ್ಣ, ನಿರ್ಧಾರಗಳು ಅನಿಶ್ಚಿತ, ಪ್ರಗತಿಕಷ್ಟಎಂದುಹೇಳಿದರು.
ಅಲ್ಲದೆಕೃಷಿ ಕ್ಷೇತ್ರದಲ್ಲಿ, ಮಣ್ಣಿನಆರೋಗ್ಯವನ್ನು ಅಂಕಿಅಂಶಗಳಿಂದಲೇ ತಿಳಿದುಕೊಳ್ಳಬಹುದು.ಮಣ್ಣಿನ ಮಾದರಿಗಳನ್ನು ವಿಶ್ಲೇಷಿಸಿ ನೈಟ್ರೋಜನ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಎಷ್ಟುಕೊರತೆಯಲ್ಲಿವೆಎಂದು ನಿರ್ಧರಿಸಿ, ಸೂಕ್ತ ರಸಗೊಬ್ಬರ ಬಳಕೆಯ ಮೂಲಕ ಉತ್ಪಾದನೆ ಹೆಚ್ಚಿಸಬಹುದುಎಂದು ವಿವರಿಸಿದರು.
ಈ ಸಂದರ್ಭದಲ್ಲಿಮಹವಿದ್ಯಾಲಯದ ಪ್ರಾಚಾರ್ಯೆಡಾ.ಆರ್.ಎಂ.ಮಿರ್ಧೆಅವರು ಮಾತನಾಡಿ ನಮ್ಮಜೀನವದ ಪ್ರತಿಕ್ಷಣವೂ ಸಂಖ್ಯಾಶಾಸ್ತ್ರವು ಬಳಕೆಯಾಗುತ್ತಿದ್ದು ಅಂಕಿಸಂಖ್ಯೆಗಳು ಪ್ರಮುಖ ಪಾತ್ರವಹಿಸುತ್ತವೆ. ಶಿಕ್ಷಣ, ಸಂಶೋಧನೆ ಮತ್ತುಅಭಿವೃದ್ಧಿಯಲ್ಲಿ ಸಂಖ್ಯಾಶಾಸ್ತ್ರದ ವ್ಯಾಪಕ ಅನ್ವಯಿಕೆಗಳ ಬಗ್ಗೆ ಮಾತನಾಡಿದರುಸುಸ್ಥಿರ ಅಭಿವೃದ್ದಿ ಸಾಧಿಸುವಲ್ಲಿ ಸಂಖ್ಯಾಶಾಸ್ತ್ರಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.ನಿತ್ಯ ವ್ಯವಹಾರಿಕವಾಗಿ ಅಂಕಿಸಂಖ್ಯೆಗಳು ಅತ್ಯಂತಅವಶ್ಯಕವಾಗಿವೆಎಂದು ಹೇಳಿದರು.
ಈ ವೇಳೆಯಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದಡಾ. ಹುಚ್ಚೇಶ ಬೂದಿಹಾಳ, ಮಾತನಾಡಿದೇಶಕಂಡ ಮಹಾನ್ ಸಂಖ್ಯಾಶಾಸ್ರ್ತಜ್ಞ,ಮಹಾನ್‌ಯೋಜನಾತಜ್ಞ ಮತ್ತುಇಂಡಿಯನ್ ಸ್ಟ್ಯಾಟಿಟಿಕಲ್ ಇನಸ್ಟಿಟ್ಯೂಟ್(ಐಎಸ್‌ಐ)ಸ್ಥಾಪಕರು ಭಾರತ,ವಿಶ್ವದಲ್ಲೇ ಸಂಖ್ಯಾಶಾಸ್ತ್ರದಲ್ಲಿ ಹೆಸರು ಗಳಿಸಿರುವ ಶ್ರೇಯಸ್ಸು ಪ್ರೊ ಮಹಾಲನೋಬಿಸ್ ರವರು ಹಾಕಿಕೊಟ್ಟಅಡಿಪಾಯವೇ ನಮಗಿಂದು ವ್ಯವಹಾರಿಕವಾಗಿ ಮಾರ್ಗೋಪಾಯವಾಗಿದೆ.ನಮ್ಮ ದಿನನಿತ್ಯಜೀವನದಲ್ಲಿ ಅಂಕಿಸಂಖ್ಯೆಗಳು ಅತ್ಯವಶ್ಯಕವಾಗಿದೆಎಂದು ಹೇಳಿದರು.
ಈ ವೇಳೆಯಲ್ಲಿ ಡಾ.ಧರ್ಮಗುರು ಪ್ರಸಾದಅವರು ಮಾತನಾಡಿದರು.ನಿಜ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಖ್ಯಾಶಾಸ್ತ್ರೀಯ ಚಿಂತನೆಯ ಮಹತ್ವವನ್ನುಒತ್ತಿ ಹೇಳಿದರು.
ಈ ಸ0ದರ್ಭದಲ್ಲಿ ಪಿಯುಸಿ ಪ್ರಾಚಾರ್ಯ ಪ್ರೊ.ಸಿ. ಬಿ. ಪಾಟೀಲ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥಡಾ.ಹುಚ್ಚೇಶ ಬೂದಿಹಾಳ,ಪೊ. ಜಯಶ್ರೀ ಡಿ. ಹೊರಕೇರಿ, ಪೊ. ಶೈಲಾ ಬ ನಗನೂರ, ಪೊ.ರಾಜೇಶ್ವರಿ ಹಟಗಾರ, ಪೊ.ಶ್ರೀಧರ್ ಜೋಶಿ, ಪೊ.ತಿರುಮಲಾ ಸಾರವಾಡಸೇರಿದಂತೆ ಮಹಾವಿದ್ಯಾಲಯದ ಬೋಧಕ,ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 