ಗುಡ್ಡದ ತುದಿಯ ಗುಹೆಯಲ್ಲಿ ವಾಸವಿದ್ದ ರಷ್ಯಾದ ಮಹಿಳೆ ಮತ್ತು ಮಕ್ಕಳ ರಕ್ಷಣೆ
Rescue of Russian woman and children living in a cave on a hilltop
ಕಾರವಾರ 12: ಗೋಕರ್ಣದ ರಾಮತೀರ್ಥ ಗುಡ್ಡದ ಮೇಲೆ ಕಾಡಿನ ಪ್ರದೇಶದೊಳಗೆ ಇರುವ ಗುಹೆಯಲ್ಲಿ ವಾಸವಿದ್ದ ರಷ್ಯಾ ದೇಶದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ರಕ್ಷಣೆ ಮಾಡಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಪೊಲೀಸರು ಪ್ರವಾಸಿಗರ ರಕ್ಷಣೆ ದೃಷ್ಟಿಯಿಂದ ಗಸ್ತು ತಿರುಗುವಾಗ, ಗುಡ್ಡದ ತುದಿಯಲ್ಲಿಯಾರೋ ಅಪರಿಚಿತರು ಉಳಿದುಕೊಂಡಂತೆ ಕಂಡುಬಂತು. ಗುಡ್ಡದ ತುದಿ ತಲುಪಿದಾಗ ಅಲ್ಲಿ ಗುಹೆಯ ಸ್ವರೂಪದ ಕುಟೀರದಲ್ಲಿ ರಷ್ಯಾ ಮೂಲದ ವಿದೇಶಿ ಮಹಿಳೆ, ನಿನಾ ಕುಟಿನಾ (40 ವರ್ಷ) ತನ್ನ ಇಬ್ಬರು ಮಕ್ಕಳ ಜೊತೆ ವಾಸವಿದ್ದಳು. ನೀನಾ ಅವರ ಹೆಣ್ಣು ಮಕ್ಕಳಾದ ಕುಮಾರಿ ಪ್ರೆಮಾ(6) ಹಾಗೂ ಕುಮಾರಿ ಅಮಾ (4 ) ಜೊತೆ ಇದ್ದರು ಎಂದು ಪೋಲೀಸರು ತಿಳಿಸಿದ್ದಾರೆ.
ವಿದೇಶಿ ಮಹಿಳೆಯನ್ನು ವಿಚಾರಿಸಿದಾಗದೇವರ ಪೂಜೆ, ಧ್ಯಾನ ಮಾಡಲು ಆಸಕ್ತಿಯಿತ್ತು.ಈ ಕಾರಣಕ್ಕಾಗಿ ನೀನಾ ಗೋವಾದಿಂದ ಮಕ್ಕಳೊಂದಿಗೆ ಗೋಕರ್ಣಕ್ಕೆ ಬಂದು ಗುಡ್ಡದ ಮೇಲಿರುವ ಗುಹೆಯಲ್ಲಿ ಉಳಿದುಕೊಂಡೆ. ದೇವರ ಪೂಜೆ ಹಾಗೂ ಧ್ಯಾನ ಮಾಡಿಕೊಂಡಿದ್ದೆ ಎಂದು ಹೇಳಿದ್ದಾಳೆ.
ಗುಹೆ ಇರುವ ರಾಮತೀರ್ಥ ಗುಡ್ಡವು ಸ್ಲೈಡಿಂಗ್ ಆಗುವ ಅಪಾಯಕಾರಿ ಸ್ಥಳ. ಹಾವು ಮುಂತಾದ ಅಪಾಯಕಾರಿ ವಿಷ ಜಂತುಗಳನ್ನು ಹೊಂದಿರುವ ಅಪಾಯಕಾರಿ ಸ್ಥಳ ಎಂದು ವಿದೇಶಿ ಮಹಿಳೆಗೆ ಮನವರಿಕೆ ಮಾಡಲಾಯಿತು. ನಂತರ ನೀನಾ ಕುಟಿನಾಹಾಗೂ ಆಕೆಯ ಚಿಕ್ಕ ಮಕ್ಕಳನ್ನು ಗುಡ್ಡದ ಗುಹೆಯಿಂದ ಸುರಕ್ಷಿತವಾಗಿ ಕೆಳಗೆ ಕರೆದುಕೊಂಡು ಬಂದು, ಆಕೆಯ ಇಚ್ಛೆಯಂತೆ ಕುಮಟಾ ತಾಲೂಕಿನ ಬಂಕಿಕೋಡ್ಲು ಗ್ರಾಮದಲ್ಲಿರುವ ಎನ್. ಜಿ .ಒ . ಶಂಕರ ಪ್ರಸಾದ ಪೌಂಢೇಶನ್‌ಗೆ ಸಂಬಂದಿಸಿದ ಸರಸ್ವತಿ ಸ್ವಾಮೀಜಿ ಆಶ್ರಮಕ್ಕೆ ಮೊದಲು ಬಿಡಲಾಯಿತು. ರಷ್ಯಾದ ನೀನಾ ಆಧ್ಯಾತ್ಮಿಕತೆ ಬಗ್ಗೆ ಹೆಚ್ಚು ಒಲವಿರುವ ಮಹಿಳೆಯಾಗಿದ್ದು, ಭಾರತದಲ್ಲಿಯೇ ಉಳಿಯುವ ಉದ್ದೇಶದಿಂದ ತನ್ನ ಹಾಗೂ ತನ್ನ ಮಕ್ಕಳ ಪಾಸಪೋರ್ಟ್, ವೀಸಾ ಮಾಹಿತಿಯನ್ನು ನೀಡಲುನಿರಾಕರಿಸಿದ್ದಳು. ಕಾರಣ ಆಕೆಗೆ ಆಪ್ತ ಸಮಾಲೋಚನೆಗೆ ಒಳ ಪಡಿಸಿ ಅಗತ್ಯ ಮಾಹಿತಿ ಪಡೆಯಲು ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿ ಜು. 9 ರಿಂದ ಮೂರು ದಿನ ಪ್ರಯತ್ನಿಸಿ ಕೆಲವು ಮಾಹಿತಿ ಸಂಗ್ರಹಿಸಿದರು.
ನೀನಾ ವಿದೇಶಿ ಮಹಿಳೆಯು ತಾವು ಉಳಿದುಕೊಂಡಿದ್ದ ಕಾಡಿನೊಳಗಿರುವ ಗುಹೆಯಲ್ಲಿ ಅಥವಾ ಸಮೀಪದ ಕಾಡಿನಲ್ಲಿ ತಮ್ಮ ಪಾಸಪೋರ್ಟ್, ವೀಸಾ ಎಲ್ಲಿಯೋ ಬಿದ್ದಿರಬಹುದು ಎಂದು ಪೊಲೀಸ್‌ಅಧಿಕಾರಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾಳೆ. ನಂತರ ಅವರನ್ನು ಅವರ ಸುರಕ್ಷತೆ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಾಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಸುರಕ್ಷಿತವಾಗಿ ಇಡಲಾಯಿತು.
ಪಾಸ್ ಪೋರ್ಟ್ ಗಾಗಿ ಶೋಧ: ಗೋಕರ್ಣ ಠಾಣೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರು ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಯವರೊಂದಿಗೆ ಕೂಡಿ ಗುಹೆಯ ಸುತ್ತ ಮುತ್ತ ಶೋಧನಾ ಕಾರ್ಯಾಚರಣೆ ಮಾಡಲಾಗಿ ಸದರಿ ವಿದೇಶಿ ಮಹಿಳೆಯ ಪಾಸ್‌ಪೋರ್ಟ್ ವೀಸಾ ಸಿಕ್ಕಿದ್ದು ಪರೀಶೀಲಿಸಲಾಗಿ ವೀಸಾ ಅವಧಿ 17 ಎಪ್ರಿಲ್ 2017ಕ್ಕೆ ಮುಗಿದಿದೆ. ಮಹಿಳೆ ಮತ್ತು ಮಕ್ಕಳನ್ನು ರಷ್ಯಾಕ್ಕೆ ಕಳಿಸಲಾಗುತ್ತಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 