ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರಕ್ಕೆ ದೇಣಿಗೆ
Donation to Mallikarjuna Shivayogi Temple
ಜಮಖಂಡಿ ೨೪: ತಾಲ್ಲೂಕಿನ ಹುಲ್ಯಾಳ ಗುರುದೇವಾಶ್ರಮದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರಕ್ಕೆ ಮರೇಗುದ್ದಿ ಗ್ರಾಮದ ಸಮಸ್ತ ಗ್ರಾಮಸ್ಥರ ವತಿಯಿಂದ ರೂ.೪,೧೧,೦೦೦/- ದೇಣಿಗೆಯನ್ನು ಹರ್ಷಾನಂದ ಮಹಾಸ್ವಾಮಿಗಳಿಗೆ ಸಮರ್ಪಿಸಲಾಯಿತು.
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿಗಳ ಸಂಕಲ್ಪದAತೆ ಅವರ ಗುರುಗಳಾದ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸಿದ್ಧೇಶ್ವರ ಶ್ರೀಗಳ ಸಂಕಲ್ಪ ಪೂರೈಕೆಗೆ ಅಳಿಲು ಸೇವೆ ಸಲ್ಲಿಸುವ ದೃಷ್ಟಿಯಿಂದ ಗ್ರಾಮಸ್ಥರಿಂದ ಕೈಲಾದ ವಂತಿಗೆ ಸಂಗ್ರಹಿಸಿ ಹರ್ಷಾನಂದ ಶ್ರೀಗಳಿಗೆ ಸಮರ್ಪಿಸಿದ್ದಾರೆ.
ಗ್ರಾಮದ ಹಿರಿಯರು ತಮ್ಮ ವಂತಿಗೆ ಹಣವನ್ನು ಮೊದಲು ನೀಡಿ ನಂತರ ಗ್ರಾಮಸ್ಥರಿಂದ ವಂತಿಗೆ ಹಣವನ್ನು ಸಂಗ್ರಹಿಸಲು ಮುಂದಾಗಿದ್ದು ವಿಶೇಷವಾಗಿತ್ತು. ವಯಸ್ಸಾದ ಹಿರಿಯರು ತೋಟದ ಮನೆಗಳಿಗೆ ತೆರಳಿ ವಂತಿಗೆ ಸಂಗ್ರಹಿಸಿದ್ದು ಮತ್ತೊಂದು ವಿಶೇಷತೆಯಾಗಿದೆ. ಇಳಿ ವಯಸ್ಸಿನಲ್ಲೂ ಆರೋಗ್ಯವಂತರಾಗಿರಲು ಸಿದ್ಧೇಶ್ವರ ಮಹಾಸ್ವಾಮಿಗಳ ಆಶೀರ್ವಾದವೆ ಕಾರಣ ಎಂದು ವಂತಿಗೆ ಸಂಗ್ರಹಿಸಿದ ಹಿರಿಯರು ಮಾತನಾಡಿಕೊಳ್ಳುತ್ತಿದ್ದರು. ವಂತಿಗೆ ಹಣವನ್ನು ಸಮರ್ಪಿಸಿದ ಧನ್ಯತಾಭಾವ ಹಿರಿಯರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಮಲ್ಲಪ್ಪ ಅಥಣಿ, ಬಸಪ್ಪ ಬಾರಿಕಾಯಿ, ಸೋಮಪ್ಪ ಹವಾಲ್ದಾರ, ಹನಮಂತ ಗುಡಿ, ಹನಮಂತ ಕನಕನವರ, ರಾಚಪ್ಪ ಹುನ್ನೂರ, ಹನಮಂತ ದಾಶ್ಯಾಳ(ಘಟ್ನಟ್ಟಿ), ಸಂಗನಗೌಡ ಪಾಟೀಲ, ಅಡಿವೆಪ್ಪ ಗಸ್ತಿ, ರಾಚಯ್ಯ ಮಠಪತಿ ಇತರರು ಗ್ರಾಮಸ್ಥರಿಂದ ವಂತಿಗೆ ಸಂಗ್ರಹಿಸಿದ ಹಿರಿಯರಾಗಿದ್ದಾರೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 