ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ಆರೋಪಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ

ಲೋಕದರ್ಶನ ವರದಿ

ಮೋಳೆ, ಜುಲೈ  10:  ಬಂಗಾರು ಪೇಟೆ ತಾಲೂಕಾ ತಹಶೀಲ್ದಾರರಾಗಿದ್ದ ಬಿ.ಕೆ. ಚಂದ್ರಮೌಳೇಶ್ವರ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಸಕರ್ಾರಿ ಅಧಿಕಾರಿ ಹಾಗೂ ನೌಕರರಿಗೆ ಅಗತ್ಯ ರಕ್ಷಣೆ ನೀಡುವಂತೆ ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘ ಶಾಖೆ ಕಾಗವಾಡ ವತಿಯಿಂದ ಕಾಗವಾಡ ತಹಶೀಲ್ದಾರರರಿಗೆ ಮನವಿ ಪತ್ರ ಅಪರ್ಿಸಿ ಸಕರ್ಾರವನ್ನು ಒತ್ತಾಯಿಸಲಾಯಿತು. 

 ದಿ. 10 ರಂದು ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಾಗವಾಡ ಅಧ್ಯಕ್ಷ ಜಿ.ಎಂ. ಸಡ್ಡಿ ಅವರ ನೇತೃತ್ವದಲ್ಲಿ ಮಾನ್ಯ ತಹಶೀಲ್ದಾರರಾದ ಪರಿಮಳಾ ದೇಶಪಾಂಡೆಯವರಿಗೆ ಮನವಿ ಪತ್ರ ಅಪರ್ಿಸಲಾಯಿತು. ಮನವಿ ಪತ್ರ ಅಪರ್ಿಸಿ ಜಿ.ಎಂ. ಸಡ್ಡಿ ಮಾತನಾಡಿ ದಿ. 9ರಂದು ಕೋಲಾರ ಜಿಲ್ಲೆ ಬಂಗಾರು ಪೇಟೆ ತಾಲೂಕು ತಹಶೀಲ್ದಾರರಾಗಿದ್ದ ಬಿ.ಕೆ.ಚಂದ್ರಮೌಳೇಶ್ವರ ಅವರು ತೊಪ್ಪನಹಳ್ಳಿ ಗ್ರಾಮದಲ್ಲಿ ಜಮೀನು ವ್ಯಾಜ್ಯದ ಸಂಬಂಧ ಸವರ್ೇ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವರ ಮೇಲೆ ಆರೋಪಿಯು ಚಾಕುವಿನಿಂದ ಇರಿದು ಹತ್ಯೆಗೈದಿರುವ ಕೃತ್ಯವನ್ನು ಸಮಸ್ತ ರಾಜ್ಯ ಸಕರ್ಾರಿ ನೌಕರರು ಹಾಗೂ ಕನರ್ಾಟಕ ರಾಜ್ಯ ನೌಕರರ ಸಂಘವು ತೀವ್ರವಾಗಿ ಖಂಡಿಸುತ್ತದೆ. 

ರಾಜ್ಯಾದ್ಯಂತ ಸಕರ್ಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿರುವುದು ಖಂಡನೀಯವಾಗಿದೆ. ಕಂದಾಯ, ಭೂಮಾಪನ, ಗ್ರಾಮಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಮೇಲೆ ಹಲ್ಲೆ ಹಾಗೂ ದೌರ್ಜನ್ಯಗಳು ನಡೆಯುತ್ತಿವೆ. 

ಇಂತಹ ಪರಿಸ್ಥಿತಿಗಳು ಮರುಕಳಿಸದಂತೆ ಕಠಿಣ ಕಾನೂನುಗಳನ್ನು ರಾಜ್ಯ ಸಕರ್ಾರ ರೂಪಿಸುವುದು ಅತ್ಯಂತ ಅವಶ್ಯಕವಾಗಿದೆ.  ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.

ಇದೇ ಸಮಯದಲ್ಲಿ ಹತ್ಯೆಗೊಳಗಾದ ಬಂಗಾರುಪೇಟೆ ತಾಲೂಕು ತಹಶೀಲ್ದಾರರಾಗಿದ್ದ ಬಿ.ಕೆ. ಚಂದ್ರಮೌಳೇಶ್ವರ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.

ಈ ಸಮಯದಲ್ಲಿ ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಜಿ.ಎಂ.ಸಡ್ಡಿ, ಎಂ.ಎನ್.ಕಲ್ಲುರ, ಬಿ.ಬಿ.ಬೋರಗಲ್, ಕೆ.ಕೆ.ಕುಲಕಣರ್ಿ, ಎ.ಡಿ.ಖಾತೆದಾರ, ಎಂ.ಜಿ.ಸಂಕಪಾಳ, ಎಲ್.ವಾಯ್.ಚೌಗಲಾ, ಎಂ.ಎಲ್.ಹವಳೆಗೋಳ, ಎಸ್.ಎಸ್.ಕೋಳಿ, ಕೆ.ಎನ್.ಗಾಣಿಗೇರ, ಗೌತಮ ಶಿರಗಾಂವೆ, ಗಂಗಾಧರ ಗುಗ್ಗರಿ, ಶಿವಕುಮಾರ ಹತರ್ಿ ಸೇರಿದಂತೆ ಅನೇಕ ಪದಾಧಿಕಾರಿಗಳು, ಸದಸ್ಯರು ಇದ್ದರು.