ರಾಮದುರ್ಗ 12: ಕಬ್ಬು ಬೆಳೆಗಾರರು ಸಮಸ್ಯೆಗಳ ಸುಳಿಯಲ್ಲಿ ಕಾಲ ಕಳೆಯುವಂತಾಗಿದ್ದು, ಸರಕಾರ ಕಬ್ಬು ಬೆಳಗಾರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕಬ್ಬು ಬೆಳೆಗಾರರ ಸಂಘದ ತಾಲೂಕಾ ಘಟಕದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
2016-17 ನೇ ಸಾಲಿನ ಬಾಕಿ ಪ್ರತಿ ಟನ್ನಿಗೆ 305 ರೂ ಯಂತೆ ನೀಡಬೇಕಿದ್ದು, ಇಲ್ಲಿಯವರೆಗೂ ಕಾಖರ್ಾನೆಯವರು ಪಾವತಿ ಮಾಡಿಲ್ಲ. ತಾಲೂಕಿನ ಖಾನಪೇಠದ ಇ.ಐ.ಡಿ ಪ್ಯಾರಿ ಶುಗರ್ಸ್ ಹಾಗೂ ಉದಪುಡಿ ಶಿವಸಾಗರ ಶುಗರ್ಸ್ ಕಾಖರ್ಾನೆಯವರು ರೈತರ ಬಾಕಿ ಹಣ ನೀಡದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸೆ.16 ರ ಒಳಗಾಗಿ ರೈತರ ಎಲ್ಲ ಕಬ್ಬಿನ ಬಾಕಿ ಬಿಲ್ಲ ಪಾವತಿಯಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು. ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ರೈತರು ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ. ಜೊತೆಗೆ ಸೆ.18 ರಂದು ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ರೈತರ ಬದುಕು ಮತ್ತಷ್ಟು ದುಸ್ಥರವಾಗಿದೆ. ಉಭಯ ಸರಕಾರಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಫಸಲಭೀಮಾ ಹಣ ರೈತರಿಗೆ ಸಮರ್ಪಕವಾಗಿ ವಿತರಣೆಯಾಗಿಲ್ಲ. ಶೀಘ್ರ ಹಂಚಿಕೆಗೆ ಕ್ರಮ ತೆಗೆದುಕೊಳ್ಳಬೇಕು. ಎಂದು ಅವರು ಮನವಿ ಮೂಲಕ ಉಭಯ ಸರಕಾರಗಳನ್ನು ಒತ್ತಾಯಿಸಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ಶಂಕರಗೌಡ ಹೊಸಗೌಡ್ರ, ಮುಖಂಡರಾದ ಎಸ್.ಬಿ.ಸಿದ್ನಾಳ, ಶಾಸಪ್ಪ ನಾವಿ, ಮಾರುತಿ ನಲವಡೆ, ಮಲ್ಲಪ್ಪ ಮನಿಹಾಳ, ರುದ್ರಗೌಡ ಪಾಟೀಲ, ಪಂಚಪ್ಪ ಗಂಗನ್ನವರ, ಮಾರುತಿ ಕಿತ್ತೂರ, ಮುತ್ತಪ್ಪ ದನಕಾರ ಸೇರಿದಂತೆ ಇತರರಿದ್ದರು.