ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಬೆಳಗಾವಿ 22 : ಸೌಭಾಗ್ಯಲಕ್ಷಿ ಸಕ್ಕರೆ ಕಾಖರ್ಾನೆ ಹಿರೇನಂದಿ, ಮಲಪ್ರಭಾ ಸಕ್ಕರೆ ಕಾಖರ್ಾನೆ ಎಂಕೆ ಹುಬ್ಬಳ್ಳಿ, ಶಿವಸಾಗರ ಸಕ್ಕರೆ ಕಾಖರ್ಾನೆ ಉದಪುಡಿ ಇವರಿಂದ ಬರಬೇಕಾದ ಬಾಕಿ ಹಣ ಕೊಡಿಸಬೇಕೆಂದು ಭಾರತೀಯ ಕೃಷಿಕ ಸಮಾಜ  ರೈತರ ಸಂಘಟನೆಯ ನೆತೃತ್ವದಲ್ಲಿ ಪ್ರತಿಭಟನೆ ನಡೆಯಿತು.

                ಸೋಮವಾರ ನಗರದ ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟಿಸುತ್ತ ಖಾನಾಪೂರ ತಾಲೂಕಿನ ಇಟಗಿ ಏತ ನೀರಾವರಿ ಯೋಜನೆಯನ್ನು ಕೂಡಲೇ ತಯಾರಿಸಬೇಕು,2016-17 ಸಾಲಿನ ಬೆಳೆ ನಷ್ಟ ಪರಿಹಾರ ಕೂಡಲೇ ವಿತರಿಸಬೇಕು,ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 50/-ದರ ನಿಗದಿ ಪಡಿಸಬೇಕು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಖರೀದಿಸುವ ಜಾಗಗಳ ಖರೀದಿಗೆ ಕಾನೂನು ಸರಳೀಕರಣ ಮಾಡಬೇಕು ಮತ್ತು ಪಂಚಾಯತ ಆಸ್ತಿ ದಾಖಲಾತಿಯಲ್ಲಿ ನೋಂದನಿಗೆ ಅವಕಾಶ ಕಲ್ಪಿಸಿ ಕೊಡಬೇಕು,2013-14 ರಿಂದ ಇಲ್ಲಿಯವರೆಗೆ ಕಬ್ಬು ಬೆಳೆಗಾರರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಸಕರ್ಾರ ಕೂಡಲೇ ಹಿಂಪಡೆಯಬೇಕು, ವನ್ಯ ಪ್ರಾಣಿಗಳ ಹಾವಳಿಯಿಳಿಂದ ಉಂಟಾದ ಬೆಳೆನಷ್ಟ ಪರಿಹಾರವನ್ನು ವದಗಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

                ಸಂದರ್ಭದಲ್ಲಿ ಸಿದಗೌಡ ಮೋದಗಿ, ಜಯಪ್ಪ ಬಸರಕೋಡ, ದುಂಡಯ್ಯ ಪೂಜಾರ, ನಾಗರಾಜ ಪೂಜಾರ,ಮಂಜುನಾಥ ಸಂಪಗಾವ, ಸುನೀಲ ಹೊರಗೊಪ್ಪ, ಪ್ರಭು ಶಿಲಿ, ಶ್ರೀಧರ ಬಾಫನಾ, ಸದಾನಂದ ಸವದತ್ತಿ,ಗಂಗಪ್ಪ ಸುಣಗಾರ,ದೊಡ್ಡಯ್ಯಾ ಮಠಪತಿ, ಮುಂತಾದವರು ಉಪಸ್ಥಿತರಿದ್ದರು.