ಲೋಕದರ್ಶನ ವರದಿ
ಬೈಲಹೊಂಗಲ 19: ಹಿರೇಬಾಗೇವಾಡಿ-ಬೈಲಹೊಂಗಲ-ಸವದತ್ತಿ ಗ್ರಾಮೀಣ ಪ್ರದೇಶಕ್ಕೆ ತೆರಳುವ ರಸ್ತೆಗೆ ಟೋಲ ಸಂಗ್ರಹಕ್ಕಾಗಿ ಸರಕಾರ ನಿಗದಿಗೊಳಿಸಿರವುದನ್ನು ಜನಸಾಮನ್ಯರ ಹಿತದೃಷ್ಠಿಯಿಂದ ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾ ಭಾಜಪಾ ಗ್ರಾಮೀಣ ಅಧ್ಯಕ್ಷ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ಬೆಂಗಳೂರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ನೀಡಿ ಮನವಿ ಅಪರ್ಿಸಿದ್ದಾರೆ.
ಬೈಲಹೊಂಗಲ-ಸವದತ್ತಿ-ಕಿತ್ತೂರು-ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ ಒಳಪಡುವ ಈ ರಸ್ತೆಯಲ್ಲಿ ರೈತರ ಬೆಳೆದ ಬೆಳೆಗಳನ್ನು ಸಾಗಾಣಿಕೆ ಮಾಡುತ್ತಾರೆ. ಅಲ್ಲದೇ ಈ ಭಾಗದಲ್ಲಿ ರೈತಾಪಿ ಜನಾಂಗವೇ ಹೆಚ್ಚಿನ ಪ್ರಮಾಣದಲ್ಲಿ ಈ ರಸ್ತೆ ಅನುಕೂಲವಾಗಿದೆ. ಸರಕಾರ ಟೋಲ ಸಂಗ್ರಹಕ್ಕೆ ಮುಂದಾದರೆ ರೈತರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಅಲ್ಲದೇ ಈ ವಿಷಯವನ್ನು ಮನಗಂಡು ಈ ಭಾಗದ ರೈತ ಸಂಘ, ಕನ್ನಡಪರ ಸಂಘಟನೆ ಈಗಾಗಲೇ ಹೋರಾಟ ಮಾಡಿ ಸರಕಾರ ಗಮನ ಸೆಳೆದ ಹಿನ್ನಲೆಯಲ್ಲಿ ಪ್ರಾರಂಭವಾಗಬೇಕಾಗಿದ್ದ ಟೋಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಸರಕಾರ ಇದನ್ನು ಕೂಡಲೇ ಗಂಭೀರವಾಗಿ ಪರಿಗಣಿಸಿ ಟೋಲನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕೆಂದು ಮನವಿ ಮಾಡಿದರು.
ಈ ಕುರಿತು ಕೇಂದ್ರದ ರಾಜ್ಯ ರೇಲ್ವೇ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ನೀಡಿದ್ದು ಈ ರಸ್ತೆಯನ್ನು ಕೆ.ಆರ್.ಡಿ.ಸಿ.ಎಲ್. ನಿಮರ್ಾಣ ಮಾಡಿದ್ದು ಅವರಿಗೆ ಕೇಂದ್ರದಿಂದ 40 ಕೋಟಿ ಬಿಡುಗಡೆಗೊಳಿಸಲು ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಅವರ ಮೇಲೆ ಒತ್ತಡ ಹೇರಬೇಕೆಂದು ಸಚಿವ ಅಂಗಡಿ ಅವರಲ್ಲಿ ಒತ್ತಾಯ ಪಡಿಸಿದ್ದಾರೆ.
ಸದ್ಯದಲ್ಲಿ ರೈತ ಸಂಘಟನೆ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ಮುಖಂಡರ ನಿಯೋಗದೊಂದಿಗೆ ಉಪಮುಖ್ಯಮಂತ್ರಿ, ಲೋಕೋಯೋಗಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ರಾಜ್ಯ ಸರಕಾರ ಭರಿಸಬೇಕಾದ 40 ಕೋಟಿ ರೂ.ಗಳನ್ನು ಭರಿಸುವಂತೆ ಮನವಿ ಮಾಡಲಾಗವುದು.
ಮುಖ್ಯಮಂತ್ರಿಗಳು ಮನವಿ ಸ್ಪಂದಿಸಿ ಈ ಕುರಿತು ಕೂಲಂಕುಷವಾಗಿ ಚಚರ್ಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ.