ನೇಕಾರರಿಗೆ ಬರುತ್ತಿರುವ ವಿದ್ಯುತ ಬಿಲ್‌ನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಮನವಿ

 ನೇಕಾರರಿಗೆ ಬರುತ್ತಿರುವ ವಿದ್ಯುತ ಬಿಲ್‌ನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಮನವಿ  Request to the authorities to correct the electricity bill being paid by the weavers

ಲೋಕದರ್ಶನ ವರದಿ 

ಮಹಾಲಿಂಗಪುರ 25 : ರಾಜ್ಯದ ವಿದ್ಯುತ ಚಾಲಿತ ಮಗ್ಗದ ನೇಕಾರರಿಗೆ ಉಚಿತ ವಿದ್ಯುತ್ ಜಾರಿಯಲ್ಲಿದ್ದರು ಕೂಡಾ 2-3 ತಿಂಗಳುಗಳಿಂದ ನೇಕಾರರಿಗೆ ಬಿಲ್ ಬಂದಿದ್ದು ಅದನ್ನು ಕೂಡಲೆ ಸರಿಪಡಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ಸದಸ್ಯರು ಕೆ.ಇ.ಬಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣ ಮರಿಕಟ್ಟಿಯವರಿಗೆ ಮನವಿ ನೀಡಿದರು.  

  ಈ ಸಂದರ್ಭದಲ್ಲಿ ಮಾತನಾಡಿದ ನೇಕಾರ ಸೇವಾಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ರಾಜ್ಯಾದ್ಯಂತ ಲಕ್ಷಾಂತರ ನೇಕಾರರು ವಿದ್ಯುತ ಚಾಲಿತ ಮಗ್ಗದ ನೇಯುತ್ತಿದ್ದು. ಹತ್ತಾರು ವರ್ಷಗಳಿಂದ ಸಂಘಟನೆಯ ಹೋರಾಟದ ಮೂಲಕ ಹತ್ತಾರು ಸಾವೀರ ಜನರು ಸೇರಿ ಸರ್ಕಾರದ ಮೇಲೆ ಪ್ರತಿಹಂತದಲ್ಲೂ ನಮ್ಮ ಹಕ್ಕನ್ನು ಮಂಡಿಸಿ ಕಳೆದ 2 ವರ್ಷಗಳ ಹಿಂದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರು ಉಚಿತ ವಿದ್ಯುತನ್ನು ಘೋಷಿಸಿದ್ದಾರೆ. ಕಾರಣ ಇಲ್ಲಿಯ ವರೆಗೆ ಬಿಲ್ ಗಳನ್ನು ಕೊಡುತ್ತಿದ್ದು. ಆದರೆ ಈಗ ಹೆಸ್ಕಾಂನಿಂದ ನೇಕಾರರಿಗೆ ಹಣ ಸಂದಾಯ ಮಾಡುವಂತೆ ಬಿಲ್ ಗಳು ಬಂದಿವೆ, ಕಾರಣ ನಾವು ಸರ್ಕಾರದ ಆದೇಶ ಯಾವುದೆ ತರಹದ ಬಿಲ್ ಸಂದಾಯ ಮಾಡುವುದು ಇರುವುದಿಲ್ಲ.

ಕಾರಣ ಹೆಸ್ಕಾಂ ನಲ್ಲಿ ಆಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಿ ಬಿಲ್ ಬುರುವಂತೆ ಮಾಡಕೊಡಬೇಕು, ಸರ್ಕಾರ ಈ ಕುರಿತು ಎಲ್ಲ ಹೆಸ್ಕಾಂಗಳಿಗೆ ಮಾರ್ಗಸೂಚಿ ನೀಡಬೇಕು ಎಂದು ಒತ್ತಾಯಿಸಿದರು.  ಈ ಸಂದರ್ಭದಲ್ಲಿ ರಾಜೇಂದ್ರ ಮಿರ್ಜಿ, ಸಂಜೀವ ಜಿಡ್ಡಿಮನಿ, ರಾಜೀವ ಹನಗಂಡಿ, ರಾಜು ಕುಕ್ಕುಗೋಳ, ಸಿದ್ರಾಯ ಅಂಬಿ, ಸಂಗಪ್ಪ ಹಿಡಕಲ್, ಮಲ್ಲಪ್ಪ ಹಳ್ಳಿ, ಗಿರಿಮಲ್ಲಪ್ಪ ಬಾಗೆವಾಡಿ, ಆನಂದ ಪಂಕಿ ಸೇರಿದಂತೆ ಹಲವರು ಇದ್ದರು.  ಮಹಾಲಿಂಗಪುರ : ಸ್ಥಳೀಯ ನೇಕಾರರ ಸಂಘದ ಸದಸ್ಯರು ತಮಗೆ ವಿದ್ಯುತ ಬಿಲ್ಲ ಕೊಡಬೇಕೆಂದು ಒತ್ತಾಯಿಸಿ ಹೆಸ್ಕಾಂ ಎ.ಇ.ಇ ವೀರಣ್ಣ ಮರಿಕಟ್ಟಿಯವರಿಗೆ ಮನವಿ ನೀಡಿದರು.