ಜಮಖಂಡಿ, 23; ತಾಲೂಕಿನ ಸಾವಳಗಿ ಗ್ರಾಮದಲ್ಲಿ ವಿದ್ಯಾರ್ಥಿಗಳು, ಗ್ರಾಮದ ಮುಖಂಡರು ಸೇರಿಕೊಂಡು ಜಿಲ್ಲೆಯ ವಿಶ್ವ ವಿದ್ಯಾಲಯು ಜಮಖಂಡಿ ನಗರದಲ್ಲಿ ನಿರ್ಮಾಣಗೊಂಡಿದೆ ಅದನ್ನು ಮುಚ್ಚಬಾರದು. ಜಿಲ್ಲೆಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿ ನಾಡ ಕಾರ್ಯಾಲಯ ಉಪ ತಹಶೀಲ್ದಾರ್ ವೈ, ಎಚ್, ದ್ರಾಕ್ಷಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಸಾವಳಗಿ ಗ್ರಾಮದ ನಾಡ ಕಾರ್ಯಾಲಯ ಆವರಣದಲ್ಲಿ ಮನವಿ ಸಲಿಸಿದ್ದ ಅವರು, ನಮ್ಮ ವಿವಿ ನಮ್ಮ ಹಕ್ಕು’, ‘ಬಾಗಲಕೋಟೆ ವಿ.ವಿ ಉಳಿವಿಗಾಗಿ ನಮ್ಮ ಹೋರಾಟ’ ಎಂದು ಘೋಷಣೆಗಳನ್ನು ಕೂಗಿದರು.ನಂತರ ಮಾತನಾಡಿದ ಅವರು, ಕರ್ನಾಟಕ ಸರ್ಕಾರದಲ್ಲಿ ಚರ್ಚೆಯಲ್ಲಿರುವ 9 ವಿಶ್ವ ವಿದ್ಯಾಲಯ ಮುಚ್ಚಲು ಮುಂದಾಗಿದ್ದೆ ಅದರಲ್ಲಿ ಬಾಗಲಕೋಟೆ ವಿಶ್ವ ವಿದ್ಯಾಲಯ ಒಂದಾಗಿದೆ ಇದನ್ನು ಮುಚ್ಚಲು ಹುನ್ನಾರ ನಡೆದಿದೆ. ರಾಜ್ಯದಲ್ಲಿರುವ ಹೊಸ ವಿಶ್ವ ವಿದ್ಯಾಲಯದಿಂದ ಪ್ರತಿ ಜಿಲ್ಲೆಯ ಬಡ ಕೂಲಿ ಕಾರ್ಮಿಕರ ವರ್ಗದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ಪಡೆಯುವ ವರದಾನವಾಗಿತ್ತು, ಆದರೆ ರಾಜ್ಯ ಸರಕಾರದ ನಡೆ ವಿಶ್ವ ವಿದ್ಯಾಲಯವನ್ನು ಮುಚ್ಚುವ ಹುನ್ನಾರದಿಂದ ಶಿಕ್ಷಣಕ್ಕೆ ಕೊಡಲಿ ಪೆಟ್ಟಾಗಿ ಪರಿಣಮಿಸಿದೆ, ಇದನ್ನು ವಿಶ್ವ ವಿದ್ಯಾಲಯ ಹೋರಾಟ ಮತ್ತು ಅಭಿವೃದ್ಧಿ ಸಮಿತಿ ಜಮಖಂಡಿ ವಿದ್ಯಾರ್ಥಿಗಳ ಸಮಿತಿ ಸಾವಳಗಿ, ಗ್ರಾಮದ ಶಿಕ್ಷಣ ಪ್ರೇಮಿಗಳು ಸೇರಿದಂತೆ ಅನೇಕರು ವಿಶ್ವ ವಿದ್ಯಾಲಯ ಮುಚ್ಚಿದರೆ ಮುಂಬರುವ ದಿನಗಳಲ್ಲಿ ವಿಶ್ವ ವಿದ್ಯಾಲಯದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.
ವಿದ್ಯಾರ್ಥಿ ಪರಶುರಾಮ ಯಮಗಾರ, ಗ್ರಾಮದ ಮುಖಂಡ ಅಪ್ಪುಗೌಡ ಪಾಟೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಉಮೇಶ ಆರ್. ಜಾಧವ, ರಾಜುಗೌಡ ಪಾಟೀಲ, ರಾಜು ಮೋಹಿತೆ, ಮಹಾದೇವ ಮಾಳಿ, ಮಲ್ಲು ನ್ಯಾಮಗೌಡ, ಶಂಕರ ಐನಾಪೂರ, ಲಕ್ಷ್ಮಣ ಪುಂಡೆ, ಅಣ್ಣಪ್ಪ ಮೋಹಿತೆ, ಕಾಲೇಜು ವಿದ್ಯಾರ್ಥಿಗಳಾದ ಶ್ರವಣ ಜಮಖಂಡಿ ಅರುಣ ಹುನ್ನೂರ, ಮುರುಗೇಂದ್ರ ಬಿರಾದಾರ, ಅಭಿಷೇಕ ಮೂಡಲಗಿ, ರಾಜಕುಮಾರ ಚೌರಿ, ಸಿದ್ಧಾರ್ಥ ತಳಕೇರಿ,
ವಿದ್ಯಾರ್ಥಿನಿಯರಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.