ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಛೇರಿ ಮಂಜೂರ ಮಾಡಲು ಮನವಿ

Request to sanction an office for the Scheduled Castes Welfare Department

ವಿಜಯಪುರ 22: ವಿಜಯಪುರ ಜಿಲ್ಲೆಗೆ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಛೇರಿ ಮಂಜೂರ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದಿಂದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೋಳಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಡಿ.ರಂದೀಪ ಅವರಿಗೆ ಬೆಂಗಳೂರಿನ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ 11 ತಾಲ್ಲೂಕುಗಳನ್ನು ಹೊಂದಿದ್ದು, 8 ಮತಕ್ಷೇತ್ರವಿದ್ದು ಪರಿಶಿಷ್ಟ ಪಂಗಡ ಹಿಂದೂ ವಾಲ್ಮೀಕಿ ಜನಾಂಗದವರು 8 ಮತಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾಗಿದ್ದು ಇವರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಈ ಜನಾಂಗದ ಶೋಷಿತ ಜನಾಂಗದವರಾಗಿದ್ದು, ಕಾರಣ ಇವರಿಗೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಶೈಕ್ಷಣಿಕವಾಗಿ ಓದೋಗಿಕವಾಗಿ ವಾಲ್ಮೀಕಿ ಜನಾಂಗದವರಾಗಿದ್ದು, ದಯಾಳುಗಳಾದ ತಮಗೆ ವಿಜಯಪುರ ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಮುತುವರ್ಜಿ ವಹಿಸಿ ಈ ವಾಲ್ಮೀಕಿ ಜನಾಂಗದ ಅಭಿವೃದ್ಧಿಗಾಗಿ ತಾವುಗಳು ಕಛೇರಿಯನ್ನು ಮಂಜೂರ ಮಾಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. 

ಅದರಂತೆ ಮನವಿ ಸ್ವೀಕರಿಸಿದ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ.ರಂದೀಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು. 

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಟಗಿ, ಲಿಂಗಯ್ಯ ನಾಯಕ, ನಿಂಗಪ್ಪ ದಿವಟಗಿ, ರಾಮಣ್ಣಾ ಪೂಜಾರಿ ಹಾಗೂ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಜಕುಮಾರ, ವ್ಯವಸ್ಥಾಪಕ ಪ್ರಧಾನ ನಿರ್ದೇಶಕ ಷಡಕ್ಷರಿ ಸೇರಿದಂತೆ ಇನ್ನಿತರರು ಇದ್ದರು.