ಲೋಕದರ್ಶನ ವರದಿ
ಬೆಳಗಾವಿ: ದಾದಬಾನಟ್ಟಿಯ ಶ್ರೀ ಷಡಕ್ಷರಿ ಸಿದ್ದರಾಮೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸೊಸೈಟಿ ಠೇವಣಿ ಹಣ ಮರಳಿಸದೇ ವಂಚಿಸಿದ್ದು, ನ್ಯಾಯ ಒದಗಿಸುವಂತೆ ಗ್ರಾಹಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಸೋಮವಾರ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಹುಕ್ಕೇರಿ ತಾಲೂಕಿನ ದಾದಬಾನಟ್ಟಿಯ ಶ್ರೀ ಷಡಕ್ಷರಿ ಸಿದ್ದರಾಮೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸೊಸೈಟಿ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಠೇವಣಿ ಇಟ್ಟುಕೊಂಡಿದ್ದಾರೆ. ಆದರೆ ಅವಧಿಪೂರ್ಣ ಆದರೂ ಠೇವಣಿ ಹಣ, ಬಡ್ಡಿ ಹಣ ನೀಡದೇ ವಂಚನೆ ಮಾಡಿದ್ದಾರೆ. ನಮ್ಮ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸುತಗಟ್ಟಿಯಲ್ಲಿ 6 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಸೊಸೈಟಿ ಅಧ್ಯಕ್ಷ-ಉಪಾಧ್ಯಕ್ಷರು ವಯಕ್ತಿಕವಾಗಿ ಬಳಕೆ ಮಾಡುತ್ತಿದ್ದಾರೆ. ಸರಿಯಾಗಿ ಆಡಿಟ್ ಸಹ ಮಾಡಿಲ್ಲ. ಗ್ರಾಮದಲ್ಲಿ 1.5 ಎಕರೆ ಜಮೀನು ಖರೀದಿಸಿ ಪ್ಲಾಟ್ ಮಾಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ಸೊಸೈಟಿ ಆಸ್ತಿ ವಶಕ್ಕೆ ಪಡೆದು ನಮ್ಮ ಹಣ ಮರಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಹಕರು ಮನವಿ ಮಾಡಿದರು. ಎಸ್ಪಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಗ್ರಾಹಕರು ನಮ್ಮ ಹಣವನ್ನು ಶ್ರೀ ಮಹಾಲಕ್ಷ್ಮೀ ಮಲ್ಟಿಪರ್ಪಜ್ ಕ್ರೆಡಿಟ್ ಸೊಸೈಟಿಗೆ ವಗರ್ಾಯಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ.
ಸರಿಯಾಗಿ ಅಡಿಟ್ ಕೂಡ ಮಾಡಿಸಿಲ್ಲ. ಅಲ್ಲದೇ ಬೇಕಾ ಬಿಟ್ಟಿಯಾಗಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು. ಬಿ.ಎಮ್.ಓಬಣ್ಣವರ, ಎಸ್.ಬಿ.ಕಣಕಿಕೋಡಿ ಸೇರಿದಂತೆ ಇನ್ನು ಹಲವು ಗ್ರಾಹಕರು ಉಪಸ್ಥಿತರಿದ್ದರು.