ದಲಿತ ಕೆರೆಗೆ ಕುಡಿಯುವ ನೀರು ಒದಗಿಸಲು ಆಗ್ರಹಿಸಿ ಮನವಿ

Request to provide drinking water to Dalit lake

ಮುದ್ದೇಬಿಹಾಳ 07: ತಾಲೂಕಿನ ಅಮರಗೋಳ ಗ್ರಾಮದಲ್ಲಿ ದಲಿತ ಕೆರೆಗೆ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ವಿವಿಧ ದಲಿತಪರ ಮುಖಂಡರು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಸಳಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. 

ಈ ವೇಳೆ ದಲಿತಪರ ಸಂಘಟನೆಯ ಮುಖಂಡ ಬಸವರಾಜ ಸಿದ್ದಾಪೂರ ಅವರು ಮಾತನಾಡಿ ಕಳೆದ ಐದಾರು ವರ್ಷಗಳಿಂದ ತಾಲೂಕಿನ ಅಮರಗೋಳ ಗ್ರಾಮದ ದಲಿತ ಕೇರೆಯಲ್ಲಿ 40ರಿಂದ50ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 300ಕ್ಕೂ  ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮದ ಪಕ್ಕದಲ್ಲಿಯೇ ಕೃಷ್ಣಾ ನದಿ ತೀರ ಇದ್ದರೂ ಈ ದಲಿತ ಕೇರೆಯ ಬಡಾವಣೆಯ ಜನರಿಗೆ ಶಾಶ್ವತ ಕುಡಿಯುವ ನೀರಿಲ್ಲದಿರುವುದು ನೋವಿನ ಸಂಗತಿಯಾಗಿದೆ. ಈ ಬಗ್ಗೆ ಈ ಹಿಂದೆ ಹಲವು ಬಾರಿ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಹೋರಾಟ ನಡೆಸಿದರೂ ಇಲ್ಲಿತನಕ ಯಾವೊಬ್ಬ ಅಧಿಕಾರಿಗಳ  ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ.  ನಮ್ಮ ದಲಿತ ಪರ ಸಂಘಟನೆಗಳ ಮುಖಾಂತರ ಸಧ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ಉಗ್ರ ಹೋರಾಟ ನಡೆಸಲು ತಿರ್ಮಾನಿಸಲಾಗಿದೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಆ ಗ್ರಾಮಕ್ಕೆ ಬೇಟಿ ನೀಡಿ 10 ದಿನದೊಳಗೆ ಸಮಸ್ಯೆಗಳ ಕುರಿತು ಅವಲೋಕಿಸಿ ದಲಿತ ಕೇರೆಯ ಜನರಿಗೆ ಶಾಶ್ವತ ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಇಲ್ಲದಿದ್ದರೇ ಇಡಿ ತಾಲೂಕಿನ ಎಲ್ಲ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ತಾಲೂಕು ಪಂಚಾಯತಿ ಕಚೇಧರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು. 

ಈ ವೇಳೆ ಮುಖಂಡರಾದ ಮುತ್ತು ಅಮರಗೋಳ, ಶರಣು ಅಮರಗೋಳ, ದೇವೇಂದ್ರ ಡೋಂಕಮಡು, ಶರಣಪ್ಪ ಅವರಗೋಳ, ಸುನೀಲ ಮಾದರ, ಅನೀಲ ಹಳ್ಳೂರ, ಸೇರಿದಂತೆ ಹಲವರು ಇದ್ದರು.