ಬ್ಯಾಂಕ್ ನೆಲಮಹಡಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಮನವಿ

Request to move the bank to the ground floor

ತಾಳಿಕೋಟಿ 20: ಪಟ್ಟಣದ ಶಿವಾಜಿ ಸರ್ಕಲದ ಹತ್ತಿರ ಒಂದನೇಯ ಮಹಡಿ ಕಟ್ಟಡ ದಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಯನ್ನು ನೆಲಮಹಡಿ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯೆಯ ಜಿಲ್ಲಾಧ್ಯಕ್ಷ ನಾಗರಾಜ ಮೋಟಗಿ ನೇತೃತ್ವದಲ್ಲಿ ಪದಾಧಿಕಾರಿಗಳು ಗುರುವಾರ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.  

ಮನವಿ ಪತ್ರದಲ್ಲಿ ಸದರಿ ಬ್ಯಾಂಕ್ ಶಾಖೆಯು 1 ನೇ ಮಹಡಿಯಲ್ಲಿರುವುದರಿಂದ  ಬ್ಯಾಂಕಿನ ವ್ಯವಹಾರಗಳಿಗಾಗಿ ಬರುವ ಹಿರಿಯ ನಾಗರೀಕರು ಹಾಗೂ ಅಂಗವಿಕಲ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದ್ದು  ಬ್ಯಾಂಕನ್ನು ನೆಲಮಹಡಿ(ಗ್ರೌಂಡ್ ಫ್ಲೋರ್) ಗೆ ಸ್ಥಳಾಂತರಿಸುವಂತೆ ಬಹುದಿನಗಳ ಬೇಡಿಕೆ ಇದೆ. ಇದರ ಜೊತೆಗೆ ಬ್ಯಾಂಕಿನ ಕಟ್ಟಡದಲ್ಲಿಯೇ ಎ.ಟಿ.ಎಂ, ನಗದು ಜಮಾ ಯಂತ್ರದ ಸೌಲಭ್ಯ ಹಾಗೂ ವಿಶೇಷವಾಗಿ ಸೇಫ್ ಲಾಕರ್ ಸವಲತ್ತು ಇಲ್ಲದೆ ಇರುವುದರಿಂದ ಗ್ರಾಹಕರಿಗೆ ತುಂಬಾ ಅನಾನುಕೂಲವಾಗುತ್ತಿದೆ,ಕಾರಣ ಒಂದೇ ಕಟ್ಟಡದಲ್ಲಿ ಎಲ್ಲಾ ಸೌಲಭ್ಯಗಳು ಇದ್ದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ಮುಖ್ಯವಾಗಿ ಬ್ಯಾಂಕನ್ನು 1 ನೇ ಮಹಡಿಯಿಂದ  ನೆಲಮಹಡಿಗೆ ಸ್ಥಳಾಂತರಿಸುವುದರಿಂದ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ತುಂಬಾ ಅನುಕೂಲವಾಗುತ್ತದೆ ಈ ಕುರಿತು ಅವರು ಸಾಕಷ್ಟು ದೂರುಗಳು ನಮ್ಮ ಸಂಘಟನೆಗೆ ಕೊಟ್ಟಿರುತ್ತಾರೆ. ಪಟ್ಟಣದಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡ ಸುಸಜ್ಜಿತವಾದ ಕಟ್ಟಡಗಳು ಲಭ್ಯಇವೆ ಆದಷ್ಟು ಬೇಗ ಸೂಕ್ತ ಕಟ್ಟಡವನ್ನು ಆಯ್ಕೆ ಮಾಡಿ ಬ್ಯಾಂಕನ್ನು ಸ್ಥಳಾಂತರಿಸಬೇಕೆಂದು ಕೇಳಿಕೊಳ್ಳಲಾಗಿದೆ.  

ಈ ಸಮಯದಲ್ಲಿ ಸಂಘಟನೆ ಜಿಲ್ಲಾ ಅಧ್ಯಕ್ಷ ಎನ್‌. ಎಸ್‌.ಮೋಟಗಿ,ತಾಲೂಕ ಗೌರವ ಅಧ್ಯಕ್ಷ ಕುಮಾರಗೌಡ ಪಾಟೀಲ, ಸದಸ್ಯರಾದ ಮಲ್ಲಿಕಾರ್ಜುನ ಚಿನಿವಾರ,ಸಿ.ವಿ.ಚೊಂಡಿ ಪಾಟೀಲ, ಮಹಾಂತೇಶ ಸಾಲಿಮಠ, ಶಿವಾನಂದ ಪಾಟೀಲ, ಶಾಂತು ಹೊರಕೇರಿ, ಅಲ್ಲಾಭಕ್ಷ ಮುದ್ನೂರ ಇದ್ದರು.