ಬೈಲಹೊಂಗಲ 07: ಕೇಂದ್ರ ಸಕರ್ಾರ ಜಾರಿಗೆ ತರಲು ನಿರ್ಧರಿಸಿರುವ ಸಾರಿಗೆ ನೀತಿಯನ್ನು ರೈತ ಸಮುದಾಯ ಸ್ವಾಗತಿಸುತ್ತದೆ. ಆದರೆ ರೈತರ ಟ್ಯಾಕ್ಟರ್ಗಳನ್ನು ಈ ನೀತಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ ವತಿಯಿಂದ ಸೋಮವಾರ ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಸಾರಿಗೆ ಸಚಿವ ನೀತಿನ ಗಡ್ಕರಿಯವರಿಗೆ ಮನವಿ ಅಪರ್ಿಸಿದರು.
ಕೃಷಿಕ ಸಮಾಜ ರಾಜ್ಯ ಸಂಘಟನಾ ಕಾರ್ಯದಶರ್ಿ ಮಹಾಂತೇಶ ಕಮತ ಮನವಿ ಸಲ್ಲಿಸಿ ಮಾತನಾಡಿ, ರೈತರು ತಮ್ಮ ಕೃಷಿ ಚಟುವಟಿಗೆಗಾಗಿ ಸಾಲ ಮಾಡಿ ತಂದ ಟ್ಯಾಕ್ಟರಗಳನ್ನು ಅತ್ಯಂತ ಸುಸ್ಥಿಯಲ್ಲಿ ಇಟ್ಟುಕೊಂಡು ಸುಮಾರು 25ವರ್ಷಕ್ಕು ಅಧಿಕವಾಗಿ ಬಳಸುತ್ತಿದ್ದಾರೆ. ಆದರೆ ತಾವು 15 ವರ್ಷಗಳ ನಂತರದ ವಾಹನಗಳ ಮರು ನೊಂದಣಿಯನ್ನು ದಂಡ ಸಮೇತವಾಗಿ ಮಾಡುತ್ತಿದ್ದು ಅದನ್ನು ಬರುವ ದಿನಗಳಲ್ಲಿ ರದ್ದಾಗುವದರಿಂದ ರೈತರಿಗೆ ತುಂಬಲಾರದ ನಷ್ಟವಾಗಲಿದೆ. ಆದ್ದರಿಂದ ತಾವು ಜಾರಿಗೆ ತರಲಿರುವ ಹೊಸ ಮೋಟರ ವಾಹನ ಕಾಯ್ದೆಯಿಂದ ಕೃಷಿಗೆ ಬಳಸುವ ಟ್ಯಾಕ್ಟರಗಳಿಗೆ ವಿನಾಯತಿ ನೀಡಬೇಕೆಂದು ಆಗ್ರಹಿಸಿದರು.
ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ನಾಲ್ಕೈದು ವರ್ಷಗಳಿಂದ ಬರಗಾಲದ ಛಾಯೆ ಇದ್ದುದ್ದರಿಂದ ಅನೇಕ ರೈತರು ತಮ್ಮ ಕೃಷಿಗೆ ಬಳಸುವ ಟ್ಯಾಕ್ಟರ್ಗಳನ್ನು ಮರು ನೊಂದಾಯಿಸಿಲ್ಲ. ರೈತರ ಟ್ಯಾಕ್ಟರ್ಗಳನ್ನು ಮರು ನೊಂದಣಿ ಕಾರ್ಯವನ್ನು ದಂಡವಿಲ್ಲದೆ ಮುಂದುವರೆಸಬೇಕು. ಇತರೆ ವಾಹನಗಳಿಗೆ ವಿಧಿಸುವ ಶರತ್ತುಗಳನ್ನು ಕೃಷಿ ವಾಹನಗಳಿಗೆ ವಿಧಿಸಬಾರದು. ಮೊದಲೆ ಕಷ್ಟದ ಸ್ಥಿತಿಯಲ್ಲಿರುವ ರೈತರಿಗೆ ಮತ್ತಷ್ಟು ಆಥರ್ಿಕ ಹೊರೆಯಾಗಬಾರದು ಎಂದರು.
ಸಾಲದ ಸುಳಿಗೆ ಸಿಕ್ಕು ದೇಶದಲ್ಲಿ ಸಾವಿರಾರು ರೈತರು ಹಾತ್ಮಹತ್ಯೆ ದಾರಿಹಿಡಿದಿರುವಾಗ ಇದೊಂದು ಕಾಯ್ದೆ ಅವರ ಉರುಳಿಗೆ ಮತ್ತೊಂದು ಗಂಟಾಗಬಾರದು. ಅನೇಕ ಕಂಪನಿಗಳು ಈಗಾಗಲೆ ರೈತರಿಗೆ ಮೋಸಮಾಡಿ ಉಳಿಮೆ ಮಾಡುವ ಹೊಲಗಳನ್ನೆಲ್ಲ ಮಾರಟಕ್ಕೆ ಹಚ್ಚುವಂತೆ ಮಾಡಿದ್ದಾರೆ. ಇನ್ನು ಹಳೆಯ ಟ್ಯಾಕ್ಟರಗಳನ್ನು ಸಕರ್ಾರ ಗುಜುರಿಗೆ ಹಾಕಿದರೆ ರೈತರು ಮತ್ತೆ ಸಾಲಮಾಡಿ ಹೊಸ ವಹಾನ ಖರೀದಿಸಬೇಕಾಗುತ್ತದೆ. ಈಗಾಗಲೆ ಕೃಷಿ ಲಾಭದಾಯಕವಲ್ಲದ ಉದ್ಯೋಗವಾಗಿ ಹೊರಹೊಮ್ಮುತ್ತಿರುವಾಗ ಇಂತಹ ಕಾಯ್ದೆಗಳು ಕೃಷಿ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವದರೊಂದಿಗೆ ಕೃಷಿಯಿಂದ ಕೃಷಿಕರು ವಿಮುಕ್ತರಾಗುವಂತೆ ಮಾಡುತ್ತದೆ ಎಂದು ಸಕಾರವನ್ನು ಎಚ್ಚರಿಸಿದರು. ಆದ್ದರಿಂದ ಕೃಷಿಗೆ ಸಂಬದಿಸಿದ ನಿರ್ಣಯಗಳಲ್ಲಿ ಕೇಂದ್ರ ಸಕರ್ಾರ ತಪ್ಪು ಹೆಜ್ಜೆಯನ್ನಿಡದೆ ರೈತರ ಪರವಾದ ನಿಲುವು ತಾಳುವ ಆಶಾಭಾವನೆ ಇದೆ ಎಂದು ಹೆಳಿದರು.
ಸುರೇಶ ಹೋಳಿ, ಈರಪ್ಪ ಹುಬ್ಬಳ್ಳಿ, ಬಸವರಾಜ ದುಗ್ಗಾಣಿ, ಮಹಾದೇವಪ್ಪ ಕಲಭಾಂವಿ ರಂಗಪ್ಪ ಬೂದಿಹಾಳ, ಮಡಿವಾಳಪ್ಪ ಚಿಕ್ಕೊಪ್ಪ, ಚಂದ್ರು ಹೊಂಗಲ, ಮಲ್ಲಿಕಾಜರ್ುನ ಉಪ್ಪಿನ, ಆನಂದ ಚಿಕ್ಕೊಪ್ಪ, ಮಹಾಂತೇಶ ಬಟ್ಟಿ, ಉಳವಪ್ಪ ಬೂದಿಹಾಳ, ಮಡಿವಾಳಪ್ಪ ತಳವಾರ ಇದ್ದರು.