ಬೆಳಗಾವಿ, 23: ರಾಜ್ಯಾದ್ಯಂತ ಇರುವ ಎಸ್ಸಿ/ಎಸ್ಟಿ ಹಾಸ್ಟೆಲ್ಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಕನರ್ಾಟಕ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಕರ್ಾರದಿಂದ ಈ ಸಮುದಾಯದ ಹೆಸರಿನಲ್ಲಿ ಹಾಸ್ಟೆಲ್ಗಳಿಗೆ ಸಾಕಷ್ಟು ಅನುದಾನ ಬಿಡುಗಡೆಯಾದರೂ ಹಾಸ್ಟೆಲ್ ಅಭಿವೃದ್ಧಿ ಮಾತ್ರ ಕುಂಠಿತವಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿರುವ ವಿದ್ಯಾಥರ್ಿ ಹಾಗೂ ವಿದ್ಯಾಥರ್ಿನಿಯರ ಹಾಸ್ಟೆಲ್ ಸೌಲಭ್ಯ ವಂಚಿತವಾಗಿ ನಲುತ್ತಿವೆ. ಆದರೂ ಸಬ್ಬಂದ ಪಟ್ಟ ಅಧಿಕಾರಿಗಳ ವಸತಿ ನಿಯಲಗಳ ಅಭಿವೃದ್ಧಿ ಮುಂದಾಗುತ್ತಿಲ್ಲ.
ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾದ ಅಧಿಕಾರಿಗಳು ಟೆಂಡರ್ ಹಾಗೂ ಕಮಿಷನ್ ಹೆಸರಿನಲ್ಲಿ ನೀರಿನಂತೆ ಹರಿದು ಹಣವನ್ನು ನುಂಗುತ್ತಿದ್ದಾರೆ. ಇತರೆ ವರ್ಗದ ಹಾಸ್ಟೇಲ್ ವಿದ್ಯಾಥರ್ಿಗಳ ನೀಡುತ್ತಿರುವ ಶೇ 40% ರಷ್ಟು ದಲಿತ ವಿದ್ಯಾಥರ್ಿಗಳಿಗೆ ನೀಡುತ್ತಿಲ್ಲ.
40 ವರ್ಷಗಳಿಂದ ನಿಮರ್ಾಣವಾದ ವಸತಿಗಳು ಶಿಥಿಲಾವಸ್ಥೆಯಲ್ಲಿದ್ದು ಶೀಘ್ರದಲ್ಲೆ ದುರಸ್ತಿ ಮಾಡಬೇಕೆಂದರು. ದಲಿತ ವಿದ್ಯಾಥರ್ಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು ವಸತಿಗಳು ಮಾತ್ರ ಅವ್ಯವಸ್ಥೆಯಿಂದ ಕೂಡಿವೆ ಎಂದು ಕಳವಳ ವ್ಯಕ್ತಪಡಿಸಿದರು. ಯಾವುದೇ ಅಧಿಕಾರಿಗಳು ವಿದ್ಯಾಥರ್ಿಗಳ ಸೂಕ್ತ ಸೌಲಭ್ಯಕ್ಕಾಗಿ ಶ್ರಮಿಸುತ್ತಿಲ್ಲ ಎಂದು ಆರೋಪಿಸಿದರು.
ಬಾಡಿಗೆ ಕಟ್ಟಡಗಳಿಗೆ ಕೊಟ್ಯಾಂತರ ಹಣ ಸುರಿದರೂ ಮೂಲಭೂತ ಸೌಕರ್ಯಕ್ಕಾಗಿ ವಿದ್ಯಾಥರ್ಿಗಳು ಹರಸಾಹಸ ಪಡಬೇಕಾಗಿದೆ.
ವಸತಿಗಳಲ್ಲಿ ಅಡುಗೆ ಮಾಡುತ್ತಿರುವವರನ್ನು ಸೇವಾ ಹಿರಿತನವನ್ನು ಪರಿಗಣಿಸಿ ಅವೈಜ್ಞಾನಿಕವಾಗಿ ಬೂನಿಯರ್ ವಾಡರ್್ಗಳೆಂದು ಪದೋನ್ನತ್ತಿ ನೀಡಿ ಎಡ್ಮೂರು ಹಾಸ್ಟೇಲ್ಗಳ ಜವಾಬ್ದಾರಿ ನೀಡಿ ದಲಿತ ವಿದ್ಯಾಥರ್ಿಗಳ ವಿದ್ಯಾರ್ಜನೆಗೆ ದ್ರೋಹ ಮಾಡುತ್ತಿದ್ದಾರೆ ಗಂಭೀರ ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆ ಪ್ರಾಥಮಿಕದಿಂದ ವಸತಿಯಲ್ಲಿ ನೆಲೆಸಿದ ವಿದ್ಯಾಥರ್ಿಗಳಿಗೆ ಮೇಟ್ರಿಕ್ ಮರುಪ್ರವೇಶಾತಿ ನೀಡಬೇಕೆಂದು ಆದೇಶ ಹೊರಡಿಸಿರುವುದು ಖಂಡನೀಯ ಎಂದರು.
ಬಹುತೇಕ ವಸತಿ ನಿಲಯಗಳಲ್ಲಿ ಒಂದು ರೂಮ್ನಲ್ಲಿ 20 ರಿಂದ 30 ವಿದ್ಯಾಥರ್ಿಗಳನ್ನು ಒತ್ತಾಯಪೂರ್ವಕವಾಗಿ ಹಾಕಲಾಗುತ್ತಿದೆ. ಇದರಿಂದ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಜತೆಗೆ ವಿದ್ಯಾಥರ್ಿ ವೇತನ ತೊಂದರೆಗಳನ್ನು ಪರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರು ಮರೀಶ ಎಸ್ ನಾಗಣ್ಣವರ, ಜಿಲ್ಲಾ ಸಮಚಾಲಕರು ಲಕ್ಷ್ಮಣ ಯಳ್ಳೂರಕರ, ಮಾರುತಿ ರಂಗಾಪೂರಿ, ಪ್ರಕಾಶ ಹೊಸಮನಿ, ಸುಭಾಸ ಹುಲೆನ್ನವರ, ಯಲ್ಲಪ್ಪ ಗೊರಮಕೊಳ್ಳ, ಯಲಪ್ಪ ಕಾಳಪ್ಪನವರ, ಯಲ್ಲಪ್ಪ ಮಿಯಪ್ಪನವರ, ರಮೇಶ ಮ್ಯಾಗೇರಿ, ನಾಗಪ್ಪ ಬಸಲಿಂಗನವರ, ದುರಗವ್ವ ಮ್ಯಾಗೇರಿ, ದ್ರಾಕ್ಷಾಯಿಣಿ ಬಸಲಿಂಗನವರ, ರೇವಣ್ಣ ಬಡೆಪ್ಪನವರ ಹಾಗೂ ಉಪಸ್ಥಿತರಿದ್ದರು.