ಲೋಕದರ್ಶನ ವರದಿ
ಬೈಲಹೊಂಗಲ 18: ಪಟ್ಟಣದ ಸುಸಜ್ಜಿತ ಕೇಂದ್ರ ಬಸ್ನಿಲ್ದಾಣ ಕಟ್ಟಡವನ್ನು ಸಾರಿಗೆ ಸಂಸ್ಥೆ ದ್ವಂಸ ಮಾಡುತ್ತಿರುವುದನ್ನು ತಡೆಗಟ್ಟುವಂತೆ ಹಾಗೂ ಸಾರಿಗೆ ಸಂಸ್ಥೆಯ ಒಳಾಂಗಣದಲ್ಲಿ ನೂತನ ಬಸ್ ನಿಲ್ದಾಣ ನಿಮರ್ಾಣ ಮಾಡಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಒಂದು ಘಂಟೆಗಳ ಕಾಲ ರಸ್ತೆ ನಡೆಸಿ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನರಿಗೆ ಮನವಿ ಅಪರ್ಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ ಮಾತನಾಡಿ, ಹಲವು ದಶಕಗಳ ಹಿಂದೆ ನಿಮರ್ಿಸಿದ್ದ ಸಾರಿಗೆ ಸಂಸ್ಥೆಯ ಬಸ್ನಿಲ್ದಾಣವು ರಾಜ್ಯದಲ್ಲಿಯೇ ಗುಣಮಟ್ಟ ಹಾಗೂ ಗಟ್ಟಿಮುಟ್ಟಾದ ಸುಸಜ್ಜಿತ ಕಟ್ಟಡವಾಗಿದ್ದು, ಅಕರ್ಷನೀಯವಾಗಿದೆ. ಈ ಕಟ್ಟಡದಲ್ಲಿರುವ ವಾಣಿಜ್ಯ ಮಳಿಗೆಗಳಿಂದ ಹಾಗೂ ನಿಲ್ದಾಣದ ಮುಂಬಾಗದಲ್ಲಿ ಅಂಟಿಕೊಂಡಿರುವ ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ರೂಪಾಯಿ ಸಾರಿಗೆ ಸಂಸ್ಥೆಗೆ ಆದಾಯ ಬರುತ್ತಿದ್ದು, ಇಂಥ ವಾಣಿಜ್ಯ ಮಳಿಗೆಗಳನ್ನು ಸಹ ಕೆಡವಿ ಹೊಸ ಕಟ್ಟಡ ನಿಮರ್ಿಸುವ ಸಾರಿಗೆ ಸಂಸ್ಥೆಯ ನಿಧರ್ಾರವನ್ನು ಪ್ರಬಲವಾಗಿ ವಿರೋಧಿಸುತ್ತೇವೆ.
ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರಕಾರಕ್ಕಾಗುವ ನಷ್ಟವನ್ನು ತಪ್ಪಿಸಿ ಸುಸಜ್ಜಿತವಾದ ಬಸ್ನಿಲ್ದಾಣ ಕಟ್ಟಡವನ್ನು ಡಿಮಾಲಿಶ್ ಮಾಡದೇ ನಿಲ್ದಾಣದ ಒಳಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು. ನಿಲ್ದಾಣದಲ್ಲೇ ಇರುವ 2ವ್ಹಿಲರ್ ಪಾಕರ್ಿಂಗ್ ಹಾಗೂ ಪುರುಷರ, ಮಹಿಳೆಯರ ಶೌಚಾಲಯಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಲು ದುಡ್ಡಿನ ಕೊರತೆ ಇದೆ ಎಂದು ಸರಕಾರ ಹೇಳುತ್ತಿರುವಾಗ ಈಗ ಸುಮಾರು ಕೋಟ್ಯಾಂತರ ರೂಗಳಷ್ಟು ಮೌಲ್ಯ ಹೊಂದಿದ ಕಟ್ಟಡವನ್ನು ಸಾರಿಗೆ ಸಂಸ್ಥೆಯು ವಿನಾಕಾರಣ ಕೆಡವದೇ ಅದೇ ಹಣದಲ್ಲಿ ಪ್ರಯಾಣಿಕರಿಗೆ ಬೇರೆ ಕಟ್ಟಡ ನಿಮರ್ಿಸಿ ಸಕಲ ಸೌಲಭ್ಯ ಹೊಂದಿರುವ ಸುಸಜ್ಜಿತ ನಿಲ್ದಾಣವನ್ನು ಬಸ್ ನಿಲ್ದಾಣದ ಹಿಂದೆ ಇರುವ ಜಾಗೆಯನ್ನು ಉಪಯೋಗಿಸಿ ಹೊಸ ಕಟ್ಟಡವನ್ನು ನಿಮರ್ಿಸಿ ಸರಕಾರದ ಹಣವನ್ನು ಉಳಿತಾಯ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಒಂದು ವೇಳೆ ಸಾರ್ವಜನಿಕರ ಮನವಿಗೆ ಸರಕಾರ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೈಲಹೊಂಗಲ ಬಂದ್ ಕರೆದು ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಜಿಪಂ ಸದಸ್ಯ ಶಂಕರ ಮಾಡಲಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ಈ ನಿಲ್ದಾಣವು ನಾಲ್ಕ ವರ್ಷಗಳ ಹಿಂದೆ ಸರಕಾರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಸ್ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ. ಹದಿನೈದಕ್ಕೂ ಹೆಚ್ಚು ವ್ಯಾಪಾರ ಮಳಿಗೆಗಳಿಗೆ, ಪಾಕರ್ಿಂಗ್ ವ್ಯವಸ್ಥೆಗೆ ಹಾಗೂ ಶೌಚಾಲಯದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ವೆಚ್ಚ ಮಾಡಿ ಅಭಿವೃದ್ಧಿ ಪಡಿಸಲಾಗಿದೆ.
ಈಗಾಗಲೇ ಸಾರಿಗೆ ಸಂಸ್ಥೆಯು ನಷ್ಟದಲ್ಲಿ ಇದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರು ಬೈಲಹೊಂಗಲ ಸಭೆಯಲ್ಲೇ ಹೇಳಿದ್ದಾರೆ. ಸುಮಾರು 11ರಿಂದ 13ಲಕ್ಷ ಕೀ.ಮಿ ಓಡಿರುವ ಬಸ್ಸುಗಳನ್ನು ಗುಜುರಿಗೆ ಹಾಕಬೇಕೆಂಬ ಸರಕಾರದ ನಿಯಮವಿದ್ದರೂ ಅದೇ ಬಸ್ಸುಗಳನ್ನು ಇನ್ನೂ ಸಾರ್ವಜನಿಕರ ಸೇವೆಯಲ್ಲಿ ಓಡಿಸುತ್ತಿರುವುದು ದುದರ್ೈವದ ಸಂಗತಿಯಾಗಿದೆ. ಮಾಜಿ ಶಾಸಕರುಗಳು ಈ ಹೋರಾಟಕ್ಕೆ ಕೈ ಜೋಡಿಸಬೇಕೆಂದರು.
ರಾಜು ಭರಮಗೌಡರ, ಪರಶುರಾಮ ರಾಯಭಾಗ, ವಿಠ್ಠಲ ಹಂಪಿಹೊಳಿ, ಬಾಳಪ್ಪ ಚಳಕೊಪ್ಪ, ಅಭಿಷೇಕ ಬೋಳಣ್ಣವರ, ಶ್ರೀದೇವಿ ನಾಯ್ಕರ, ಇಸ್ಮಾಯಿಲ್ ಬಡೇಘರ, ಮಹ್ಮದಲಿ ಬಾಗೇವಾಡಿ, ರಾಜು ಬೋಳಣ್ಣವರ, ಫಾರೂಕ ಪಟ್ಟಿಹಾಳ, ಉಳವಪ್ಪ ಅಂಗಡಿ, ಲಾಲಸಾಬ ಭಜಂತ್ರಿ, ಶಿವಾನಂದ ಕುಲಕಣರ್ಿ, ಹನೀಫ ಕರಡಿ, ದೇವೇಂದ್ರ ಚೌವಡಣ್ಣವರ, ಸಯ್ಯದ ರಸುಲಣ್ಣವರ, ಮಹೆತಾಬ ಖುದ್ದುನ್ನವರ, ಜನ್ನತಭಿ ಧಾರವಾಡ, ಸದಸ್ಯರು ಉಪಸ್ಥಿತರಿದ್ದರು.