ಸರಕಾರಿ ನೌಕರರೆಂದು ಬಜೆಟನಲ್ಲಿ ಪರಿಗಣಿಸಲು ಆಗ್ರಹ

ಲೋಕದರ್ಶನ ವರದಿ

ಗೋಕಾಕ 01: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ ಸರ್ಕಾರಿ ನೌಕರರೆಂದು ಬರುವ ಬಜೆಟ್ನಲ್ಲಿ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಉಪಾಧ್ಯಕ್ಷ ಸಂಜೀವ ಜೋಗೋಜಿ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಕಳೆದ 3ವರ್ಷಗಳಿಂದ ರಸ್ತೆ ಸಾರಿಗೆ ಇಲಾಖೆಯ ನೌಕರರು ಸರ್ಕಾರಕ್ಕೆ ಹಾಗೂ ಪ್ರಯಾಯಣಿಕರಿಗೆ ಯಾವುದೇ ತರನಾದ ತೊಂದರೆಯಾಗದಂತೆ ಪತ್ರ, ಬಿತ್ತಿಪತ್ರ ಕಪ್ಪು ಬಟ್ಟೆ  ಚಳುವಳಿಗಳು, ಒಂದು ದಿನದ ಸಾಂಕೇತಿಕ ಉಪವಾಸ ಹಾಗೂ ಮುಖ್ಯಮಂತ್ರಿಗಳಿಗೆ, ಸಚಿವರಿಗೆ, ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲದಾರರಿಗೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸುತ್ತಾ ಶಾಂತಿಯೂತವಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದರೂ ಕೂಡಾ ನಮಗೆ ನ್ಯಾಯ ದೊರಕಿಲ್ಲಾ ಎಂದು ತಿಳಿಸಿದ್ದಾರೆ. 

ಈಗಾಗಲೇ ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಿದ್ದು, ಇದೇ ಪ್ರಕಾರ ನಮ್ಮ ರಾಜ್ಯದಲ್ಲಿಯೂ ನಮ್ಮನ್ನು ಪೂರ್ಣ ಪ್ರಮಾಣದ ಸರ್ಕಾರಿ ನೌಕರರೆಂದು ಪರಿಗಣಿಸಿ 2020-21ನೇ ಸಾಲಿನ ಬಜೆಟ್ನಲ್ಲಿ ಸೂಕ್ತ ವೇತನ ಸವಲತ್ತು ಘೋಷಿಸಬೇಕು. 

ಈಗಾಗಲೇ ಇದರ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಎಚ್.ಡಿ.ಕುಮಾರಸ್ವಾಮಿ ಅವರು ನೌಕರರ ಪರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ಅವರು ತಿಳಿಸಿದ್ದು ಅದರಂತೆ ಉಳಿದ ಶಾಸಕರು ಸಚಿವರು ನಮ್ಮ ಪರವಾಗಿ ಧ್ವನಿ ಎತ್ತಿಬೇಕೆಂದು ಸಂಜೀವ ಜೋಗೋಜಿ ಅವರು ರಸ್ತೆ ಸಾರಿಗೆ ನೌಕಕರರ ಪರವಾಗಿ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.