ನಾಡ ಕಛೇರಿಗೆ ಡಾಟಾ ಎಂಟ್ರಿ ಆಪರೇಟರ್‌ನ್ನು ನೇಮಿಸಲು ಮನವಿ
Request to appoint a data entry operator for the Nada Kacheri
ಲೋಕದರ್ಶನ ವರದಿ
ಕಂಪ್ಲಿ 08: ಪಟ್ಟಣದ ಭೀಮ್ ಆರ್ಮಿ ಪದಾಧಿಕಾರಿಗಳು, ಇಲ್ಲಿನ ನಾಡ ಕಾರ್ಯಾಲಯದಲ್ಲಿ ಹೆಚ್ಚುವರಿಯಾಗಿ ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್‌ನ್ನು ನೇಮಿಸಬೇಕೆಂದು ಒತ್ತಾಯಿಸಿ, ತಹಸೀಲ್ದಾರ ಜೂಗುಲ ಮಂಜುನಾಯಕ ಅವರಿಗೆ ಮನವಿ ಬುಧವಾರ ಸಲ್ಲಿಸಿದರು. ಭೀಮ್ ಆರ್ಮಿ ಗೌರವ ಅಧ್ಯಕ್ಷ ಸಣಾಪುರ ಮರಿಸ್ವಾಮಿ ಮಾತನಾಡಿ, ಈ ಕಾರ್ಯಾಲಯದಲ್ಲಿ ಒಬ್ಬ ಡಾಟಾ ಎಂಟ್ರಿ ಆಪರೇಟರ್ ಇದ್ದಾರೆ. ಆದರೆ ಕಚೇರಿಗೆ ಜಾತಿ, ಆದಾಯ, ಎ,ಬಿ,ಸಿ ತಿದ್ದುಪಡಿ ಸೇರಿ ಕೆಲ ಅರ್ಜಿಗಳನ್ನು ಸಲ್ಲಿಸಲು ಅನೇಕ ಜನರು ಬರುತ್ತಾರೆ.
ಆದರೆ ಒಬ್ಬರಿಂದ ಎಲ್ಲ ಜನತೆಯ ಅರ್ಜಿ ಸ್ವೀಕರಿಸಲು ಅಡಚಣೆಯಾಗುತ್ತಿದ್ದು, ಹೆಚ್ಚುವರಿಯಾಗಿ ಡಾಟಾ ಎಂಟ್ರಿ ಆಪರೇಟರ್‌ನ್ನು ನೇಮಿಸಬೇಕು ಎಂದರು. ಭೀಮ್ ಆರ್ಮಿ ಅಧ್ಯಕ್ಷ ಎ.ಎಸ್.ಯಲ್ಲಪ್ಪ ಮಾತನಾಡಿ, ಜನತೆ ಸಲ್ಲಿಸುವ ಪ್ರತಿ ಅರ್ಜಿಗೂ ಶುಲ್ಕದ ಪಟ್ಡಿಯನ್ನು ಕಚೇರಿಯಲ್ಲಿ ಅಳವಡಿಸಬೇಕು. ಬೇಗನೆ ಹೆಚ್ಚುವರಿ ಡಾಟಾ ಎಂಟ್ರಿ ಆಪರೇಟರ್‌ನ್ನು ನಿಯೋಜನೆ ಮಾಡಬೇಕು ಎಂದರು. ಪ್ರಮುಖರಾದ ಸಿಕ್ಲಿ ಬಸವರಾಜ, ಆರ್.ಎಂ.ಎಚ್.ಧನುಷ್, ಮೆಟ್ರಿ ಬಸವರಾಜ, ಎಚ್.ಹುಲಿಗೇಶ್, ಪ್ರವೀಣ, ಶಿವಕುಮಾರ್, ಬಸಮ್ಮ ಇತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 