ಬೂದಿಹಾಳ-ಪಿರಾಪುರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಡಿಕೆಶಿಗೆ ಮನವಿ

Request to DKS to complete the Boodihal-Pirapur lift irrigation project

ಬೂದಿಹಾಳ-ಪಿರಾಪುರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಡಿಕೆಶಿಗೆ ಮನವಿ 

 ದೇವರಹಿಪ್ಪರಗಿ 02: ಬೂದಿಹಾಳ-ಪಿರಾಪುರ ಏತ ನೀರಾವರಿ ಯೋಜನೆ ಕ್ರಿಯಾಶೀಲ ವೇದಿಕೆಯಿಂದ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿ ಯೋಜನೆ ಪೂರ್ಣಗೊಳಿಸಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.  

ಬುಧುವಾರದಂದು ಬೆಂಗಳೂರಿನ ಸಚಿವರ ಸ್ವಗ್ರಹದಲ್ಲಿ ಬೂದಿಹಾಳ ಪೀರಾಪುರ ನೀರಾವರಿ ಯೋಜನೆ ಕ್ರಿಯಾಶೀಲ ವೇದಿಕೆಯ ಪದಾಧಿಕಾರಿಗಳು ಹಾಗೂ ಮಾಜಿ ಸಿಂದಗಿ ಶಾಸಕ ಶರಣಪ್ಪ ಸುಣಗಾರ ಅವರ ನೇತೃತ್ವದಲ್ಲಿ ಭೇಟಿಯಾಗಿ ಈ ಯೋಜನೆಗೆ ಈಗಾಗಲೇ ಸುಮಾರು 800 ಕೋಟಿ ರೂ ಸರ್ಕಾರ ಹಣ ಖರ್ಚು ಮಾಡಿದೆ. ನೀರು ಟ್ರೈಯಲ್ ರನ್ ಓಟ್ ಬಾಕ್ಸ್‌ ವರೆಗೆ ತಲುಪಿದೆ. ಇನ್ನು ಕೇವಲ ಹೊಲಗಾಲುವೆಗಾಗಿ ಶೇ.10ರಷ್ಟು ಕೆಲಸ ಮಾತ್ರ ಬಾಕಿ ಇದ್ದು, ಬರುವ ಬೇಸಿಗೆಯಲ್ಲಿ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಬೇಕಾಗಿದೆ ಅದಕ್ಕಾಗಿ ಸರ್ಕಾರ ಸುಮಾರು 170-200 ಕೋಟಿ ರೂ ಹಣಕಾಸು ಇಲಾಖೆಯಿಂದ ಮಂಜೂರು ಮಾಡಿಸಿದ್ದೆ ಆದರೆ ಸುಮಾರು ಈ ಭಾಗದ 50,607 ಎಕರೆ ಕೃಷಿ ಭೂಮಿ ನೀರಾವರಿಗೆ ಒಳಪಡುತ್ತದೆ. ಈ ಪ್ರದೇಶದಲ್ಲಿ ಅಂತರ್ಜಲ ಶೋಚನೀಯವಾಗಿದೆ, ಕೆಲಸವಿಲ್ಲದೆ ರೈತರು ಯುವಕರು ನಗರ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ. ಸರ್ಕಾರ ಪಕ್ಷಾತೀತವಾಗಿ ರೈತರಿಗಾಗಿ ಈ ಯೋಜನೆ ಪೂರ್ಣಗೊಳಿಸಿ ಅನುಷ್ಠಾನವಾದಲ್ಲಿ ಸುಮಾರು ವಿಭಾಗದ 38 ಗ್ರಾಮಗಳ ಲಕ್ಷಕ್ಕೂ ಹೆಚ್ಚು ಕೃಷಿ ಜೊತೆಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಆದ್ದರಿಂದ ನೀರಾವರಿ ಸಚಿವರಾದ ತಾವು ಅಧಿಕಾರಿಗಳಿಗೆ ನಿರ್ದೇಶನ ನೀಡಿ ತ್ವರಿತ ಗತಿಯಲ್ಲಿ ಯೋಜನೆ ಪೂರ್ಣಗೊಂಡ ಈ ವ್ಯಾಪ್ತಿಯ ಗ್ರಾಮಗಳ ಜನರು ಆರ್ಥಿಕವಾಗಿ ಸಬಲೀಕರಣ ಹೊಂದಲು ಅನುಕೂಲವಾಗುತ್ತದೆ ಆದಷ್ಟು ಬೇಗ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಎಲ್ಲಾ ರೈತ ಮುಖಂಡರು, ಜನನಾಯಕರು ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. 

ಮನವಿ ಸ್ವೀಕರಿಸಿದ ಸಚಿವರು ಪರೀಶೀಲಿಸುವದಾಗಿ ತಿಳಿಸಿದರು. ಮಾಜಿ ಶಾಸಕ ಶರಣಪ್ಪ ಸುಣಗಾರ, ಮುಖಂಡರುಗಳಾದ ಪ್ರಭುಗೌಡ ಬಿರಾದಾರ, ಹನುಮಗೌಡ ಬಿರಾದಾರ, ಕಾಶಿನಾಥ ತಳವಾರ, ಮಲ್ಲಣ್ಣ ಹಿರೇಕುರುಬರ, ಸಂಗನಗೌಡ ನಾಗರೆಡ್ಡಿ, ಮಹಾದೇವ ವಾಲಿಕಾರ, ಸಿದ್ದನಗೌಡ ಬಿರಾದಾರ, ರುದ್ರಗೌಡ ಬಿರಾದಾರ, ಶಿವಪುತ್ರ ಚೌದ್ರಿ ಹಾಗೂ ಗುರುರಾಜ ಪಡಶೆಟ್ಟಿ ಸೇರಿದಂತೆ ಹಲವಾರು ಜನ ರೈತ ಮುಖಂಡರು ಉಪಸ್ಥಿತರಿದ್ದರು.