ಲೋಕದರ್ಶನ ವರದಿ
ರಾಣೇಬೆನ್ನೂರು08: ಹಾವೇರಿ ಜಿಲ್ಲಾ ಕನರ್ಾಟಕ ಭೂ ಹಕ್ಕುದಾರರ ವೇದಿಕೆ ಮತ್ತು ನೀಡ್ಸ್ ಸಂಸ್ಥೆಯ ಸಹಯೋಗದಲ್ಲಿ ರಾಣೇಬೆನ್ನೂರು ತಹಶೀಲ್ದಾರರಿಗೆ ಬಗರ್ ಹುಕುಂ ಮತ್ತು ಅರಣ್ಯ ಭೂ ಸಾಗುವಳಿದಾರರಿಗೆ ಹಕ್ಕು ಪತ್ರಕೊಡಲು ಕೊಡಲು ಮನವಿಯನ್ನು ಸಲ್ಲಿಸಲಾಯಿತು.
ನೀಡ್ಸ್ ಸಂಸ್ಥೆಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಎಚ್.ಎಫ್.ಅಕ್ಕಿಯವರು ಮಾತನಾಡಿ1991-92 ಇಸವಿಗಿಂತಲು ಮುಂಚಿತವಾಗಿ ಬಗರ್ ಹುಕುಂ ಮತ್ತುಅರಣ್ಯ ಭೂಮಿಯನ್ನು ರೈತರು ಸಾಗುವಳಿ ಮಾಡುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಸುಮಾರು 50ರಿಂದ60ವರ್ಷಗಳ ಕಾಲ ಉಳಿಮೆಮಾಡಿ, ಹಕ್ಕು ಪತ್ರಕ್ಕೆಅವಶ್ಯವಿರುವ ದಾಖಲಾತಿಗಳೋಂದಿಗೆ ಫಾರಂ ನಂ 50 ಮತ್ತು53ರಲ್ಲಿ ಅಜರ್ಿ ಸಲ್ಲಿಸಿದರೂ ಸಹ ಇದುವರೆಗೂ ಅವರಿಗೆ ಹಕ್ಕು ಪತ್ರ ದೊರೆತಿಲ್ಲ. ಇನ್ನು ಮಳೆಗಾಲದಲ್ಲಿ ಅರಣ್ಯ ಮತ್ತು ತಾಲೂಕಾ ಕಛೇರಿ ಅಧಿಕಾರಿಗಳು ಭೂಮಿಯನ್ನು ಉಳಿಮೆ ಮಾಡದಂತೆ ರೈತರಿಗೆ ಸಮಸ್ಯೆ ಮಾಡುತ್ತಿದ್ದಾರೆ. ಅದಕ್ಕಾಗಿ ತಾವುಗಳು ಅಜರ್ಿ ಸಲ್ಲಿಸಿದಂತಹ ರೈತರಿಗೆ ಹಕ್ಕು ಪತ್ರ ನೀಡಬೇಕೆಂದುಮಾನ್ಯ ಸಚಿವರಲ್ಲಿ ಒತ್ತಾಯಿಸಿದರು.
ಜಿಲ್ಲಾ ಕನರ್ಾಟಕ ಭೂ ಹಕ್ಕುದಾರರ ವೇದಿಕೆಯ ಅಧ್ಯಕ್ಷರಾದ ರವೀಂದ್ರಗೌಡ ಪಾಟೀಲ್ ಮಾತನಾಡಿ ರೈತರು ಹಕ್ಕು ಪತ್ರ ಪಡೆಯುವ ಸಂಬಂಧ ತಮ್ಮ ನಿತ್ಯ ಕೃಷಿ ಚಟುವಟಿಕೆಗಳನ್ನು ಬಿಟ್ಟು ಶಾಸಕರ ಮನೆಗಳಿಗೆ, ತಾಲ್ಲೂಕಾ ದಂಡಾಧೀಕಾರಿಗಳ ಕಛೇರಿಗಳಿಗೆ, ಅರಣ್ಯ ಇಲಾಖೆಗೆ, ಜಿಲ್ಲಾಧಿಕಾರಿಗಳ ಕಛೇರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಸುಮಾರು40ರಿಂದ50 ವರ್ಷಗಳ ತನಕ ನಮ್ಮ ಪೂರ್ವಜರು ಈಗ ನಾವು ಅಲೆದಾಡುತ್ತಲೇಇದ್ದೇವೆ. ಆದರೆಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ರೈತರಕಡೆಗೆ ಗಮನ ಹರಿಸುತ್ತಿಲ್ಲ. ಇದೇರೀತಿ ಮುಂದುವರೆದರೆಅತಿ ಶೀಘ್ರದಲ್ಲಿ ನಾವು ರಾಷ್ಟ್ರೀಯ ಹೆದ್ದಾರಿಯನ್ನುತಡೆದುಉಘ್ರ ಹೊರಾಟನ್ನು ಮಾಡಲಾಗುವುದೆಂದು ಎಚ್ಚರಿಸಿದರು.
ಜಿಲ್ಲಾ ಸಂಚಾಲಕರಾದ ಕರಿಬಸಪ್ಪ ಎಂ ಮಾತಾನಾಡಿ ಮಾನ್ಯ ಮುಖ್ಯಮಂತ್ರಿಗಳೂ ಸಹ ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿ ರೈತರಿಗೆ ಅನುಕೂಲ ವಾಗುವಂತೆ ನಿಯಮಗಳನ್ನು ರಚಿಸಿ ಫಾರಂ ನಂ 57ರಲ್ಲಿ ಬಗರ ಹುಕುಂ ರೈತರು ಅಜರ್ಿಯನ್ನೂ ಹಾಕಬೇಕೆಂದು ತಿಳಿಸಿದರು.
ಹಕ್ಕು ಪತ್ರಕ್ಕೆ ಮನವಿ ಸಲ್ಲಿಸಲು ಬಗರ್ ಹುಕುಂ ಜಿಲ್ಲಾ ಸಂಚಾಲಕರಾದ, ಕ್ಷೇತ್ರ ಸಂಚಾಲಕರಾದ ತಿಪ್ಪೇಶಪ್ಪ ಎ.ಕೆ, ಉಮೇಶ್.ಹೆಚ್, ರಾಜಪ್ಪ. ಡಿ, ಹಾಲಪ್ಪ. ಹೆಚ್. ಚಂದ್ರು. ಹೆಚ್. ಮತ್ತು ಹಾವೇರಿ ಜಿಲ್ಲೆಯ 50ಬಗರ್ ಹುಕುಂ ರೈತರು ಭಾಗವಹಿಸಿದ್ದರು.