ಹಾವೇರಿ09 : ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ಕರವೇ ಸ್ವಾಭಿಮಾನಿ ಬಣದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಸ್ವಾಭಿಮಾನಿ ಬಣದ ರಾಜ್ಯ ಉಪಾಧ್ಯಕ್ಷ ರಾಮು ತಳವಾರ ಮಾತನಾಡಿ, ಜಿಲ್ಲೆಯು ಉದಯವಾಗಿ ಇದೀಗ 21 ವರ್ಷಗಳು ಗತಿಸಿದರೂ ಸಹ ಆಡಳಿತಕ್ಕೆ ಬಂದ ಸರಕಾರಗಳು ಜಿಲ್ಲೆಯನ್ನು ಕಡೆಗಣಿಸುತ್ತಾ ಬಂದಿವೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಗಮನ ಸೆಳೆಯುವ ಕಾರ್ಯಕ್ರಮಗಳನ್ನು ಸಂಘಟನೆಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ಬ್ಯಾಡಗಿ ತಾಲೂಕಾ ಘಟಕದ ಅಧ್ಯಕ್ಷ ಮಂಜುನಾಥ ಭೋವಿ ಮಾತನಾಡಿ, ಜಿಲ್ಲೆಯು ಹಲವು ವರ್ಷಗಳಿಂದ ಪರಿಹಾರ ಕಾಣದೇ ಉಳಿದುಕೊಂಡಿರುವ ಸಮಸ್ಯೆಗಳಾದ ವೈದ್ಯಕೀಯ ಮಹಾವಿದ್ಯಾಲಯ ಅಖಂಡ ಧಾರವಾಡ ವ್ಯಾಪ್ತಿಯಲ್ಲಿರುವ ಕರ್ನಾಟಕ ಕೋ-ಆಪರೇಟಿವ್ಹ್ ಬ್ಯಾಂಕ್ ವಿಭಜನೆ ಅಲ್ಲದೇ ಇದೇ ಪ್ರದೇಶಕ್ಕೆ ಸೀಮಿತವಾಗಿರುವ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ವಿಭಜಿಸಿ ಅತಿ ಹೆಚ್ಚು ಹಾಲು ಉತ್ಪಾದನೆಯ ಜಿಲ್ಲೆಗೆ ವರ್ಗಾಯಿಸುವ ಕುರಿತು ಅಲ್ಲದೇ ಹಲವಾರು ವರ್ಷಗಳಿಂದ ಸಕರ್ಾರಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಹಾವೇರಿಯಿಂದ ಹಾನಗಲ್ಲ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಶಿಶರ್ಿ ಮಾರ್ಗವಾಗಿ ರೈಲು ಸಂಚಾರ ಅಲ್ಲದೇ ಕನ್ನಡ ಭವನ ಕಟ್ಟಡ ನಿರ್ಮಾಣವಾಗದೇ ಇರುವುದು ಖೇದದ ಸಂಗತಿಯಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಬಿ. ತಿಮ್ಮಾಪುರ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಬಸವರಾಜ ಮಠಪತಿ, ಹಾವೇರಿ ತಾಲೂಕಾ ಘಟಕದ ಅಧ್ಯಕ್ಷರಾದ ಪ್ರವೀಣ ಕಾಗದ, ಜಿಲ್ಲಾ ರೈತ ಘಟಕದ ಉಪಾಧ್ಯಕ್ಷರಾದ ಬಸವಣ್ಣಯ್ಯ ಸಾಲಿಮಠ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದಶರ್ಿ ಸುಮಾ ಪುರದ, ಸಿ.ಎಫ್. ಹಾವೇರಿಮಠ, ಜಿಲ್ಲಾ ವಕ್ತಾರ ಸುರೇಶ ಮುರಾರಿ, ರಾಣೇಬೆಅನ್ನೂರು ತಾಲೂಕ ಯುವಘಟಕದ ಅಧ್ಯಕ್ಷರಾದ ವಾಗೀಶ ಸಾಲಿಮಠ, ಗಂಗಾಧರ ಇಂಗಳಗುಂದಿ, ಸುರೇಶ ಜಿ.ಬಾಲಣ್ಣನವರ, ಶಂಭುಲಿಂಗಯ್ಯ ಹನಗೋಡಿಮಠ, ಆಶಾ ಜೋಶಿ, ಗೀತಾ ಜಂಗಿ, ಎಂ.ಡಿ. ಮೋಟೇಬೆನ್ನೂರ ಹಾಗೂ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಪಾಲ್ಗೊಂಡಿದ್ದರು.