ಯಲ್ಲಾಪುರ: ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಮಾತಿಗೆ ಸಮಾಜದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಇದಕ್ಕೆ ತಕ್ಕಂತೆ ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಉಚಗೇರಿ ಗ್ರಾಮದ ಮಜ್ಜಿಗೆಹಳ್ಳದಲ್ಲಿ ಅಗತ್ಯವಿದ್ದ ಅಂಗನವಾಡಿಗಾಗಿ ನಿಮರ್ಿಸಲಾದ ನೂತನ ಕಟ್ಟಡದ ಕಥೆ ವ್ಯಥೆಪಡುವಂತಿದೆ. 12 ಮಕ್ಕಳನ್ನು ಹೊಂದಿರುವ ಇಲ್ಲಿಯ ಅಂಗನವಾಡಿ ತಾತ್ಕಾಲಿಕ ಶೆಡ್ವೊಂದರಲ್ಲಿ ನಡೆಯುತ್ತಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಇಲಾಖೆ ಈ ಸಾಲಿನ ಜಿ.ಪಂ ಆರ್.ಐ.ಡಿಎಫ್ 21 ಲೆಕ್ಕ ಶಿಶರ್ಿಕೆ ಯೋಜನೆಯಡಿ ನೂತನ ಕಟ್ಟಡ ನಿಮರ್ಾಣಕ್ಕಾಗಿ 9.17 ಲಕ್ಷ ರೂ. ಗಳ ಅನುದಾನವನ್ನು ಒದಗಿಸಿ, ಕಟ್ಟಡ ಕಾಮಗಾರಿ ಆರಂಭಗೊಂಡು ಶೆ.90 ರಷ್ಟು ಪೂರ್ಣಗೊಂಡಿದೆ. ಈ ಪ್ರಕ್ರಿಯೆಗೆ ಕನಿಷ್ಠ 3 ತಿಂಗಳು ಕಳೆದಿದೆಯಾದರೂ ಅಂಗನವಾಡಿಯೊಂದರಲ್ಲಿ ಅಗತ್ಯವಿರುವ ಶೌಚಾಲಯಕ್ಕೆ ಬಾಗಿಲು ಮತ್ತು ಅಂಗಡನವಾಡಿಯ ಪ್ರವೇಶ ದ್ವಾರದ ಬಾಗಿಲನ್ನು ಅಳವಡಿಸದಿರುವುದು ಅಚ್ಚರಿಯ ಸಂಗತಿಯಾಗಿದೆಯಲ್ಲದೇ, ಸೋರುತ್ತಿರುವ ಶೆಡ್ನಲ್ಲಿ ಅಂಗನವಾಡಿ ನಡೆಸುವ ಬದಲಿಗೆ ಹೊಸ ಕಟ್ಟಡ ಕಣ್ಣಿಗೆ ಕಾಣುತ್ತಿದ್ದರೂ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಮತ್ತು ಉದ್ಘಾಟನೆಯ ಭಾಗ್ಯ ನೆರವೇರದಿರುವುದರಿಂದ ಅಲ್ಲಿ ಅಂಗನವಾಡಿಯನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ.
ಮುಖ್ಯವಾಗಿ ನೂತನವಾಗಿ ನಿಮರ್ಿಸಲಾದ ಅಂಗನವಾಡಿಯಲ್ಲಿ ಅಗತ್ಯವಿರುವ ಬಾಗಿಲನ್ನು ಅಳವಡಿಸದಿರುವುದು ಕಟ್ಟದೊಳಗೆ ಪ್ರಾಣಿ-ಪಕ್ಷಿಗಳಿಗೆ ವಾಸಸ್ಥಾನವಾದಂತಾಗಿದೆ. ಕಟ್ಟಡದೊಳಗೆ ನಿಮರ್ಿಸಲಾದ ನೆಲ ಈಗಾಗಲೇ ಬಿರುಕುಬಂದಿದ್ದು, ಉಳಿದಂತೆ ಯಾವ ಕಾಮಗಾರಿಯೂ ವೈಜ್ಞಾನಿಕ ಸ್ವರೂಪದಲ್ಲಿ ನಡೆದಿಲ್ಲವೆಂದು ಈ ಕುರಿತು ಗ್ರಾಮಸ್ಥರು ತೀವೃ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೇ, ಕಟ್ಟಡ ಗುತ್ತಿಗೆದಾರ ಗಜಾನನ ನಾಯ್ಕ ಯೋಜಿತ ರೀತಿಯಲ್ಲಿ ಕಟ್ಟಡವನ್ನು ಶೀಘ್ರವಾಗಿ ಪೂರ್ಣಗೊಳಿಸಿಕೊಡುವಂತೆ ಒತ್ತಾಯಿಸಿದ್ದಾರೆ.