ಭಾರತ ಬಂದಗೆ ಬೆಂಬಲಿಸಿ ಮನವಿ


ಮೂಡಲಗಿ: ಪ/ಜಾ.ಪ/ಪಂ ಮೇಲೆ ದೌರ್ಜನ್ಯ ತಡೆ ಕಾಯ್ದೆ ಸಡಿಲಿಕರಿಸುದನ್ನು ಖಂಡಿಸಿ ದಲಿತ ಸಂಘಟನೆಗಳು ಗುರುವಾರ ಕರೆದ ಭಾರತ ಬಂದಗೆ ಬೆಂಬಲಿಸಿ ಪ/ಜಾ.ಪ/ಪಂ ಬಲವರ್ಧನಾ ಮತ್ತು ಮೇಲ್ವಿಚಾರಣಾ ಸಮಿತಿಯ ಜಿಲ್ಲಾ ಅಧ್ಯಕ್ಷ ಮಾರುತಿ ಮಾವರಕರ ಮೂಡಲಗಿ ತಹಶೀಲ್ದಾರ ಕಾಯರ್ಾಲಯದ ಎಫ್ಡಿಎ ವಾಯ್.ಎಮ್.ಉದ್ದಪ್ಪನವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ಎಸ್ಸಿ/ಎಸ್ಟಿ ಕಾಯ್ದೆಗೆ ಸಂಬಂಧಿಸಿದ ವಿಷಯಗಳನ್ನು ಸುಪ್ರೀಂ ಕೋರ್ಟನಲ್ಲಿ ದೌರ್ಜನ್ಯ ತಡೆ ಕಾಯ್ದೆಯನ್ನು ಕೆಲ ಮಾಪರ್ಾಡುಗಳ ಸಡಿಲಿಕರಣ ಮಾಡಿದನ್ನು ಖಂಡಿಸಿ ಇಂದು ನಡೆದಿರುವ ಭಾರತ ಬಂದ್ಗೆ ಸಮಿತಿಯಿಂದ ಸಂಪೂರ್ಣ ಬೆಂಬಲವನ್ನು  ವ್ಯಕ್ತ ಪಡಿಸಲಾಯಿತ್ತು. 

ಜಿಲ್ಲಾಧ್ಯಕ್ಷ ಮಾರುತಿ ಮಾವರಕರ ಬೆಂಬಲ ವ್ಯಕ್ತ ಪಡಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ರಾಜು ಐಹೋಳೆ, ದಲಿತ ಮುಖಂಡರಾದ ರಮೇಶ ಸಣ್ಣಕ್ಕಿ, ಜಯವಂತ ನಾಗನ್ನವರ, ಮಹಾದೇವ ಐಹೋಳೆ, ಪ್ರವೀಣ ಮಾವರಕರ ಸೇರಿದಂತೆ ದಲಿತ ಮುಖಂಡರು ಹಾಗೂ ಪ/ಜಾ.ಪ/ಪಂ ಬಲವರ್ಧನಾ ಮತ್ತು ಮೇಲವಿಚಾರನಾ ಸಮೀತಿಯ ಕಾರ್ಯಕರ್ತರು ಉಪಸ್ಥಿರಿದ್ದರು.