ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಕೆ

ಮಹಾಲಿಂಗಪುರ : ಸ್ಥಳೀಯ ಕೃಷಿ ಮಾರುಕಟ್ಟೆ ಹಮಾಲರ ಟ್ರೇಡ್ ಯೂನಿಯನ್  ವತಿಯಿಂದ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದಶರ್ಿ ಎಸ್.ಎನ್.ಪತ್ತಾರ ಅವರಿಗೆ  ಮನವಿ ನೀಡಿದರು.  

           ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆ, ಎಪಿಎಂಸಿ ಕಾಯಕ ನಿಧಿಯಡಿ 60 ವರ್ಷ ದಾಟಿದ ಕಾಮರ್ಿಕರಿಗೆ 50 ಸಾವಿರ ನಿವೃತ್ತಿ ಪರಿಹಾರ ಮತ್ತು ಪಿಂಚಣಿ, ಪ್ರತಿ ಎರಡು ವರ್ಷಕ್ಕೊಮ್ಮೆ ಬೆಲೆ ಏರಿಕೆ ಆಧಾರದಲ್ಲಿ ಕೂಲಿ ಪರಿಷ್ಕರಣೆ, ಮಾರುಕಟ್ಟೆಗಳಲ್ಲಿ ಚೀಲಗಳ ಭಾರವನ್ನು 50 ಕೆಜಿ ಗೆ ಸೀಮಿತ,  ಬೇಡಿಕೆಗಳ ಆಧಾರದಲ್ಲಿ ಮಹಿಳೆಯರು ಸೇರಿದಂತೆ ಲೈಸೆನ್ಸ್ ನೀಡುವುದು ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಕೃಷಿ ಮಾರುಕಟ್ಟೆಯ ಪ್ರಮುಖ ದ್ವಾರದಿಂದ  ಹಮಾಲರ ಅಧ್ಯಕ್ಷ ಪೈಗಂಬರ ಪೆಂಡಾರಿ ನೇತೃತ್ವದಲ್ಲಿ ನೂರಾರು ಶ್ರಮಿಕರು ಪಾದಯಾತ್ರೆ ಮೂಲಕವಾಗಿ ಮಾರುಕಟ್ಟೆ ಕಚೇರಿಗೆ ಆಗಮಿಸಿ ಮನವಿ ನೀಡಿದರು.