ಉಚಿತ ತ್ರಿಫೇಸ್ ವಿದ್ಯುತ್ಗೆ ಆಗ್ರಹ


ಲೋಕದರ್ಶನ ವರದಿ

ಬ್ಯಾಡಗಿ24: ಸಂಪೂರ್ಣ ಸಾಲಮನ್ನಾ, ಬಾಕಿ ಉಳಿದ ಬೆಳೆವಿಮೆ ಬಿಡುಗಡೆ, ವನ್ಯಜೀವಿಗಳಿಂದ ರೈತರ ಸಂರಕ್ಷಣೆ ಸೇರಿದಂತೆ ದಿನದ 24 ತಾಸು ಉಚಿತ ತ್ರಿಫೇಸ್ ವಿದ್ಯುತ್ಗೆ ಆಗ್ರಹಿಸಿ ರೈತ ಹೋರಾಟ ಸಮಿತಿ ಸದಸ್ಯರು ಸೋಮವಾರ ತಹಶೀಲ್ಧಾರರಿಗೆ ಮನವಿ ಸಲ್ಲಿಸುವ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಮುರಿಗೆಪ್ಪ ಶೆಟ್ಟರ, ಬೆಳೆವಿಮೆ ಹಣ ಬಿಡುಗಡೆಯಾಗದಿರುವ ರೈತರ ಯಾದಿಯನ್ನು ಪ್ರಕಟಿಸಬೇಕು 3 ವರ್ಷ ಗತಿಸಿದರೂ ರೈತರ ಖಾತೆಗಳಿಗೆ ಬೆಳೆವಿಮೆ ಜಮಾ ಏಕೆ ಮಾಡಿಲ್ಲ..? ಇದರ ಬಗ್ಗೆ ಜಿಲ್ಲಾಡಳಿತ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದರು. 

  ಕಳೆದ ಎರಡು ವರ್ಷಗಳಿಂದ ರೈತರು ತುಂಬಿದ್ದ ಬೆಳೆವಿಮೆ ಪಡೆಯದೇ ಉಳಿದುಕೊಂಡಿರುವ ಫಲಾನುಭವಿಗಳ ಯಾದಿ ಪಡೆಯಲು 3 ವರ್ಷಗಳ ಕಾಲಾವಕಾಶಬೇಕಾಯಿತು, ರೈತರಿಗೆ ವಿತರಣೆಯಾಗದ ಸುಮಾರು ರೂ.11 ಕೋಟಿ ಹಣ ಬ್ಯಾಂಕಿನಲ್ಲಿ ಉಳಿದಿದೆ ರೈತರಿಗೆ ಬಡ್ಡಿ ಸಮೇತ ವಿತರಣೆ ಮಾಡಬೇಕು ಅಲ್ಲಿಯವರೆಗೂ ಜಿಲ್ಲೆಯಲ್ಲಿರುವ ರೈತರ್ಯಾರು ಬೆಳೆವಿಮೆ ತುಂಬುವುದಿಲ್ಲ ಎಂದು ಎಚ್ಚರಿಸಿದರು.

ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ: ರೈತ ಹೋರಾಟ ಸಮಿತಿ ಕೇವಲ ಹೋರಾಟಕ್ಕಷ್ಟೇ ಸೀಮಿತವಲ್ಲ, ಅಧಿಕಾರಿಗಳು ತಪ್ಪು ಮಾಡಿದಾಗ ಅವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ, ಬೆಳೆವಿಮೆ ಯಾವುದೇ ಹಣ ಬಾಕಿ ಉಳಿದಿಲ್ಲ ಎಂಬುದಾಗಿ ವಿಮೆ ಕಂಪನಿಯರು ಹೇಳುತ್ತಾರೆ, ಹಾಗಿದ್ದರೆ ಬಿಡುಗಡೆಯಾದಂತಹ ಬೆಳೆವಿಮೆ ಎಲ್ಲಿ ಹೋಯಿತು..? ಎಂದು ಪ್ರಶ್ನಿಸಿದರು.

ಪರಿಹಾರ ಮೊತ್ತ ಹೆಚ್ಚಿಸಿ: ಹನುಮಂತಪ್ಪ ಮಾಗೋಡ ಮಾತನಾಡಿ, ಜಿಂಕೆಗಳ ಹಾವಳಿಯಿಂದ ಉತ್ತರ ಕನರ್ಾಟಕದ ಬಹುತೇಕ ರೈತರು ಕಂಗಾಲಾಗಿದ್ದಾರೆ, ಅವುಗಳನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗದ ವಿಷಯ, ಅಲ್ಲದೇ ಅರಣ್ಯ ಇಲಾಖೆ ರೈತರಿಗೆ ನೀಡುತ್ತಿರುವ ಪರಿಹಾರದ ಮೊತ್ತ ದುಡಿದಿದ್ದರಲಿ ಬಿತ್ತನೆ ಕಾರ್ಯಕ್ಕೆ ಬಳಸಿದ ಹಣವೂ ಮರಳಿ ಸಿಗದಂತಾಗಿದೆ, ಹೀಗಿರುವಾಗ ನಿಮ್ಮ ಪರಿಹಾರ ನಮಗೆ ಬೇಡ ಆದರೆ ನಿಮ್ಮ ಪ್ರಾಣಿಯಗಳನ್ನು ರೈತರ ಹೊಲಗಳಿಗೆ ನುಗ್ಗದಿದ್ದರೇ ಸಾಕು ಎಂದರು.

ರೈತನ ಮಕ್ಕಳಾಗಿದ್ದರೇ ಸ್ಪಂದಿಸಿ: ಈರಪ್ಪ ಸಂಕಣ್ಣನವರ ಮಾತನಾಡಿ, ಬೆಳೆವಿಮೆ ರೈತನ ಹಕ್ಕು, ಆದರೆ ನಯವಾಗಿ ರೈತರಿಂದ ವಿಮೆ ಹಣ (ಪ್ರೀಮಿಯಂ) ತುಂಬಿಸಿಕೊಳ್ಳುವ ವಿಮೆ ಕಂಪನಿಗಳು ಪರಿಹಾರ ನೀಡು ವಾಗ ಇಲ್ಲದ ಸಬೂಬುಗಳನ್ನು ನೀಡಿ ಸತಾಯಿಸುತ್ತಿವೆ, ಇಷ್ಟೆಲ್ಲಾ ನಡೆದರೂ ರಾಜಕಾರಣಿಗಳು ಮತ್ತು ಅಧಿಕಾರಿಗಳು ವಿಮೆ ಕಂಪನಿಗಳ ಏಜೆಂಟ್ರಂತೆ ವತರ್ಿಸುತ್ತಿರುವುದು ದುರಂತದ ವಿಷಯ ರೈತರ ಮಕ್ಕಳಾಗಿದ್ದರೇ ನಮ್ಮ ನೋವಿಗೆ ಸ್ಪಂದಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಶಿಧರ ಗೊಲ್ಲರಹಳ್ಳಿಮಠ, ರಾಜು ಚನ್ನಗೌಡ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.