ಯಶವಂತಪುರ ಮಾದರಿಯಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಮನವಿ

ಲೋಕದರ್ಶನ ವರದಿ

ಗದಗ 01: ವಿಶ್ವದಜರ್ೆ ನಿಲ್ದಾಣ ಎಂದು ಗುರುತಿಸಿರುವ ಗದಗ ರೈಲ್ವೆ ನಿಲ್ದಾಣವನ್ನು ಯಶವಂತಪುರ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿ ಸಂಸದ ಶಿವಕುಮಾರ ಉದಾಸಿ ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜೇಶ ಮೋಹನ ಅವರಿಗೆ ಕನರ್ಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಗದಗ ಜಿಲ್ಲಾ ಘಟಕದಿಂದ ಶುಕ್ರವಾರ ಗದಗ ರೈಲ್ವೆ ನಿಲ್ದಾಣದಲ್ಲಿ ಮನವಿ ಸಲ್ಲಿಸಲಾಯಿತು.  

ಸದ್ಯ ಗದಗ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಪ್ರಯಾಣಿಕರ ಮೇಲ್ಸೇತುವೆಯನ್ನು ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಎಕ್ಸಿಲೇಟರ್ (ಸ್ವಯಂಚಾಲಿತ ಮೆಟ್ಟಿಲುಗಳು) ಅಳವಡಿಸಬೇಕು. ಗದಗನಿಂದ ಸೊಲ್ಲಾಪುರಕ್ಕೆ ನಿತ್ಯ ಬೆಳಗ್ಗೆ4 ಗಂಟೆಗೆ, ಮುಂಜಾನೆ 7ಕ್ಕೆ, ಮುಂಜಾನೆ 10ಕ್ಕೆ, ಮಧ್ಯಾಹ್ನ 2ಕ್ಕೆ, ಸಂಜೆ 6ಕ್ಕೆ, ರಾತ್ರಿ 8.30ಕ್ಕೆ ಹಾಗೂ ರಾತ್ರಿ 10ಕ್ಕೆ ರೈಲುಗಳನ್ನು ಓಡಿಸಬೇಕು. ಹುಬ್ಬಳ್ಳಿವರೆಗೆ ಬರುತ್ತಿರುವ ಬೆಂಗಳೂರು ಇಂಟರ್ಸಿಟಿ ಹಾಗೂ ಜನಶತಾಬ್ದಿ ರೈಲುಗಳನ್ನು ಗದಗ ವರೆಗೆ ವಿಸ್ತರಿಸಬೇಕು. ಐತಿಹಾಸಿಕ ಸ್ಥಳ ವಿಜಯಪುರದಿಂದ ಗುಂತಕಲ್ ವರೆಗೆ ಈ ಹಿಂದೆ ಇದ್ದ ಚಾಲುಕ್ಯ ಎಕ್ಸ್ಪ್ರೆಸ್ ರೈಲನ್ನು ಪುನರಾರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿಲಾಗಿದೆ.

ಗದಗ- ಹಾವೇರಿ, ಗದಗ- ಹರಪನಹಳ್ಳಿ, ಗದಗ-ಕಣಗಿನಹಾಳ-ನರೇಗಲ್-ಗಜೇಂದ್ರಗಡ- ಕುಷ್ಟಗಿ- ಲಿಂಗಸೂರು ಮಾರ್ಗವಾಗಿ ವಾಡಿ ತಲುಪುವ ನೂತನ ರೈಲ್ವೆ ಮಾರ್ಗಗಳನ್ನು ಶೀಘ್ರ ಪ್ರಾರಂಭಿಸಿ ಉತ್ತರ ಕನರ್ಾಟಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

     ಗದಗ ರೈಲ್ವೆ ನಿಲ್ದಾಣ ಬಳಿ ಬೃಹತ್ ಸರಕು ಸಾಗಣೆ ರೈಲ್ವೆ ಯಾರ್ಡನ್ನು ಪ್ರಾರಂಭಸಬೇಕು. ಗದಗ-ಮೀರಜ್, ಗದಗ-ಬೆಂಗಳೂರು, ಗದಗ-ಗುಂತಕಲ್, ಗದಗ-ಸೊಲ್ಲಾಪುರ  ರೈಲು ಮಾರ್ಗಗಳನ್ನು ವಿದ್ಯುದ್ಧೀಕರಣಗೊಳಸಬೇಕು. ಅಂತರ್ರಾಜ್ಯಗಳಲ್ಲಿ ಚಲಿಸುವ ರೈಲುಗಳಿಗೆ ವಿಶ್ವಮಾನ್ಯ ಸಂತ ಶ್ರೇಷ್ಠರಾದ ಗದುಗಿನ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಹಾಗೂ ತುಮಕೂರ ಸಿದ್ದಗಂಗಾ ಮಠದ ನಡೆದಾಡುವ ದೇವರೆಂದೇ ಖ್ಯಾತರಾದ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿಲಾಗಿದೆ.

    ಮುಂಬಯಿ ಹಾಗೂ ವಾರಣಾಸಿಗೆ ಗದಗ ಮಾರ್ಗವಾಗಿ ಸಂಚರಿಸುವ ರೈಲುಗಳನ್ನು ಹೊಳೆಆಲೂರ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು. ಸೊಲ್ಲಾಪುರದಿಂದ ಗದಗ ಮಾರ್ಗವಾಗಿ ಗೋವಾಗೆ ತೆರಳುವ ನೂತನ ರೈಲನ್ನು ಆರಂಭಿಸಬೇಕು. ಉತ್ತರ ಹಾಗೂ ದಕ್ಷಿಣ ಭಾರತಕ್ಕೆ ಸಂಪರ್ಕ ಕಲ್ಪಿಸುವ ನೂತನ ರೈಲುಗಳನ್ನು ಶೀಘ್ರ ಆರಂಭಿಸಬೇಕು. ಮನವಿಯನ್ನು ಸ್ವೀಕರಿಸಿದ ಸಂಸದರು ಹಾಗೂ ವಿಭಾಗೀಯ ವ್ಯವಸ್ಥಾಪಕರು ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.

      ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ಅವರ ಉಪಸ್ಥಿತಿಯಲ್ಲಿ ಕನರ್ಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಗದಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ನಿಸಾರಅಹ್ಮದ ಖಾಜಿ, ರಾಜ್ಯ ಉಪಾಧ್ಯಕ್ಷರಾದ ವಿಜಯ ಮುಳಗುಂದ, ಪ್ರಧಾನ ಕಾರ್ಯದಶರ್ಿ ಬಸವಣ್ಣೆಯ್ಯ ಹಿರೇಮಠ, ಸಲಹಾ ಸಮಿತಿ ಸದಸ್ಯರಾದ ಪಕ್ಕೀರಪ್ಪ ಹೆಬಸೂರ, ಶಿರಾಜಅಹ್ಮದ ಖಾಜಿ, ಮಹೇಶ ದಾಸರ, ಎಂ.ಬಿ. ದೇಸಾಯಿ, ರಾಮಣ್ಣ ಗುಜಮಾಗಡಿ, ಸಂಗಪ್ಪ ಕೊಟ್ಟೂರಶೆಟ್ಟರ, ಯಮನೂರಸಾಬ ನದಾಫ ಸೇರಿದಂತೆ ಮತ್ತಿತರರು ಮನವಿ ಸಲ್ಲಿಸಿದರು.