ಲೋಕದರ್ಶನವರದಿ
ಬ್ಯಾಡಗಿ೦೫: ಆಣೂರ ಬುಡಪನಹಳ್ಳಿ ಕೆರೆಗಳಿಗೆ ನೀರುವ ತುಂಬಿಸುವ ಯೋಜನೆ ಜಾರಿ ಹಾಗೂ ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಮುಖ್ಯರಸ್ತೆ ಅಗಲೀಕರಣ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ಶಾಸಕ ಜನಸಂಪರ್ಕ ಕಾರ್ಯಾಲಯದಲ್ಲಿ ಶಾಸಕರ ಜೊತೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚಚರ್ೆ ನಡೆಸಿದ ಅವರು, ಅಗಲೀಕರಣ ವಿಳಂಬ ನೀತಿಯನ್ನು ಖಂಡಿಸಿ ಸೆ.14 ಮುಖ್ಯರಸ್ತೆ ಬಂದ ಮಾಡಿ ಹೋರಾಟ ಹಮ್ಮಿಕೊಂಡಿರುವ ವಿಷಯವನ್ನು ಮನದಟ್ಟು ಮಾಡಿದರು.
ರೈತ ಸಂಘದ ಮಲ್ಲಿಕಾಜರ್ುನ ಬಳ್ಳಾರಿ, ಕಳೆದೊಂದು ವರ್ಷದ ಹಿಂದೆ ಆ.15 ರಂದು ನಡೆದ ಪ್ರತಿಭಟನೆಯಲ್ಲಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಅಗಲೀಕರಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದೀ ರಿ ಆದರೆ ಒಂದು ವರ್ಷ ಕಳೆಯುತ್ತಾ ಬಂದರೂ ಇಲ್ಲಿಯರೆಗೂ ಅಗಲೀಕರಣ ಮಾಡಲು ಸಾಧ್ಯವಾಗಿಲ್ಲ ಆದ್ದರಿಂದ ಸೆ.14 ಕ್ಕೆ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ಸೆ.22 ವರೆಗೆ ಕಾಯಿರಿ: ರೈತ ಸಂಘದ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮುಖ್ಯರಸ್ತೆ ಅಗಲೀಕರಣವೇ ನಮ್ಮ ಮುಖ್ಯ ಗುರಿ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
ಇದೇ ಕಾರಣಕ್ಕಾಗಿ ಕಳೆದ ವರ್ಷ ಯಾವುದೇ ರಸ್ತೆ ಕಾಮಗಾರಿಗಳನ್ನು ಕ್ಷೇತ್ರಕ್ಕೆ ತೆಗೆದುಕೊಂಡಿಲ್ಲ, ಸಮ್ಮಿಶ್ರ ಸರಕಾರ ನಂತರದ ಅತಂತ್ರ ಸಕರ್ಾರ ಕಾರಣ ಯೋಜನೆಗೆ ಹಿನ್ನಡೆಯಾಗಿತ್ತು.
ಅಲ್ಲದೇ ರೂ.10 ಕೋಟಿ ಹೆಚ್ಚಿನ ಕಾಮ ಗಾರಿಗಳಿಗೆ ಸಚಿವ ಸಂಪುಟದ ಅನುಮೋದನೆ ಸಿಗಬೇಕಿದೆ ಆದ್ದರಿಂದ ಮುಂದಿನ ಸೆ.22 ವರೆಗೆ ಚಿತಾಳ್ಮೆಯಿಂದ ಇರುವಂತೆ ರಸ್ತೆ ಅಗಲೀಕರಣ ಹಾಗೂ ಬ್ಯಾಡಗಿ ಪುರಸಭೆ ವ್ಯಾಪ್ತಿ ಹೆಚ್ಚಳ ಕುರಿತಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ, ತಾಪಂ.ಸದಸ್ಯ ವೈ.ಎನ್.ಕರೇಗೌಡ್ರ, ರೈತ ಮುಖಂಡರಾದ ಕಿರಣ ಗಡಿಗೋಳ, ಮಲ್ಲೇಶಪ್ಪ ಡಂಬಳ, ಚಿಕ್ಕಪ್ಪ ಛತ್ರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.