ಗುಂಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಮನವಿ

Request for early completion of pit work

ಬಳ್ಳಾರಿ 22: ರಾಜ್ ಕಾಲುವೆ ರಸ್ತೆಯಲ್ಲಿ ಗುಂಡಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಮತ್ತು ಯುವಸೇನ ಸೋಷಿಯಲ್ ಆ್ಯಕ್ಷನ್ ಕ್ಲಬ್ ಅಧ್ಯಕ್ಷರು, ಮೇಕಲ ಈಶ್ವರರೆಡ್ಡಿ ಮನವಿ ಸಲ್ಲಿಸಿದರು. 

ಬಳ್ಳಾರಿ ನಗರದ ವಾರ್ಡ್‌ ನಂ. 15, ಬಾಲಾಜಿ ರಾವ್ ರಸ್ತೆ ಕೊನೆಯ ಭಾಗದಲ್ಲಿ ವಡ್ಡರಬಂಡೆ ರಾಜ್ ಕಾಲುವೆ ರಸ್ತೆಯಲ್ಲಿ ದೊಡ್ಡ ಗುಂಡಿ ತೆಗೆದು ಸುಮಾರು ಒಂದು ತಿಂಗಳಾದರೂ ಕಾಮಗಾರಿ ಕಾರ್ಯ ಪ್ರಾರಂಭ ಮಾಡಿರುವುದಿಲ್ಲ ಏಕೆ?  

ಈ ರಸ್ತೆಯು ಮಧ್ಯಭಾಗದಲ್ಲಿರುವುದರಿಂದ ಹಾಗೂ ಅಕ್ಕ-ಪಕ್ಕದಲ್ಲಿ ಗ್ಯಾರೇಜ್‌ಗಳು ಮತ್ತು ಲಗೇಜ್ ಆಟೋಗಳು ಮತ್ತು ಭಾರಿ ವಾಹನಗಳು ನಿಲ್ಲ್ಲುವುದರಿಂದ ಈ ಸದರಿ ರಸ್ತೆಯಲ್ಲಿ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ಸಂಚಾರಕ್ಕೆ ಹಾಗೂ ಓಡಾಡುವುದಕ್ಕೆ ತುಂಬಾ ತೊಂದರೆ ಆಗುತ್ತಿದ್ದು, ಇದನ್ನು ಸರಿಪಡಿಸುವುದರಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾಕೇ ನಿರ್ಲಕ್ಷ್ಯತನ ತೋರುತ್ತಿದ್ದಾರೆನ್ನುವುದು ತಿಳಿಯುತ್ತಿಲ್ಲ, ಒಂದು ವೇಳೆ ರಾತ್ರಿ ಸಮಯದಲ್ಲಿ ಅಪಘಾತವಾದರೇ ಅದಕ್ಕೆ ಯಾರು ಹೊಣೆಗಾರರು? ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಾದ ತಾವುಗಳು ದಯಮಾಡಿ ಸದರಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಸಲ್ಲಿಸಲಾಯಿತು. 

ಈ ವೇಳೆ ಕಾರ‌್ಯರ್ತರಾದ ಎಸ್‌.ಕೃಷ್ಣ, ಜಿ.ಎಂ. ಭಾಷ, ಪಿ. ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ, ಶ್ರೀನಿವಾಸರೆಡ್ಡಿ ಎಂ, ಎಂ.ಕೆ. ಜಗನ್ನಾಥ, ಪಿ. ನಾರಾಯಣ, ಕೆ. ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಇದ್ದರು.