ಹೊಳೆ ಇಟಗಿಯಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಮನವಿ

ಲೋಕದರ್ಶನ ವರದಿ

ಶಿರಹಟ್ಟಿ: ತಾಲೂಕಿನ ಹೋಳೆ ಇಟಗಿ ಗ್ರಾಮದ ಜನರ ಬಹುದಿನದ ಬೇಡಿಕೆಯಾದ ಬಸ್ ತಂಗುದಾಣವನ್ನು ನಿರ್ಮಿಸಿಕೊಡುವಂತೆ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಳಗ) ಶಿರಹಟ್ಟಿ ತಾಲೂಕ ಘಟಕ ವತಿಯಿಂದ ತಹಶಿಲ್ದಾರ ಯಲ್ಲಪ್ಪ ಗೊಣೆಣ್ಣವರ ಅವರಿಗೆ ಮನವಿ ನೀಡಲಾಯಿತು.

ಮನವಿ ನಂತರ ಮಾತನಾಡಿದ ಕರವೇ ಸದಸ್ಯರು ಸುಮರು 7 ರಿಂದ 8 ಸಾವಿರ ಜನಸಂಖ್ಯೆ ಹೊಂದಿರುವ ಹೋಳೆಇಟಗಿ ಗ್ರಾಮದಲ್ಲಿ ಈವರೆಗೆ ಸಾರಿಗೆ ಇಲಾಖೆಯಾಗಲಿ ಅಥವಾ ಸ್ಥಳಿಯ ಗ್ರಾಮ ಪಂಚಾಯತಿಯಾಗಿಲಿ ಬಸ್ ತಂಗುದಾಣವನ್ನು ನಿಮರ್ಿಸಲು ಮುಂದಾಗದಿರುವದು ವಿಷಾದದ ಸಂಗತಿ. ಗದಗ ಜಿಲ್ಲಾ ಕೇಂದ್ರದಿಂದ ರಾಣೇಬಿನ್ನೂರ ರಸ್ತೆ ಸಂಪರ್ಕ ಹೊಳೆಇಟಗಿ ಗ್ರಾಮದ ಮುಖಾಂತರ ಹೋಗುತಿದ್ದು ಕಾರಣ ದಿನನಿತ್ಯ ಹಲವು ಸರಕಾರಿ ವಾಹನಗಳು ಓಡಾಡುತ್ತವೆ. ಆದರೆ ಪ್ರಯಾಣಿಕರಿಗೆ ಬಸನಲ್ಲಿ ಪ್ರಯಾಣಿಸಲು ಒಂದು ಕಡೆ ಕಾಯಲು ಜಾಗವಿಲ್ಲದಿರುವದು ಖಂಡಿನೀಯ. ಕಾರಣ ಕೂಡಲೆ ಸಂಬಂಧ ಪಟ್ಟ ಇಲಾಖೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಶೀಘ್ರವಾಗಿ ಬಸ ತಂಗುದಾಣ ಕಾರ್ಯ ಆರಂಭಿಸದಿದ್ದರೆ ಕರವೇ ಮುಖಾಂತರ ರಸ್ತೆ ಬಂದಮಾಡಿ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು. ಕರವೇ ತಾಲೂಕ ಅಧ್ಯಕ್ಷ ರಾಜು ಶಿರಹಟ್ಟಿ, ನಿಂಗನಗೌಡಾ ಮಾಲಿಪಾಟೀಲ, ನೀಲನಗೌಡಾ ಪಾಟೀಲ, ಅಜಯ ಕಂಬಳಿ, ಸಿದ್ದಪ್ಪ ವಡ್ಡರ, ಬಸವರಾಜ ವಡವಿ, ಮಾತೇಶ ಮಾನಮ್ಮನವರ, ಶಿವರಾಜ ಸುಣಗಾರ, ನಜೀರಸಾಬ ಮಕಾಂದಾರ, ನಾಗರಾಜ ಕೇರೂರ, ಶಶಿ ಗಾಣಿಗೇರ ಮುಂತಾದವರು ಇದ್ದರು.