ಸಂಗೀತ ಶಿಕ್ಷಕರ ನೇಮಕ್ಕೆ ಆಗ್ರಹಿಸಿ ಮನವಿ

 ಗುಳೇದಗುಡ್ಡ, ಜ.16: ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸಂಗೀತ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವ ಮೂಲಕ ನಿರುದ್ಯೋಗಿ ಸಂಗೀತ ಪದವಿಧರರಿಗೆ   ಸರ್ಕಾರದ ಆಸರೆಯಾಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ  ರಾಜ್ಯ ಗಾನಯೋಗಿ ಸಂಗೀತ ಪರಿಷತ್ನ ಗುಳೇದಗುಡ್ಡ ಘಟಕದಿಂದ ಮಂಗಳವಾರ ತಹಶೀಲ್ದಾರರಿಗೆ ಮನವಿ ಸಲ್ಲಿಲಾಯಿತು. 

  ಸಂಸ್ಕೃತ ಮತ್ತು ಉದರ್ು ಪಾಠ ಶಾಲೆಗಳಿಗೆ ಅನುದಾನ ನೀಡುವ ಮಾದರಿಯಲ್ಲಿ ಸಂಗೀತ ಮತ್ತು ನೃತ್ಯ ಕಲಾ ಪಾಠಶಾಲೆಗಳಿಗೆ ಸಕರ್ಾರ ಅನುದಾನ ನೀಡಬೇಕು. ನಿಯಮ ಬಾಹಿರವಾಗಿ ನಾಯಿಕೊಡೆಯಂತೆ ಹುಟ್ಟಿಕೊಂಡಿರುವ ಖಾಸಗಿ ಸಂಗೀತ ನೃತ್ಯ ಪಾಠ ಶಾಲೆಗಳಿಗೆ ಕಡಿವಾಣ ಹಾಕಬೇಕು ಮತ್ತು ಸಂಗೀತ ಶಿಕ್ಷಕರ ನೇಮಕಾತಿಯಲ್ಲಿ ತಾಳವಾದ್ಯ ಮತ್ತು ವಾದ್ಯಸಂಗೀತ ಶಿಕ್ಷಕರಿಗೂ ನೇಮಕಾತಿ ಮಾಡಿಕೊಳ್ಳಲು ಕಳೆದ ಇಪ್ಪತೈದು ವರ್ಷಗಳಿಂದ ಹೋರಾಡುತ್ತ  ಬಂದಿದ್ದೇವೆ. ಆದರೂ ಸರ್ಕಾರ  ನಮ್ಮ ಸಮಸ್ಯೆಗಳಿಗೆ  ಸರಿಯಾಗಿ ಸ್ಪಂದಿಸುತ್ತಿಲ್ಲ. ಸಕರ್ಾರ ಸಂಗೀತ ಕ್ಷೇತ್ರದ ಸಮಸ್ಯೆಗೆ ಪರಿಹರಿಸಲು ಒಂದು ನೀತಿ ರೂಪಿಸಲು ತಜ್ಞರ ಸಮಿತಿ ರಚಿಸಿ ಸರಿಯಾದ ಮಾರ್ಗಸೂಚಿಸಿ ತಯಾರಿಸಬೇಕು. ಆದಷ್ಟು ಬೇಗ ನಮ್ಮ ಬೇಡಿಗೆ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಪರಿಷತ್ನ ತಾಲೂಕು ಸಂಘಟನಾ ಕಾರ್ಯದಶರ್ಿ, ಪತ್ರಕರ್ತ ಬಸವರಾಜ ಸಿಂದಗಿಮಠ, ವಿಜಯಕುಮಾರ ನಿಡಗುಂದಿ, ಅರುಣ ಚವ್ಹಾಣ, ಸೋಮು ಕಲಬುಗರ್ಿ ವಿ.ಎಸ್. ಚಿಕ್ಕನರಗುಂದ, ಭೀಮಪ್ಪ ಹಳ್ಳೆಗೋಳ, ಸರದಾರ ಮುಂದಿನಮನಿ, ಮಹಾಂತೇಶ ಹಿರೇಮಠ, ಶಂಕರ ಸನಪಾ, ಕುಮಾರ ಚವ್ಹಾಣ,  ಶ್ರೀಶೈಲ ಕಾಳನ್ನವರ ಸೇರಿದಂತೆ ಇನ್ನೂ ಅನೇಕರು ಇದ್ದರು.