ಇತಿಹಾಸದ ನಗರಸಭಾ ಪ್ರೌಢಶಾಲೆಗೆ ಗೌರವ ಶಿಕ್ಷಕರನ್ನು ನೇಮಿಸಲು ಒತ್ತಾಯ, ಮನವಿ ಸಲ್ಲಿಕೆ
ರಾಣೇಬೆನ್ನೂರು 28 : ನಗರಸಭಾ ಪ್ರೌಢ ಶಾಲೆಗೆ ಗೌರವ ಶಿಕ್ಷಕರನ್ನು ನೇಮಿಸುವಂತೆ ಕೋರಿ, ಶಾಲಾ ಹಿತರಕ್ಷಣಾ ಸಮಿತಿಯ ವತಿಯಿಂದ, ನಗರಸಭಾ ಆಯುಕ್ತರಿಗೆ ಹಾಗೂ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ತಮ್ಮ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ, ಹೋರಾಟ ಸಮಿತಿಯ ಅಧ್ಯಕ್ಷ, ಸಾಮಾಜಿಕ ಚಿಂತಕ ಈಶ್ವರ್ ಹಾವನೂರು ಅವರು ಮಾತನಾಡಿ, ಇಂದು ಈ ಮನವಿ ಸಲ್ಲಿಸಲಾಗಿದ್ದು, ಹಳೆಯ ಶಾಲೆ ಇದಾಗಿದ್ದು, ಈ ಶಾಲೆ ಅಂದಿನ ಇತಿಹಾಸದ ರಾಣಿ ಬಿದನೂರಿನ ಐತಿಹಾಸಿಕ ಕುರುವಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಮಗೆ ಬೆಂಬಲ ನೀಡಿ ಸಹಕಾರ ನೀಡಿದ್ದಾರೆ ಪರಿಣಾಮ ಇಂದು ನಗರಸಭಾ ಪ್ರೌಢಶಾಲೆ ಯಥಾವತ್ತಾಗಿ ನಡೆದಿದೆ ಎಂದರು. ಖಾಸಗಿಕರಣದ ಪೈಪೋಟಿಯಲ್ಲಿ ಈ ಭಾಗದ ಬಡವರು, ಜನಸಾಮಾನ್ಯರು, ಮಧ್ಯಮ ವರ್ಗದವರು ಶಿಕ್ಷಣ ಪಡೆಯುವುದು ಅಸಾಧ್ಯದ ಮಾತಾಗಿದೆ. ಈ ಪ್ರೌಢಶಾಲೆ ಇರುವುದರಿಂದ ಮಕ್ಕಳ ಶಿಕ್ಷಣ ಪರಿಪೂರ್ಣತೆಗೆ ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗಿದೆ. ಅದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದೇವೆ ಎಂದರು. ಪ್ರಸ್ತುತ ಶಾಲೆಯಲ್ಲಿ ಸಾಕಷ್ಟು ಪ್ರಬುದ್ಧ ಶಿಕ್ಷಕರಿದ್ದಾರೆ. ಮತ್ತಷ್ಟು ಶಿಕ್ಷಕರ ಕೊರತೆ ಇಲ್ಲಿದೆ ಅದಕ್ಕಾಗಿ ನಗರಸಭೆ ಕೂಡಲೇ ಗೌರವ ಅತಿಥಿ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ವಿನಮ್ರ ಮನವಿ ಮಾಡಿದರು.ಮಾರ್ಚ್ 4ರಂದು ನಡೆಯುವ ಸಭೆಯಲ್ಲಿ ವಿಷಯ ಇಟ್ಟು ಠರಾಯಿಸುವುದಾಗಿ ಪೌರಾಯುಕ್ತರು ಮತ್ತು ಅಧ್ಯಕ್ಷರು ಭರವಸೆ ನೀಡಿರುವುದಾಗಿ ಮಾಧ್ಯಮಕ್ಕೆ ಈಶ್ವರ್ ಹಾವನೂರ ಅವರು, ಸ್ಪಷ್ಟಿಕರಿಸಿದರು.ಶಾಲಾ ಭೌತಿಕ ಅಭಿವೃದ್ಧಿಗಾಗಿ ಈಗಾಗಲೇ ನಗರಸಭೆಯವರು 30 ಲಕ್ಷ ರೂಪಾಯಿಗಳನ್ನು ಮಂಜೂರ ಮಾಡಿದ್ದಕ್ಕೆ ಹೋರಾಟ ಸಮಿತಿಯು ಆಡಳಿತಕ್ಕೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ಹಾವನೂರ ಮತ್ತು ಡಾ,ಎಸ್. ಎಲ್.ಪವಾರ್ ಹೇಳಿದರು.ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಪ್ರೌಢಶಾಲಾ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ವಿ.ವೀ. ಹರಪನಹಳ್ಳಿ, ಡಾ, ಎಸ್.ಎಲ್. ಪವಾರ, ಶ್ರೀಮತಿ ಗಂಗಮ್ಮ ಹಾವನೂರ,ನೀಲಕಂಠಪ್ಪ ಕುಸಗೂರ, ಅಮರನಾಥ ಭೂತೆ, ಮನೋಹರ ಮೆಹರವಾಡೆ,ಪ್ರಭುಸ್ವಾಮಿ ಕರ್ಜಗಿಮಠ, ರುದ್ರ್ಪ ಮಾಳೆನಹಳ್ಳಿ, ಶಿಕ್ಷಕ ಹಾಲಗೇರಿ,ಚಂದ್ರಣ್ಣ ರಾಮಾಳದ, ಪರಮೇಶ ಕರೆತಿಮ್ಮಣ್ಣವರ, ಸೇರಿದಂತೆ ಹೋರಾಟ ಸಮಿತಿಯ ಮತ್ತಿತರ ಮುಖಂಡರು ಶಾಲಾ ಅಭಿಮಾನಿಗಳು ಪಾಲ್ಗೊಂಡಿದ್ದರು.