ಲೋಕದರ್ಶನ ವರದಿ
ಬೈಲಹೊಂಗಲ 02: ಪದವಿ ಪರೀಕ್ಷೆಗಳಲ್ಲಿ ಒಂದು, ಎರಡು ವಿಷಯಗಳಲ್ಲಿ ಅನುರ್ತಿಣಗೊಂಡು ವಿದ್ಯಾರ್ಥಿಗಳಿಗೆ ಗೊಲ್ಡನ್ ಚಾನ್ಸ್ ಪರೀಕ್ಷೆ ನಡೆಸುವ ಮೂಲಕ ಅವರಿಗೆ ಪದವಿದರರಾಗಲು ವಿಶ್ವವಿದ್ಯಾಲಯಗಳು ಅನೂಕೂಲ ಮಾಡಿ, ಅವರಿಗೆ ಹೆಚ್ಚುವರಿ ವಿದ್ಯಾಬ್ಯಾಸಕ್ಕೆ ಸಹಕರಿಸಬೇಕೆಂದು ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ, ಉನ್ನತ ಶಿಕ್ಷಣ ಸಚಿವರಿಗೆ, ಕುಲಪತಿಗಳಿಗೆ ಸೋಮವಾರ ಅಂಬೇಡ್ಕರ ಯುವ ಸೇನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಅಂಬೇಡ್ಕರ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ.ಅರ್ಜುನ ಬಂಡಿ ಮಾತನಾಡಿ, ವಿಷಯಗಳನ್ನು ಬ್ಯಾಕ್ ಇಟ್ಟುಕೊಂಡು ಅರ್ಧಪದವಿಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನಿರುದ್ಯೋಗಿಗಳಾಗಿ ಯುವಕರು ಅಲೇದಾಡುತ್ತಿದ್ದಾರೆ. ಈಗಾಗಲೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರಾರಂಭವಾದನಿಗಿಂದಲೂ ಇಲ್ಲಿವ ರೆಗೂ ಒಂದು ಬಾರಿಯೂ ಗೋಲ್ಡನ್ ಚಾನ್ಸ್ ಪರೀಕ್ಷೆಗೆ ವಿಶ್ವವಿದ್ಯಾಲಯ ಅನುಮತಿ ನೀಡಿಲ್ಲ. ಹೀಗೆ ಮಾಡಿದರೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದಂತಾಗುತ್ತದೆ ಆದ ಕಾರಣ ಅಂತಹ ಯುವಕರಿಗೆ ಪುನ: ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು ಅವರ ಜೀವನ ಸುಧಾರಿಸಿಕೊಂಡು ಹೋಗಲು ಒಂದು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ರಾಜ್ಯಾಧ್ಯಕ್ಷ ಫಕಿರಪ್ಪ ಹೊಸಮನಿ, ಪರಶುರಾಮ ರಾಯಬಾಗ, ಕಿರಣ ಹಂಚಿನಮನಿ, ಅನಿಲ ಚಲವಾದಿ, ಸುರೇಶ ಮಾದರ, ಮಹೇಶ ಕಲಕುಟಕರ, ಮಂಜುನಾಥ ಅಗಸಗಿ, ದೇವರಾಜ ವಕ್ಕುಂದ ಮಾರುತಿ ಕೊಂಡೂರ ಹಾಗೂ ಪದಾಧಿಕಾರಿಗಳು ಇದ್ದರು.