ಲೋಕದರ್ಶನ ವರದಿ
ವಿಜಯಪುರ 29: ರಾಜ್ಯದ ಎಲ್ಲ ಕೃಷಿ ಪ್ರಶಸ್ತಿ ಪಡೆದುಕೊಂಡವರ ಸಮಗ್ರ ತನಿಖೆ ನಡೆಸಲಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣನವರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾ ಮಾನವತಾವಾದಿ ಅಂಬೇಡ್ಕರ್ ಸಿದ್ಧಾಂತ ಸೇನೆಯ ಸಂಸ್ಥಾಪಕರಾದ ಸುಧಾಕರ ಕನಮಡಿ ಮಾತನಾಡಿ, ರಾಜ್ಯದ ಕೃಷಿ ಪ್ರಶಸ್ತಿಗೆ ತನ್ನದೇ ಆದ ಗೌರವ, ಘನತೆ ಇರುತ್ತದೆ. ಅದಕ್ಕೆ ಪ್ರತ್ಯೇಕವಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿರುತ್ತದೆ. ಸಮಿತಿಯ ಪದಾಧಿಕಾರಿಗಳು ಯಾರನ್ನು ಗುರುತಿಸುತ್ತಾರೋ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಅರವಿಂದ ಕುಲಕಣರ್ಿ, ಸಿದ್ರಾಮಪ್ಪ ರಂಜಣಗಿ ನಮ್ಮ ಬೆಳವಣಿಗೆಯನ್ನು ಸಹಿಸಲಿಕ್ಕಾಗದೆ ಈ ರೀತಿ ಒಂದು ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಪ್ರತ್ಯೇಕವಾಗಿ ನಮ್ಮನ್ನು ಟಾಗರ್ೆಟ್ ಮಾಡಿದ್ದಾರೆ. ಇದರಿಂದಲೇ ಅವರು ವಯಕ್ತಿಕವಾಗಿ ಮಾನವನ್ನು ಹರಾಜು ಮಾಡುವ ಸಂಗತಿ ಎದ್ದು ತೋರಿಸುತ್ತದೆ.
ಈ ಸಂದರ್ಭ ಕೃಷಿ ಪ್ರಶಸ್ತಿ ವಿಜೇತ ಮಲ್ಲಪ್ಪ ಬಿದರಿ ಮಾತನಾಡಿ, ಒಬ್ಬ ಭ್ರಷ್ಠ ಕೃಷಿ ಅಧಿಕಾರಿಯ ಮಾತು ಕೇಳಿ ಇವರು ನಮ್ಮ ಕುಟಂಬವನ್ನು ಟಾಗರ್ೆಟ್ ಮಾಡುತ್ತಿದ್ದಾರೆ. ಅದರಂತೆ ನಾವು ಹಿಂದುಳಿದ ವರ್ಗದವರಾಗಿದ್ದು ಆ ಅಧಿಕಾರಿ ಮೇಲ್ವರ್ಗದವಗಿದ್ದು ಅವರ ಮಾತು ಕೇಳಿ ಈ ರೀತಿಯಾಗಿ ನಮ್ಮ ಮನೆತನದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.
ಹಿಂದುಳಿದ ವರ್ಗದ ಕುಟುಂಬ ಬೆಳವಣಿಗೆ ಹಾಗೂ ನನ್ನ ಬೆಳವಣಿಗೆ ಸಹಿಸದೇ ಸುಖಾ ಸುಮ್ಮನೆ ಇವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರು ನಿಜವಾದ ರೈತಪರ ಹೋರಾಟಗಾರರೇ ಎನ್ನುವ ಪ್ರಶ್ನೆ ನನ್ನಲ್ಲಿ ಉದ್ಭವಿಸುತ್ತಿದೆ. ಅವರು ರೈತರಾಗಿದ್ದರೇ ರಾಜ್ಯದ ಎಲ್ಲಾ ಕೃಷಿ ಪ್ರಶಸ್ತಿ ಪಡೆದುಕೊಂಡವರ ಹೊಲಕ್ಕೆ ಭೇಟಿ ನೀಡಬೇಕಾಗಿತ್ತು. ಅವರು ನಮ್ಮ ಹೊಲಕ್ಕೆ ಭೇಟಿ ನೀಡಿದ್ದು ನಮಗೂ ಸಂತೋಷ. ನಮ್ಮ ಹೊಲಕ್ಕೆ ಭೇಟಿ ನೀಡಿದಂತೆ ಎಲ್ಲಾ ಪ್ರಶಸ್ತಿ ವಿಜೇತರ ಹೊಲಕ್ಕೂ ಭೇಟಿ ನೀಡಿ ಅದಕ್ಕೂ ನಮ್ಮನ್ನು ಕರೆದರೂ ನಾವು ಬರುತ್ತೇವೆ. ಅದು ಬಿಟ್ಟು ನಮ್ಮ ಹೊಲಕ್ಕೆ ಭೇಟಿ ನೀಡಿದ್ದು ಇವರ ಉದ್ದೇಶ ಏನಂತಾ ಗೊತ್ತಾಗುತ್ತದೆ.
ನಮ್ಮದು ರಾಜಕಾರಣ ಮನೆತನವಲ್ಲ. ನಮ್ಮದು ಕೃಷಿ ಕುಟುಂಬವಾಗಿದ್ದು ಯಾವುದೇ ರೀತಿಯ ಲಾಭಿಮಾಡಿ ಪ್ರಶಸ್ತಿ ತೆಗೆದುಕೊಳ್ಳುವ ಗೀಳಿಗೆ ನಾವು ಇಳಿದಿರುವುದಿಲ್ಲ. ಅರವಿಂದ ಕುಲಕಣರ್ಿ, ಸಿದ್ರಾಮಪ್ಪ ರಂಜಣಗಿ ಅವರು ನಿಜವಾದ ರೈತಪರ ಕಾಳಜಿ ಉಳ್ಳವರಾಗಿದ್ದರೇ ಅವರು ರಾಜ್ಯದ ಎಲ್ಲಾ ಕೃಷಿ ಪ್ರಶಸ್ತಿ ಪಡೆದವರನ್ನು ತನಿಖೆ ಮಾಡಿಸಬೇಕು. ಅದಕ್ಕೆ ನನ್ನದು ಕೂಡ ಬೆಂಬಲವಿರುತ್ತದೆ. ಸುಖಾಸುಮ್ಮನೆ ನಮ್ಮ ಕುಟುಂಬದ ಮಾನ ಮಯರ್ಾದೆಯನ್ನು ಹರಾಜು ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಕ್ರಾಂತಿ ಸೇನೆ ರಾಜ್ಯ ಕಾರ್ಯದಶರ್ಿಗಳಾದ ಕಾಮಣ್ಣ ಗಂಗನಳ್ಳಿ,ದಲಿತ ಮುಖಂಡ ಮಲ್ಲಿಕಾಜರ್ುನ ನಾಯ್ಕೋಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.