ಲೋಕದರ್ಶನ ವರದಿ
ಬೆಳಗಾವಿ, 6: ಹಿರಿಯ ನಾಗರಿಕರು ಅನೇಕ ಸಮಸ್ಯಗಳನ್ನು ಎದುರಿಸುತ್ತಿದ್ದು ಅವರ ಸಮಸ್ಯೆಗಳು ಕುಂದುಕೊರತೆಗಳು, ಬೇಡಿಕೆಗಳು ಹಾಗೂ ಸಕರ್ಾರದಿಂದ ಅನುಷ್ಠಾನವಾಗಬೇಕಾದ ಕಾರ್ಯಕ್ರಮಗಳನ್ನು ಕೂಡಲೇ ಜಾರಿಗೆ ತರಬೇಕೆಂದು ಆಗ್ರಹಿಸಿ ಹಿರಿಯ ನಾಗರಿಕರ ಸಂಘ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಹಿರಿಯ ನಾಗರಿಕರು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಸಿಗಬೇಕಾದ ಸವಲತ್ತುಗಳು ಸಕಾಲದಲ್ಲಿ ದೊರಕುತ್ತಿಲ್ಲ. ಸಮಾಜದಲ್ಲಿ ಹಿರಿಯರಿಗೆ ಸೂಕ್ತ ಗೌರವ ಮತ್ತು ಅವರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಸಹ ಮನವಿಯಲ್ಲಿ ಕೊರಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಚಳಿಗಾಲ ಅಧಿವೇಶನ ಮುಗಿದ ನಂತರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಹಿರಿಯ ನಾಗರಿಕದ ಸಂಘದ ಪದಾಧಿಕಾರಿಗಳೊಂದಿಗೆ ಒಂದು ಜಂಟಿ ಸಭೆ ನಡೆಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕ ಸಂಘದ ರಾಜ್ಯ ಅಧ್ಯಕ್ಷರಾದ ಎ.ವಾಯ್. ಬೆಂಡಿಗೇರಿ, ಪ್ರಧಾನ ಕಾರ್ಯದಶರ್ಿ ಎಮ್.ಎಸ್. ಮುದಕವಿ, ಜಿಲ್ಲಾಧ್ಯಕ್ಷರಾದ ಡಾ. ಬಿಎಂ. ಗೋಮಾಡಿ, ಉಪಾಧ್ಯಕ್ಷ ಎಸ್.ಜಿ ಸಿದ್ನಾಳ, ಪ್ರಸಾದ ಹಿರೇಮಠ, ಪ್ರಧಾನ ಕಾರ್ಯದಶರ್ಿ ಆನಂದ ಕಕರ್ಿ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.