ಮಹಾಲಿಂಗಪುರ 11: ಪಟ್ಟಣದ ವಲಯ ಛಾಯಾಗ್ರಾಹಕ ಸಂಘದ ಪರವಾಗಿ ಪದಾಧಿಕಾರಿಗಳು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿಯವರಿಗೆ ಆಥರ್ಿಕ ಸಹಾಯಕ್ಕಾಗಿ ಮನವಿಯನ್ನು ನೀಡಿ ಭರವಸೆ ಪಡೆದರು.
ಈ ಮನವಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಸರಕಾರಿ, ಅರೆ ಸರಕಾರಿ ನೌಕರರಿಗೆ, ಸಂಘಟಿತ ಹಾಗೂ ಅಸಂಘಟಿತ ಕಾಮರ್ಿಕರಿಗೆ ಪರಿಹಾರ ಧನ ನೀಡಿದ್ದು ಅದೇ ರೀತಿಯಾಗಿ ಅಸಂಘಟಿತ ವಲಯವಾದ ಛಾಯಾಗ್ರಾಹಕರು ಎರಡು ತಿಂಗಳುಗಳಿಂದ ಸಭೆ-ಸಮಾರಂಭಗಳು, ಶಾಲಾ ಕಾಲೇಜುಗಳಿಲ್ಲದೆ ಅಂಗಡಿ ಬಾಡಿಗೆ, ಅಂಗಡಿಗೆ ಬೇಕಾಗುವ ಸಲಕರಣೆಗಳನ್ನು ಸಾಲ ಮಾಡಿ ತಂದಿರುವ ಕಾರಣ ಸಹಜವಾಗಿ ಇದರ ಬಡ್ಡಿ, ಲೈಟ್ ಬಿಲ್ಲು ಇನ್ನೂ ಅನೇಕ ತರಹದ ತೊಂದರೆಗಳು ತಲೆದೊರಿದ್ದು ಇನ್ನೂ ಎಷ್ಟು ದಿವಸ ಈ ಕೊರೊನಾ ಭಯ ಕಾಡುತ್ತೋ ಗೊತ್ತಿಲ್ಲ.
ಬಡ ಕುಟುಂಬಗಳಿಂದ ಬಂದಿರುವ ಛಾಯಾಗ್ರಾಹಕ ಹಾಗೂ ಸಹಾಯಕರಿಗೆ ಕೊರೊನಾ ಕಾಟದಿಂದ ಜೀವನೋಪಾಯದ ಎಲ್ಲ ಮಾರ್ಗಗಳು ಬಂದ ಆಗಿವೆ.ಕಾರಣ ಈ ಕಾಯಕವನ್ನೇ ಮೆಚ್ಚಿ ಜೀವನ ನಿರ್ವಹಣೆ ನಡೆಸುತ್ತಿರುವ ಈ ಕುಟುಂಬಗಳಿಗೆ ಸರಕಾರಗಳು ಆಥರ್ಿಕ ನೆರವು ನೀಡಿ ಈ ಉದ್ಯಮವನ್ನು ಪುನ ಚೇತನಗೊಳಿಸಬೇಕಾಗಿದೆ ಎಂದು ಮನವಿ ಪತ್ರದಲ್ಲಿ ಅರುಹಿಕ್ಕೊಳ್ಳಲಾಗಿದೆ.
ಈ ಸಮಯದಲ್ಲಿ ಶಿವಾನಂದ ಅಂಗಡಿ, ಮಹಾಲಿಂಗ ಸೋರಗಾವಿ, ಪ್ರಶಾಂತ ಕಡಪಟ್ಟಿ, ಸುದರ್ಶನ ಹಿಕಡಿ, ಅಭಿಷೇಕ ಗುಮಟೆ, ಮುತ್ತು ಕುಂಬಾರ, ರಾಕೇಶ ಕುಳಲಿಮಠ, ಸುನಿಲ ಅಂಬಿ, ಶಿವಾನಂದ ಮುಚಖಂಡಿ ಮುಂತಾದವರಿದ್ದರು.