ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ

ವಿಜಯಪುರ: ಸಕರ್ಾರ ಬರಗಾಲ ಎಂದು ಸಾರಿದ್ದು ಶಾಶ್ವತ ಬರಗಾಲ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕನರ್ಾಟಕ ಪ್ರಾಂತ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಕನರ್ಾಟಕ ಪ್ರಾಂಥ ರೈತ ಸಂಘ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಹಾಗೂ ರೈತ ಸಂಘದ ಜಿಲ್ಲಾ ಮುಖಂಡರು ಪರಶುರಾಮ ಮಂಟೂರ ಮಾತನಾಡಿ, ನೀರಾವರಿ ಯೋಜನೆಗಳು ಹಾಗೂ ಕೆರೆ ತುಂಬುವ ಯೋಜನೆಗಲನ್ನು ಸಮಾರೋಪಾದಿಯಲ್ಲಿ ಮುಗಿಸಬೇಕು. ಆಲಮಟ್ಟಿ ನಾರಾಯಣಪುರ ಎಡದಂತೆ ಬಲದಂಡೆ ನೀರು ಬಿಡಬೇಕು. ಆಲಮಟ್ಟಿ ಆಣೆಕಟ್ಟು 524 ಗೇಟ್ ಅಳವಡಿಸಬೇಕು. 

ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾಮರ್ಿಕರಿಗೆ ವರ್ಷವಿಡೀ ಉದ್ಯೋಗ ನೀಡಬೇಕು. ರೂ. 600 ವೇತನ ನೀಡಬೇಕು. ಚೆಕ್ಡ್ಯಾಂ, ಕೃಷಿ ಹೊಂಡಗಳನ್ನು ಪ್ರಾರಂಭಿಸಬೇಕು.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಬೇಕು. ಚಂಡ ಮಾರುತ ಗಾಳಿ ಬೀಸುವುದರಿಂದ ವ್ಯವಸಾಯ ಹಾಳಾಗಿದ್ದು, ಪರಿಹಾರ ಧನ ನೀಡಬೇಕು. ಬಾಗೇವಾಡಿ ಗ್ರಾಮದ ತಳೆವಾಡ ಗ್ರಾಮದ 10,500 ಪರಿಹಾರ ನೀಡಿದ್ದಾರೆ ಇನ್ನೂ ಹೆಚ್ಚಿಗೆ ಪರಿಹಾರ ಒದಗಿಸಬೇಕು. ಹಿಂಗಾರಿ, ಮುಂಗಾರಿ ಬೆಳೆ ಕಮರಿ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಕೃಷಿ ಅಧಿಕಾರಿ, ಕಂದಾಯ ಅಧಿಕಾರಿಗಳ ಸಮೀಕ್ಷೆ ನಡೆಸಿ ಪರಿಹಾರಧನ ಒದಗಿಸಬೇಕು. ಈ ಮೇಲಿನ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕೆಂದು ಆಗ್ರಹಿಸಿದರು.

ಮುದ್ದೇಬಿಹಾಳ ತಾಲೂಕು ಕೃಷಿ ಪತ್ತಿನ ಸಹಕಾರಿ ಸಂಘ ಕೊಣ್ಣೂರ ಆಡಳಿತ ಮಂಡಳಿ ಸದಸ್ಯ ಶಂಕರಗೌಡ ಅಸ್ಕಿ ಮಾತನಾಡಿ, ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದಶರ್ಿಯಾದ ಪ್ರಭುಗೌಡ ದ್ಯಾಪೂರ ಇವರಿಗೆ ನಾನು ಸಂಘದ ಯಾವುದೇ ಖಚರ್ುವೆಚ್ಚದ ಬಗ್ಗೆ, ಅಡಿಟ್ ವರದಿಯ ಮಾಹಿತಿ ಸಂಘದಲ್ಲಿ ನೌಕರರ ಪಗಾರ ತೆಗೆದ ಬಗ್ಗೆ ಎಲ್ಲ ಖಚರ್ಿನ ಬಾಬತ್ತಿನ ಬಗ್ಗೆ ಅಡಿಟ್ ವರದಿ ದಾಖಲೆಯನ್ನು ಕೇಳಿದಾಗ ಲೇಖಿಯಿಂದ ಕೇಳಿಕೊಂಡರೂ ಕೂಡ ಯಾವುದೇ ರೀತಿಯಾಗಿ ಸ್ಪಂದನೆ ನೀಡಿರುವುದಿಲ್ಲ. ಕೂಡಲೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ವಿನಂತಿಸಿಕೊಂಡರು. ಅದರಂತೆ ಚಂಡಮಾರುತಕ್ಕೆ ಬೆಳೆಗಳು ನಾಶವಾಗಿವೆ. ಅವರಿಗೆ ಪರಿಹಾರ ಒದಗಿಸಬೇಕು.

ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಪ್ರಸನ್ನ ಮಾತನಾಡಿ, ಈಗಾಗಲೇ ಕೇಂದ್ರ ತಂಡ ಬಂದಿದೆ ವರದಿ ಸಲ್ಲಿಸಿದೆ. ಕೃಷಿ, ತೋಟ, ಕಂದಾಯ ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲಾಗುವುದು ಎಂದು ಆಶ್ವಾಸನೆ ನೀಡಿದರು.ಸಿಐಟಿಯು ಪ್ರಧಾನ ಕಾರ್ಯದಶರ್ಿ ಲಕ್ಷ್ಮಣ ಹಂದ್ರಾಳ, ರಾಮಣ್ಣ ಶಿರೆಗೋಳ, ದಾದಾಪೀರ, ಸಿದ್ರಾಮ ಬಂಗಾರಿ, ಆರ್. ಬಡಿಗೇರ, ಚಿದಾನಂದ ಬೆಳ್ಳೆಣ್ಣನವರ, ಸುಭಾಶ ಕೆಳಮನಿ, ಸುಮಿತ್ರಾ ಘೊಷಸಗಿ ಸೇರಿದಂತೆ ನೂರಾರು ರೈತರು, ಮಹಿಳೆಯರು ಭಾಗವಹಿಸಿದ್ದರು.