ಸಮಸ್ತ ರೈತರನ್ನು ಸಾಲಮನ್ನಾ ವ್ಯಾಪ್ತಿಗೆ ತರಲು ಆಗ್ರಹಿಸಿ ಮನವಿ

ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಸಾಲ ಭರಿಸಲು ಆಗದ ರೈತರೆ ಆ ಸಾಲವನ್ನು ಕಟ್ಟಲಾಗದೆ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅವರನ್ನು  ಸಾಲಮನ್ನಾ ಯೋಜನೆಯಿಂದ ದೂರು ಮಾಡಿದರೆ ಆ ರೈತರ ಕುಟುಂಬಗಳು ಮಾನಸಿಕ ವೇದನೆಯಿಂದ ಬಳಲಿ ಬೀದಿಗೆ ಬರುವ ಸ್ಥಿತಿಗೆ ತಲುಪುತ್ತಾರೆ. ಆದ್ದರಿಂದ ರೈತರಲ್ಲಿ ತಾರತಮ್ಯ ಮಾಡದೆ ಸಾಲಮನ್ನಾ ಯೋಜನೆಯಲ್ಲಿ 2009ರ ನಂತರ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿ ಜೂನ್ 10 ಎಂಬ ನಿರ್ಬಂದವನ್ನು ತೆಗೆದು ಸಾಲಗಾರರಾದ ಎಲ್ಲ ರೈತರಿಗೆ ಯೋಜನೆ ತಲುಪಲಿ ಎಂದರು.

ರಾಜ್ಯ ಸಂಘಟನಾ ಕಾರ್ಯದಶರ್ಿ ಮಹಾಂತೇಶ ಕಮತ ಮಾತನಾಡಿ, ಸತತ ಐದಾರು ವರ್ಷಗಳಿಂದ ಬರಗಾಲ, ಅರೆಬರೆ ಬೆಳೆಗೆ ಬೆಲೆ ಇಲ್ಲ. ರೈತರು ಖರೀದಿಸಿದ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೆರುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೆಲ ರೈತರನ್ನು ಸಾಲಮನ್ನಾದಿಂದ ವಂಚಿತರನ್ನಾಗಿಸುವುದು ಹಾಗೂ ಸಾಲಮನ್ನಾ ಯೋಜನೆಯಲ್ಲಿ ಮೂಡಿರುವ ಗೊಂದಲಗಳಿಗೆ ತೆರೆ ಎಳೆಯಬೇಕು. ಈ ಬಗ್ಗೆ ಬ್ಯಾಂಕ ಗಳಿಗೆ ಸುತ್ತೋಲೆ ಹೊರಡಿಸಬೇಕು. ರೈತರನ್ನು ಬ್ಯಾಂಕ್ ಅಧಿಕಾರಿಗಳು ಪೀಡಿಸುತ್ತಿದ್ದು ರೈತರು ತೊಂದರೆ ಒಳಗಾಗುತ್ತಿದ್ದಾರೆಂದರು.

ರೈತ ಮುಖಂಡರಾದ  ಸುರೇಶ ಹೋಳಿ, ಉಳವಪ್ಪ ಕಲಬಾಂವಿ, ಬಸವರಾಜ ದುಗ್ಗಾಣಿ, ಶ್ರೀಪತಿ ಪಠಾಣಿ, ಮಹಾದೇವ ಕಲಬಾಂವಿ, ಗೂಳಪ್ಪ ಗೂಳಿ, ಮಡಿವಾಳಪ್ಪ ತಳವಾರ, ಈರಣ್ಣ ಹುಬ್ಬಳ್ಳಿ, ವಿಠ್ಠಲ ವಕ್ಕುಂದ ,ಭೀಮಪ್ಪ ಪೂಜೇರ, ಮಹಾಂತೇಶ ಕಲಬಾಂವಿ, ಈರಪ್ಪ ಕರಡಿಗುದ್ದಿ, ಮಡಿವಾಳಪ್ಪ ಚಿಕ್ಕೊಪ್ಪ ಇನ್ನಿತರರು ಪಾಲ್ಗೊಂಡಿದ್ದರು.


ದಿ. 13 ರಂದು ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಸಾಲಗಾರರ ರೈತರಿಗೆ ಸಾಲದ ವಿವರ ಮತ್ತು ಅದಕ್ಕೆ ಸಂಬಂದಿಸಿದ ಮಾಹಿತಿಯನ್ನು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನೀಡಲಿದ್ದಾರೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ರೈತ ಸಂಘಟನೆ ಪದಾಧಿಕಾರಿಗಳು ವಿನಂತಿಸಿದ್ದಾರೆ.