ಲೋಕದರ್ಶನವರದಿ
ರಾಣೇಬೆನ್ನೂರು08: ವಿಜಯನಗರ ಕೃಷ್ಣದೇವರಾಯ ವಿವಿಯಲ್ಲಿ ಬೋಧಕ ಮತ್ತು ಭೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟಿಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಕಳೆದ 6 ತಿಂಗಳಿಂದ ಬೋಧಕ ಭೋಧಕೇತರ ಸಿಬ್ಬಂದಿ ನೇಮಕಾತಿಯ ನಿಯಮಾವಳಿಯನ್ನು ಉಲ್ಲಂಘಿಸಿ ನೇಮಕ ಮಾಡಿಕೊಂಡಿದ್ದು, ಕುಲಪತಿಗಳು ಬಡ ಮತ್ತು ಪ್ರತಿಭಾನ್ವಿತ ಅಭ್ಯಥರ್ಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ವಿವಿಯಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಭಾರಿ ಭ್ರಷ್ಟಾಚಾರ ನಡೆದಿದ್ದರೂ ಸಹ ರಾಜ್ಯ ಸಕರ್ಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಸಚಿವರು ಹಾಗೂ ರಾಜ್ಯಪಾಲರು ಮೌನವಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ, ತಕ್ಷಣ ನೇಮಕಾತಿ ರದ್ದು ಪಡಿಸಿ ಹೊಸದಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತಾಲೂಕ ಸಂಚಾಲಕರಾದ ರಾಘವೇಂದ್ರ ಪಿ., ನಗರ ಸಹಕಾರ್ಯದಶರ್ಿ ಟಿಪ್ಪು, ಕಾರ್ಯಕರ್ತರಾದ ಶ್ರೀಕಾಂತ ಕುಪ್ಪೇಲೂರ, ರೇವಣಸಿದ್ದಪ್ಪ, ಪರಶುರಾಮ, ಪ್ರದೀಪ ಸೇರಿದಂತೆ ಮತ್ತಿತರೆ ಕಾರ್ಯಕರ್ತರು, ಪದಾಧಿಕಾರಿಗಳು, ವಿಧ್ಯಾಥರ್ಿಗಳು ಪಾಲ್ಗೊಂಡಿದ್ದರು.