ಲೋಕದರ್ಶನ ವರದಿ
ಮುಂಡಗೋಡ 4: ನಂದಿಕಟ್ಟಾ ಗ್ರಾಮದ ಸಾಮಾಜಿಕ ಕಾರ್ಯಕರ್ತನೊಬ್ಬನಿಗೆ ಜೀವ ಬೆದರಿಕೆಯಿದ್ದು ರಕ್ಷಣೆ ನೀಡುವಂತೆ ಜಿಲ್ಲಾ ವರಿಷ್ಠಧಿಕಾರಿಗೆ ಮತ್ತು ತಹಶೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
ನಂದಿಕಟ್ಟಾ ಗ್ರಾಮದ ಬಸವರಾಜ ಲೋಹಾರ ಎಂಬಾತನೇ ಸಾಮಜಿಕ ಕಾರ್ಯಕರ್ತನಾಗಿದ್ದು ತಾಲೂಕಿನ ನಂದಿಕಟ್ಟಾ ಮತ್ತು ಸುತ್ತು ಮುತ್ತಲಿನ ಬಡವರಿಗೆ, ವಿಕಲಚೇತನರಿಗೆ, ವಿದ್ಯಾಥರ್ಿಗಳಿಗೆ, ಮಹಿಳೆಯರಿಗೆ, ವೃದ್ಧರಿಗೆ, ವಿಧವೆಯರ ಮತ್ತು ರೈತರ ಪರವಾದ ಏಳಿಗೆಗೆ ಶ್ರಮಿಸುತ್ತಿದ್ದೇನೆ.
ಆದರೆ ನಂದಿಕಟ್ಟಾ ಗ್ರಾಮದ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇವರ ಮೂಲ ವಿರೋದಕ್ಕೆ ಕಾರಣ ಆಸ್ತಿ ಜಮೀನುಗಳಾಗಿದ್ದು ಇವರಿಗೆ ಇಲ್ಲಿನ ಕೆಳ ದಜರ್ೆಯ ಅಧಿಕಾರಿಗಳು ಅಕ್ರಮ ಅವ್ಯವಾಹರಗಳಲ್ಲಿ ಶಾಮೀಲಾಗಿದ್ದಾರೆ. ಇದರ ವಿರುದ್ಧ ನಾನು ಧ್ವನಿ ಎತ್ತಿದ್ದಕ್ಕೆ ನನ್ನ ವಿರುದ್ಧವೆ ಅಪಪ್ರಚಾರ ಮಾಡುತ್ತಿದ್ದಾರೆ. ಮತ್ತು ಇದೆ ಗ್ರಾಮದ ಕೆಲವರಿಂದ ಜಾತಿ ಹೆಸರಿನಲ್ಲಿ ನನ್ನ ವಿರುದ್ದ ಸುಳ್ಳು ದೂರು ನೀಡಿ ಕಾನೂನನ್ನು ದುರೂಪಯೋಗ ಪಡಿಸುವ ಸಾಧ್ಯತೆ ಇದ್ದು ಇವರಿಂದ ಜೀವಕ್ಕೆ ಅಪಾಯ ಇದೆ ಮತ್ತು ರಕ್ಷಣೆ ನೀಡಿ ಸೂಕ್ತ ತನಿಖೆ ನಡೆಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.