ಬಡ ಮಹಿಳೆ ಅಭಿವೃದ್ಧಿಗಾಗಿ ನಿವೇಶನ ಮಂಜೂರಿ ಕುರಿತು ಮನವಿ ಸಲ್ಲಿಕೆ

ಲೋಕದರ್ಶನ ವರದಿ

ವಿಜಯಪುರ 04:ಸನ್ಮಾನ್ಯ ಗೃಹ ಸಚಿವರಾದ ಡಾ. ಎಂ.ಬಿ. ಪಾಟೀಲರಿಗೆ ಮನವಿ ಸಲ್ಲಿಸಿದ ಶ್ರೀ ಉರುಮಾತೆಯರ ಜಿಲ್ಲಾ ಮಹಿಳಾ ಸೌಹಾರ್ದ ಸಹಕಾರಿ ನಿ. ವಿಜಯಪುರ ಜಿಲ್ಲೆಯ ಬಡ ಮಹಿಳೆ ಅಭಿವೃದ್ಧಿಗಾಗಿ ನಿವೇಶನ ಮತ್ತು ಮನೆಗಳನ್ನು ಮಂಜೂರಿ ಮಾಡಲು ಮನವಿ ಸಲ್ಲಿಸಿದ ಮಹಿಳಾ ಸೌಹಾರ್ದದಿಂದ ಬರಗಾಲದ ಜಿಲ್ಲೆಗೆ ಹೆಸರುವಾಸಿಯಾದ ವಿಜಯಪುರ ಜಿಲ್ಲೆಯಲ್ಲಿ ಬರುವಂತಹ ರೈತ ಮಹಿಳೆಯರ ಜೀವನ ಕಫಕರವಾಗಿದ್ದು, ಉಪಕಸಬು ಅಂಧರೆ ಧನ, ಕರುಗಳನ್ನು ಸಾಕಿ ಹೈನುಗಾರಿಕೆ ಮಾಡಿ ಉಪಜೀವನ ಸಾಗಿಸಲು ಬರಗಾಲ ಬಿದ್ದಿದೆ. ನಗರ ಪ್ರದೇಶದಲ್ಲಿ ಸಣ್ಣ ಮಟ್ಟ ವ್ಯವಹಾರ ಮಾಡಲು ಧನ ಸಹಾಯದ ಅವಶ್ಯವಿರುತ್ತದೆ. ಇದರ ಜೊತೆಗೆ ಕೂಲಿ ಮಾಡಿ ಜೀವನ ಮಾಡಿ ರಾತ್ರಿ ವಸತಿ ಮಾಡಲಿಕ್ಕೆ ಮನೆಗಳು ಇರುವುದಿಲ್ಲ ಎಲ್ಲವನ್ನು ಸಮಗ್ರವಾಗಿ ಸರಕಾರದ ಗಮನ ಸೆಳೆಯುವಲ್ಲಿ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ನಗರದಲ್ಲಿರುವ ಶ್ರೀ ಗುರುಮಾತೆಯರ ಜಿಲ್ಲಾ ಮಹಿಳಾ ಸೌಹಾರ್ದ ಸಹಕಾರಿ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಹಿರೇಮಠ ಇವರ ನೇತೃತ್ವದಲ್ಲಿ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಶ್ರೀಮತಿ ಶೋಭಾ ಮಹಾದೇವಯ್ಯ ಗಚ್ಚಿನಮಠ, ಸುವರ್ಣ ರವಿ ಬೆನಕಟ್ಟಿ (ಹಿರೇಮಠ ದಾದಮಟ್ಟಿ) ಮುಖ್ಯ ಕಾರ್ಯನಿವರ್ಾಹಕರಾದ ವಿಜಯಲಕ್ಷ್ಮೀ ಹಿರೇಮಠ, ಶ್ರದ್ಧಾ ಬಿದರಿ, ಮೇಘಾ ಹಿರೇಮಠ, ಬೀಳಗಿ ಪಟ್ಟಣ ಸಹಕಾರಿ ಶಾಖೆ ವಿಜಯಪುರದ ನಿದರ್ೇಶಕರಾದ ಚನ್ನಬಸಯ್ಯ ಹಿರೇಮಠ, ಡಾ. ಅಂಧಾನಸ್ವಾಮಿ ಹಿರೇಮಠ, ಅಧ್ಯಕ್ಷರು ಮಾನಸ ಗಂಗೋತ್ರಿ ಶಿಕ್ಷಣ ಸಂಸ್ಥೆ ಬೆಳ್ಳುಬ್ಬಿ, ಹಾಗೂ ಲಕ್ಷ್ಮೀ ಸೌಹಾರ್ದ ಸಹಕಾರಿ ನಿದರ್ೇಶಕರಾದ ಜಿ.ಬಿ. ಅಂಗಡಿ ವೆಂಕಟೇಶ ನಗರ ಮುಂತಾದವರು ಇದ್ದರು.