ಲೋಕದರ್ಶನ ವರದಿ
ತಾಂಬಾ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಪೊಲೀಸ್ ಠಾಣಾಧಿಕಾರಿ ಪಿಎಸೈ ಶರಣಗೌಡ ಗೌಡರ ಪತ್ರಕರ್ತರನ್ನು ಅಸಭ್ಯವಾಗಿ ವತರ್ಿಸಿದ್ದ ಅವರ ನಡವಳಿಕೆಯನ್ನು ಖಂಡಿಸಿ ಶನಿವಾರದಂದು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕವು ಪ್ರತಿಭಟನೆ ನಡೆಸಿ ತಹಸೀಲ್ದಾರ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಧನ್ಯಕುಮಾರ ಧನಶೆಟ್ಟಿ ಮಾತನಾಡಿ ಸಮಾಜದ ಓರೆಕೋರೆಗಳನ್ನು ತಿದ್ದುವ ನಾಲ್ಕನೇ ಅಂಗವೇ ಪತ್ರಿಕಾ ರಂಗವಾಗಿದೆ. ಅಲ್ಲದೇ ಸಿಂದಗಿ ಪಟ್ಟಣದ ಪಿಎಸೈ ಶರಣಗೌಡ ಗೌಡರ ವರದಿಗಾಗಿ ತೆರಳಿದ ಪತ್ರಕರ್ತರ ವಾಹನಗಳನ್ನು ತಡೆದು ಅವುಗಳ ದಾಖಲಾತಿಗಳನ್ನು ಪರಿಶೀಲಿಸದೇ ಹಾಗೂ ಪತ್ರಕರ್ತರು ಎನ್ನುವ ದಾಖಲಾತಿಗಳನ್ನು ತೋರಿಸಿದ ನಂತರವು ಅವುಗಳ ಬಗ್ಗೆ ಗಮನ ಕೊಡದೇ ತುಚ್ಚವಾಗಿ ಮಾತನಾಡಿ ದಂಡವಿಧಿಸಿದ್ಧಲದೇ ಇದನ್ನು ಪ್ರಶ್ನಿಸಿದ ಪತ್ರಕರ್ತರಿಗೆ ನಿಮಗೆ ಏನಾದರೂ ಆದರೆ ನಾನೇ ದಿಕ್ಕು ಎನ್ನುವ ದರ್ಪದ ಮಾತುಗಳಾಡಿ ಸಾರ್ವಜನಿಕವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತ ವೃತ್ತಿಗೆ ಅವಹೇಳನ ಮಾಡಿದ ಪಿಎಸೈ ಶರಣಗೌಡ ಗೌಡರ ಸಾರ್ವಜನಿಕವಾಗಿ ಕ್ಷಮೇಯಾಚಿಸಬೇಕು.
ಕನರ್ಾಟಕ ಕಾರ್ಯನಿತರ ಪತ್ರಕರ್ತರ ಸಂಘದ ಕಾಯರ್ಾಧ್ಯಕ್ಷ ಆರ್.ಬಿ. ಸಿಂಪಿ ಮಾತನಾಡಿ ಸಿಂದಗಿ ಪಟ್ಟಣದ ಎಸೈ ಶರಣಗೌಡ ಗೌಡರ ಇವರು ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದು ಇದು ಖಂಡನೀಯವಾಗಿದೆ ಅವರ ಮೇಲೆ ಕೂಡಲೇ ಕಠಿಣ ಕ್ರಮಕೈಕೊಳ್ಳುವಂತೆ ಒತ್ತಾಯಿಸಿದರು. ಮನವಿ ಪತ್ರವನ್ನು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಲಾಲಸಿಂಗ ರಾಠೋಡ ಹಾಗೂ ಪ್ರಧಾನ ಕಾರ್ಯದಶರ್ಿ ಅಬುಶಮಾ ಹವಾಲ್ದಾರ ಅವರು ತಹಸೀಲ್ದಾರ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಲಾಲಸಿಂಗ ರಾಠೋಡ, ಪ್ರಧಾನ ಕಾರ್ಯದಶರ್ಿ ಅಬುಶಮಾ ಹವಾಲ್ದಾರ, ಸದ್ದಾಮ ಜಮಾದಾರ, ಲಕ್ಷ್ಮಣ ಹಿರೇಕುರಬರ, ಅಲ್ಲಾಭಕ್ಷ ಗೋರೆ, ಭೀರಪ್ಪ ಹೊಸೂರ, ಶಿವಾನಂದ ಹರಿಜನ, ಫಾರೂಖ ಭೊರಾಮನಿ, ಜಾವೇದಹುಸೇನ ಹಿಪ್ಪರಗಿ, ಅಶೋಕ ಕರಜಗಿ ಸೇರಿದಂತೆ ಮತ್ತಿತ್ತರು ಇದ್ದರು.