ಮೀಸಲಾತಿಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಕೆ

ಲೋಕದರ್ಶನವರದಿ

ರಾಣೇಬೆನ್ನೂರು07: ವಾಲ್ಮೀಕಿ ಸಮುದಾಯಕ್ಕೆ ಶೇ. 7.5 ರಷ್ಟು ಮೀಸಲಾತಿ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ತುತರ್ಾಗಿ ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕ ವಾಲ್ಮೀಕಿ ನಾಯಕ ಮಹಾಸಬಾದ ವತಿಯಿಂದ ಗುರುವಾರದಂದು ಪ್ರತಿಭಟನೆ ಮೂಲಕ ಪಾದಯಾತ್ರೆ ನಡೆಸಿ ನಂತರ ತಹಶೀಲ್ದಾರರಿಗೆ ಮನವಿ ಪತ್ರ ಅಪರ್ಿಸಿದರು. 

  ಮಹಾಸಭಾದ ತಾಲೂಕ ಅಧ್ಯಕ್ಷ ಚಂದ್ರಪ್ಪ ಬೇಡರ ಮಾತನಾಡಿ, 'ಉದ್ಯೋಗ, ಶಿಕ್ಷಣ, ರಾಜಕೀಯ ಹಾಗೂ ಆಥರ್ಿಕವಾಗಿ ಪರಿಶಿಷ್ಟ ಪಂಗಡ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶೇ. 7.5 ರಷ್ಟು ಮೀಸಲಾತಿ ಒದಗಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

  ಈಗಾಗಲೇ ಕೇಂದ್ರ ಸಕರ್ಾರ ಶೇ. 7 ರಷ್ಟು ಮೀಸಲಾತಿಗೆ ಅಸ್ತು ಎಂದಿದೆ. ಈಗಿರುವ ಶೇ 3 ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ರಾಜ್ಯ ಸಕರ್ಾರ ಮೀಸಲಾತಿ ಹೆಚ್ಚಿಸಲು ಮುಂದಾಗದೆ ಮೀನಮೇಷ ಎಣಿಸುತ್ತಿದೆ' ಎಂದು ಅವರು ದೂರಿದರು.

    ಸಮುದಾಯಕ್ಕೆ ಸಲ್ಲಬೇಕಾದ ನ್ಯಾಯಸಮ್ಮತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸಕರ್ಾರಕ್ಕೆ ಒತ್ತಾಯಿಸಿ ಜೂ 9ರಂದು ಬೆಳಿಗ್ಗೆ ರಾಜನಹಳ್ಳಿಯ ಶ್ರೀಮಠದಲ್ಲಿರುವ ಲಿಂಗೈಕ್ಯ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಕತರ್ೃ ಗದ್ದಿಗೆಗೆ ಪೂಜೆ ಸಲ್ಲಿಸಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದರು. 

  ಉಪಾಧ್ಯಕ್ಷ ನಾಗಪ್ಪ ಸಣ್ಣಮನಿ, ವಾಲ್ಮೀಕಿ ಗುರುಪೀಠದ ಧರ್ಮದಶರ್ಿ ನಾಗಪ್ಪ ಹಳ್ಳೆಳ್ಳೆಪ್ಪನವರ, ರಾಜೇಂದ್ರ ಬಸೇನಾಯ್ಕರ, ಶಶಿಧರ ಬಸೇನಾಯ್ಕರ್, ಭೀಮಣ್ಣ ಯಡಚಿ, ಸಣ್ಣತಮ್ಮಪ್ಪ ಬಾಕರ್ಿ, ಡಾ. ಬಸವರಾಜ ಕೇಲಗಾರ, ಶೇರುಖಾನ ಕಾಬೂಲಿ, ಹನುಮಂತಪ್ಪ ಬ್ಯಾಲದಹಳ್ಳಿ, ಹನುಮಂತಪ್ಪ ಮೀನಕಟ್ಟಿ, ರವೀಂದ್ರಗೌಡ ಪಾಟೀಲ, ಕರಬಸಪ್ಪ ಕೂಲೇರ ಸೇರಿದಂತೆ ಮತ್ತಿತರರು ಇದ್ದರು.