ಲೋಕದರ್ಶನ ವರದಿ
ರಾಮದುರ್ಗ, 11: ಶೀಘ್ರದಲ್ಲಿ ತಾಲೂಕಿನಾದ್ಯಂತ ಬರ ಕಾಮಗಾರಿಗಳನ್ನು ಕೈಗೊಂಡು ರೈತರ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಸದಸ್ಯರು ತಹಶೀಲ್ದಾರರಿಗೆ ಹಾಗೂ ಎ.ಪಿ.ಎಂ.ಸಿ ಕಾರ್ಯದಶರ್ಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕು ಬರಪೀಡಿತವೆಂದು ಘೋಷಣೆಯಾಗಿ 8 ತಿಂಗಳು ಗತಿಸಿದರೂ ಬರಗಾಲ ಕಾಮಗಾರಿಗಳನ್ನು ಪ್ರಾರಂಭಿಸಿಲ್ಲ. ಜನರು ಉದ್ಯೋಗವಿಲ್ಲದೆ ಗೂಳೆ ಹೋಗುವ ಪರಸ್ಥಿತಿ ಎದುರಾಗಿದೆ. ಕೂಡಲೇ ಬರಗಾಲ ಕಾಮಗಾರಿ ಪ್ರಾರಂಭಿಸಬೇಕು. ರಾಜ್ಯ ಸರಕಾರ ಘೋಷಿಸಿದ ಸಾಲ ಮನ್ನಾ ಯೋಜನೆಯಲ್ಲಿ ವಿಧಿಸಿದ ಹಲವು ನಿಬಂಧನೆಗಳಿಂದ ಸಾಕಷ್ಟು ರೈತರು ಸಾಲ ಮನ್ನಾ ಯೋಜನೆಯಿಂದ ವಂಚಿತರಾಗುವಂತಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಾಲ ಪಡೆದ ರೈತರಿಂದ ರೇಶನ್ ಕಾರ್ಡ ಇಲ್ಲದವರಿಗೆ ವಂಶಾವಳಿ ನೀಡುವಂತೆ ತಿಳಿಸಿದ್ದರು. ಆದರೇ ವಂಶಾವಳಿ ನೀಡಿದ ರೈತರನ್ನು ಸಾಲಮನ್ನಾ ಯೋಜನೆಯಿಂದ ಕೈಬಿಟ್ಟಿದ್ದು ಮತ್ತೆ ರೇಷನ್ ಕಾರ್ಡ ಕೇಳುತ್ತಿರುವುದು ಕ್ರಮ ಸರಿಯಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದೆ ಸರಕಾರದ ನಿದರ್ೇಶನದಂತೆ ದಾಖಲೆಗಳನ್ನು ಕೇಳಿರುವುದಾಗಿ ಹೇಳುತ್ತಿದ್ದಾರೆ. ಕೂಡಲೇ ಸಾಲಮನ್ನಾ ಯೋಜನೆಗೆ ವಿಧಿಸಿದ ನಿಬಂಧನೆಗಳನ್ನು ಸಡಿಲೀಸಬೇಕು. ಉಪನೋಂದಣಿ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿ ಜನಸಾಮಾನ್ಯರ ಸುಲಿಗೆ ಕೆಲಸ ನಡೆಯುತ್ತಿದೆ. ಪಾರದರ್ಶಕತೆ ಕಾಪಾಡುವ ದೃಷ್ಠಿಯಿಂದ ಕಚೇರಿಯ ಒಳಗೆ ಹಾಗೂ ಹೊರಗೆ ಸಿ.ಸಿ ಕ್ಯಾಮರ್ ಅಳವಡಿಸಬೇಕು ಹಾಗೂ ಎ.ಪಿ.ಎಂ.ಸಿ ಯಲ್ಲಿರುವ ರೈತ ಭವನ ಕಟ್ಟಡವನ್ನು ದುರಸ್ಥಿಗೊಳಿಸಿ ಅಲ್ಲಿ ಆಸನದ ವ್ಯವಸ್ಥೆ ಮಾಡಿ ರೈತರಿಗೆ ತಂಗಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ಮಲ್ಲಿಕಾಜರ್ುನ ರಾಮದುರ್ಗ, ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ, ತಾಲೂಕಾ ಸಂಚಾಲಕ ಯಲ್ಲಪ್ಪ ದೊಡಮನಿ, ರೈತ ಮುಖಂಡರಾದ ಶಿವಾನಂದ ದೊಡವಾಡ, ಕೃಷ್ಣಗೌಡ ಪಾಟೀಲ, ಮಹಮ್ಮದಸಾಬ ದಾನಕಟಗಿ, ಸುರೇಶ ಗುಂಜೇರಿ, ನೂರಸಾಬ ಕಡಕೋಳ, ಮಲ್ಲು ದೇಸಾಯಿ, ಪತ್ರೆಪ್ಪ ಕೊಪ್ಪದ, ಅಪ್ಪಣ್ಣ ಗುದಗಿ, ರಾಜು ಅಣ್ಣಿಗೇರಿ, ಶಿವನಗೌಡ ನಾಡಗೌಡ್ರ, ದ್ಯಾಮಣ್ಣ ಕೊತೆನ್ನವರ, ಶಂಕ್ರಪ್ಪ ಕಿತ್ತೂರ, ವೆಂಕಣ್ಣ ಕೆಂಚರಡ್ಡಿ ಹಾಗೂ ಇತರರಿದ್ದರು.