ಎ.ಜೆ ಸದಾಶಿವ ಆಯೋಗ ವರದಿಯ ಶಿಫಾರಸ್ಸಿಗೆ ಮಾದಿಗ ಸಮಾಜದಿಂದ ಪತ್ರ ಚಳುವಳಿ

ಲೋಕದರ್ಶನ  ವರದಿ 

ಕುಕನೂರು ೧೬: ಪಟ್ಟಣದ ಅಂಬೇಡ್ಕರ್ ಸರ್ಕಲ್ನಲ್ಲಿ ದಲಿತ ಮುಖಂಡರು ಮಂಗಳವಾರ ಎ.ಜೆ ಸದಾಶಿವ ಆಯೋಗದ ವರದಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ಮಾಡಿದರು.

ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ರತ್ನಾಕರ ತಳವಾರ ಮಾತನಾಡಿ, ಜಾತಿವಾರು ಮೇಲೆ ಸರ್ಕಾರ ಶೋಷಣೆ ಬೂದಿ ಮುಚ್ಚಿದ ಕೆಂಡದಂತೆ ಸದಾ ಇರುತ್ತದೆ ನಿಜವಾಗಿ ಶೋಷಿತವಾಗಿರುವ ಮಾದಿಗ ಸಮಾಜದ ಎಲ್ಲಾ ರೀತಿಯ ಅಭಿವೃದ್ಧಿಗೆ ಒಳ ಮೀಸಲಾತಿ ಅನಿವಾರ್ಯ ಯಾಕೆಂದರೆ ಕೇವಲ ಮೀಸಲಾತಿ ಉಳ್ಳವರು ಪಾಲಾಗಿದ್ದು ಆದ್ದರಿಂದ ಎ,ಜೆ,ಸದಾಶಿವ ಆಯೋಗದ ವರದಿಯನ್ನು ಎಥಾವತ್ತಾಗಿ ಅಧಿವೇಶನದಲ್ಲಿ ಅಂಗಿಕರಿಸಿ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಬೇಕು  

  ಸಮುದಾಯದ ಅಭಿವೃದ್ಧಿ ಹೋರಾಟಕ್ಕೆ ಪ್ರತಿಯೊಬ್ಬರು ಅಣಿಯಾಗಬೇಕು. ಗ್ರಾಮ ಮಟ್ಟದಿಂದ ರಾಜಧಾನಿವರೆಗು ಹೋರಾಟದ ಕೂಗು ಮುಟ್ಟಿದಾಗ ಪ್ರತಿಫಲ ಸಾಧ್ಯ ಎಂದರು.

ಪ್ರಮುಖರಾದ ಶಿವಪ್ಪ ಭಂಡಾರಿ, ಪರಶುರಾಮ ಸಕ್ರಣ್ಣವರ  ರಮೇಶ ಶಾಸ್ತ್ರೀ, ಅಂದಪ್ಪ ಭಂಡಾರಿ, ಮಲಿಯಪ್ಪ ಅಣ್ಣಿಗೇರಿ, ನಿಂಗಪ್ಪ ಗೊರ್ಲಕೊಪ್ಪ, ಚಂದ್ರಪ್ಪ ಆರುಬೆರಳಿನ ಮರುತಿ ಭಂಡಾರಿ ಯಮನೂರಪ್ಪ ಗೊರ್ಲಕೊಪ್ಪ, ಹನಮಂತ ಆರುಬೆರಳಿನ,ಪ್ರಶಾಂತ ಆರುಬೆರಳಿನ ಸಂತೋಷ ಭಂಡಾರಿ, ನಾಗರಾಜ ಅಣ್ಣಿಗೇರಿ ದೇವಪ್ಪ ಆರುಬೆರಳಿನ ಮಹಾಂತೇಶ ಗೊಲರ್ೆಕೊಪ್ಪ ಯಲ್ಲಪ್ಪ ದೊಡ್ಡಮನಿ  ಶಂಕರ ಭಂಡಾರಿ ರುದ್ರಪ್ಪ ಬಂಡಾರಿ  ಇತರರಿದ್ದರು.