ಲೋಕದರ್ಶನ ವರದಿ
ಶಿರಹಟ್ಟಿ: ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡವಿರುವುದರಿಂದ ಸರ್ವ ಇಲಾಖೆಯ ಅಧಿಕಾರಿಗಳು ಆಂಗ್ಲ ಭಾಷೆಯಲ್ಲಿ ವರದಿ ನೀಡದೆ. ಸರಕಾರದ ಎಲ್ಲಾ ಯೋಜನೆ ಹಾಗೂ ಅನುದಾನದ ಸಂಪೂರ್ಣ ಮಾಹಿತಿಯನ್ನು ಕನ್ನಡ ಭಾಷೆಯಲ್ಲೇ ನೀಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೇಕಾರ ಅವರು ಸರ್ವ ಇಲಾಖೆ ಅಧಿಕಾರಿಗಳಿಗೆ ಕಟ್ಟಾಜ್ಞೆ ಹೋರಡಿಸಿದರು.
ಅವರು ಸ್ಥಳೀಯ ತಾಲೂಕು ಪಂಚಾಯತ ಸಾಮಥ್ರ್ಯ ಸೌಧದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ಸಭೆಗೆ ಕನ್ನಡ ಭಾಷೆಯಲ್ಲೇ ವರದಿ ಸಲ್ಲಿಸಬೇಕು. ಮತ್ತು ಎಸ್ಸಿಪಿ/ಟಿಎಸ್ಪಿ ಯೋಜನೆ ಸೇರಿದಂತೆ ಸರಕಾರದ ಎಲ್ಲಾ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಯೋಜನೆಯ ಲಾಭವನ್ನು ಜನತೆ ಪಡೆದುಕೊಳ್ಳುವಂತೆ ಮಾಡಬೇಕು. ಅಲ್ಲದೇ ಸರಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಬಂದ ಅನುದಾನವನ್ನು ಸಂಪೂರ್ಣ ಬಳಕೆ ಮಾಡಬೇಕು. ಇಲ್ಲವೇ ಲ್ಯಾಪ್ಸ್ ಆಗಿ ಮರಳಿ ಸರಕಾರಕ್ಕೆ ಹೋದರೆ, ಆ ಇಲಾಖೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶುದ್ಧ ನೀರಿನ ಘಟಕ ದುರಸ್ಥೆ ಮಾಡಿ: ತಾಲೂಕಿನ ವಡ್ಡರಪಾಳೆ, ಆದ್ರಳ್ಳಿ ಹಾಗೂ ನಾದಿಗಟ್ಟಿ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕದ ಮೋಟರ್ಗಳು ಸುಟ್ಟು ಹೋಗಿದ್ದರು ಸಹ ಇಲ್ಲಿವರೆಗೂ ನೀರು ಸರಬರಾಜ ಇಲಾಖೆ ಅವರು ದುರಸ್ಥೆ ಕಾರ್ಯ ಮಾಡುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ಶುದ್ಧ ನೀರು ಸಿಗದೆ ಬಹಳ ಸಮಸ್ಯೆಯಾಗುತ್ತಿದೆ ಎಂದು ಜಿಪಂ ಸದಸ್ಯೆ ದೇವಕ್ಕ ಲಮಾಣಿ ಅವರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಇದಕ್ಕೆ ನೀರು ಸರಬರಾಜ ಇಲಾಖೆಯ ಅಧಿಕಾರಿಗಳು ಉತ್ತರಿಸಿ, ವಿದ್ಯುತ್ ಅವಗಡದಿಂದ ಮೋಟರ್ಗಳು ಸುಟ್ಟುಹೋಗಿವೆ ಎಂದು ಹೇಳಿದರು. ಇದಕ್ಕೆ ಇಓ ಪ್ರತಿಕ್ರೀಯಸಿ ಸರಕಾರದಿಂದ ಶುದ್ಧ ನೀರಿನ ಘಟಕಗಳ ದುರಸ್ಥೆಗೆ ಸಾಕಷ್ಟು ಅನುದಾನವಿದ್ದು, ಯಾವುದೇ ತಾಂತ್ರಿಕ ದೋಷವಿದ್ದರೂ ಸಹ ಶೀಘ್ರದಲ್ಲಿ ಸರಿಪಡಿಸಬೇಕು ಎಂದು ನೀರು ಸರಬರಾಜ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿದ್ಯುತ್ ಸಂಪರ್ಕ ಕಲ್ಪಿಸಿ: ತಾಲೂಕಿನ ಅಕ್ಕಿಗುಂದ ಗ್ರಾಮದಲ್ಲಿ ಹೊಸ ಪ್ಲಾಟಗಳು ನಿಮರ್ಾಣವಾಗಿ ವರ್ಷ ಗತಿಸುತ್ತಾ ಬಂದಿವೆ. ಈ ಪ್ಲಾಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಸಭೆಗಳಲ್ಲಿ ಹೇಳಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಪ್ಲಾಟನ ಜನತೆ ರಾತ್ರಿ ಕತ್ತಲಲ್ಲಿ ಜೀವನ ಕಳೆಯುವಂತಾಗುತ್ತಿದೆ ಎಂದು ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಜಿಪಂ ಸದಸ್ಯ ದೇವಕ್ಕ ಲಮಾಣಿ ತರಾಟೆಗೆ ತಗೆದುಕೊಂಡರು.
ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳ ಬೇಜವ್ದಾರಿ ವರ್ತನೆ ಹಾಗೂ ಕಾರ್ಯವೈಫಲ್ಯದಿಂದ ಮಾತ್ರ ಸರಕಾರದ ಅನುದಾನ ಮರಳಿ ಹೋಗಲು ಸಾಧ್ಯ. ಆದ್ದರಿಂದ ಅಧಿಕಾರಿಗಳು ತಮ್ಮ ಕಾರ್ಯದಕ್ಷೆತೆಯನ್ನು ಹೆಚ್ಚಿಸಿಕೊಂಡು ಸರಕಾರದ ಎಲ್ಲಾ ಯೋಜನೆಯ ಮಾಹಿತಿನ್ನು ಜನರಿಗೆ ತಿಳಿಸುವುದು ಹಾಗೂ ಅಜರ್ಿ ಸಲ್ಲಿಸಿದ ಫಲಾನುಭವಿಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡುವುದರ ಮೂಲಕ ಶೇ 100ರಷ್ಟು ಪ್ರಗತಿ ಸಾಧಿಸಿ, ಸಾರ್ವಜನಿಕರ ಸೇವೆ ಮಾಡಬೇಕು ಎಂದು ತಾಲೂಕು ಮಟ್ಟದ ಸರ್ವ ಅಧಿಕಾರಿಗಳಿಗೆ ತಾಪಂ ಇಓ ಸಲಹೇ ನೀಡಿದರು.
ಜಿಪಂ ಸದಸ್ಯ ದೇವಕ್ಕ ಲಮಾಣಿ, ತಾಪಂ ಅಧ್ಯಕ್ಷೆ ಸುಶೀಲವ್ವ ಥಾವೆರೆಪ್ಪ ಲಮಾಣಿ, ಉಪಾಧ್ಯಕ್ಷೆ ಪವಿತ್ರ ಶಂಕಿನದಾಸರ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೇಕಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಎಸ್.ಬಿ. ಹರ್ತಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.