ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ತಕ್ಷಣ ವರದಿ ನೀಡಿ
Report immediately if there is a drinking water problem in any village
ಲೋಕದರ್ಶನ ವರದಿ
ಸಿಂದಗಿ 20: ಕ್ಷೇತ್ರದ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ತಕ್ಷಣ ವರದಿ ನೀಡಲು ಶಾಸಕ ಅಶೋಕ ಮನಗೂಳಿ ಅಭಿವೃದ್ಧಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಗತಿ ಪರೀಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಗಾವಿ ಬಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊರವಗುಂಡಗಿ ಗ್ರಾಮದ ಬಗ್ಗೆ, ರಾಂಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಂಪುರ ಪಿ ಎ ಮತ್ತು ಗಣಿಹಾರ ಗ್ರಾಮಗಳ ವರದಿ ನೀಡಬೇಕು,
ಗುಬ್ಬೆವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಗಿ ಮತ್ತು ಪುರದಾಳ ಗ್ರಾಮಗಳಲ್ಲಿ 2 ಬೋರವೆಲ್ ಬೇಕು ಎಂದು ತಿಳಿಸಿದರು. ಅದೇ ರೀತಿ ಚಾಂದಕವಟೆ ಪಂಚಾಯತ್ ವ್ಯಾಪ್ತಿಯ ಕೆರೆಯಲ್ಲಿ ಟಿಸಿ ಬದಲಿಸಬೇಕು ಸುರಗಿಹಳ್ಳಿ ಗ್ರಾಮದಲ್ಲಿ ಪದೇ ಪದೇ ಟಿಸಿ ಸುಡುತ್ತಿದೆ ಪಿಡಿಓ ಮಾಹಿತಿ ನೀಡಬೇಕು ಎಂದರು.
ಬ್ಯಾಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡಬಾಳ, ಮನ್ನಾಪುರ, ಅಂತರಗಂಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುತ್ತದೆ, ಹಿಕ್ಕನಗುತ್ತಿ, ಯರಗಾಲ್ ಬಿಕೆ, ಕೊಕಟನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವದಿಲ್ಲ ಎಂದು ಪಿಡಿಓ ಅವರು ತಿಳಿಸಿದರು.
ಗೋಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಸಾಬಾಳ ಗ್ರಾಮದ ಲಕ್ಷ್ಮೀ ಗುಡಿ ಹತ್ತಿರ ಒಂದು ಬೋರವೆಲ್ ಯಂಕಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಂಕಂಚಿ ಮತ್ತು ಖೈನೂರ ಗ್ರಾಮದ ಎಸ್‌ಸಿ ಕಾಲೋನಿ ಯಲ್ಲಿ ಬೋರವೆಲ್, ಮರಗಮ್ಮ ಗುಡಿ ಹತ್ತಿರ, ಜಟ್ಟೆಪ್ಪ ನಗರಗಳಲ್ಲಿ ಬೋರವೆಲ್.
ಚಟ್ಟರಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಂಪುರ ಗ್ರಾಮಕ್ಕೆ ಒಂದು ಬೋರವೆಲ್, ಕನ್ನೊಳ್ಳಿ ಒಂದು ಬೋರವೆಲ್, ಹಂದಿಗನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಂಡದಲ್ಲಿ ಒಂದು ಬೋರವೆಲ್ ಬೇಕು ಎಂದು ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶಾಸಕರು ಇವರ ಸಭೆಯಲ್ಲಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ, ಜಿಲ್ಲಾ ಕೆಡಿಪಿ ಸದಸ್ಯರಾದ ನೂರಹ್ಮದ ಅತ್ತಾರ, ಶಿವಾನಂದ ಕೊಟರಗಸ್ತಿ, ತಾಲೂಕು ಕೆಡಿಪಿ ಸದಸ್ಯರಾದ ಸುರೇಶ ಚೌದರಿ, ಅಯ್ಯಪ್ಪ ಕಟ್ಟಿಮನಿ, ಮಹಾನಂದಾ ಬಮ್ಮಣ್ಣಿ ಉಪಸ್ಥಿತರಿದ್ದರು. ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಸಿಬ್ಬಂದಿಗಳು ಹಾಜರಿದ್ದರು
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 