35 ನೇ ವಾರ್ಡಿನ ಸಿದ್ದಲಿಂಗ ನಗರದಲ್ಲಿ ನಗರಸಭೆಯಿಂದ ಹದಗೆಟ್ಟ ನೀರಿನ ಪೂರೈಕೆಯ ಪೈಪ್ ಲೈನ್ ದುರಸ್ಥಿಕರಣ

Repair of deteriorated water supply pipeline by the Municipal Corporation in Siddalinga Nagar, Ward

35 ನೇ ವಾರ್ಡಿನ ಸಿದ್ದಲಿಂಗ ನಗರದಲ್ಲಿ ನಗರಸಭೆಯಿಂದ ಹದಗೆಟ್ಟ ನೀರಿನ ಪೂರೈಕೆಯ ಪೈಪ್ ಲೈನ್ ದುರಸ್ಥಿಕರಣ 


ಗದಗ 19 :  ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 35 ನೇ ವಾರ್ಡಿನ ಸಿದ್ದಲಿಂಗ ನಗರದ ನೀರಿನ ಟ್ಯಾಂಕ್ ಹತ್ತಿರ ಆಟೋ ಸ್ಟ್ಯಾಂಡ್ ಹತ್ತಿರದ ನಿವಾಸಿಗಳಿಗೆ ಕಳೆದ ಒಂದೂವರೆ ತಿಂಗಳಿನಿಂದ ನಗರಸಭೆಯಿಂದ ಪೂರೈಕೆಯಾಗುವ ಹಾಗೂ 247  ನಿರಂತರ ನೀರಿನ ಪೂರೈಕೆಯು ಸ್ಥಗಿತಗೊಂಡು ನಿರಂತರವಾಗಿ ನೀರಿನ ಬವಣೆಯನ್ನು ಸದರ ಬಡಾವಣೆಯ ನಾಗರಿಕರು ಅನುಭವಿಸುವಂತಾಗಿತ್ತು.ಈ ಕುರಿತು ಬಡಾವಣೆಯ ನಾಗರಿಕರು ನಗರಸಭೆಯ ಅಧಿಕಾರಿಗಳಿಗೆ ಹಾಗೂ ವಾರ್ಡಿನ ಚುನಾಯಿತ ನಗರಸಭಾ ಸದಸ್ಯರಿಗೆ ಅಹವಾಲನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲದಿರುವದು ವಿಷಾದನೀಯ. ಎಷ್ಟೇ ಪ್ರಯತ್ನಿಸಿದರೂ ನೀರಿನ ತೊಂದರೆಯಿಂದ ಬಳಲುತ್ತಿರುವ ಬಡಾವಣೆಯ ನಾಗರಿಕರು ನಗರಸಭೆಯ ಮಾಜಿ ಸದಸ್ಯರು ಹಾಗೂ ಕಾಂಗ್ರೇಸ್ ಮುಖಂಡರಾದ ಅನಿಲ ಗರಗ ರವರನ್ನು ಸಂಪರ್ಕಿಸಿ ದೈನಂದಿನವಾಗಿ ತಾವು ಅನುಭವಿಸುತ್ತಿರುವ ನೀರಿನ ಬವಣೆಯ ಕುರಿತು ವಿನಂತಿಸಲಾಗಿ ಬಡಾವಣೆಯ ಜನಸ್ನೇಹಿ ನಾಯಕರಾದ ಅನಿಲ ಗರಗ ರವರ ನಿರಂತರ ಪ್ರಯತ್ನದ ದ್ಯೋತಕವಾಗಿ ಇದೇ ದಿನಾಂಕ 17/03/2025 ರಂದು ನಗರಸಭೆಯಿಂದ ಬಡಾವಣೆಯ ನಾಗರಿಕರಿಗೆ ಉಂಟಾದ ನೀರಿನ ಸರಬರಾಜಿನ ತೊಂದರೆಯನ್ನು ದುರಸ್ಥಿಗೊಳಿಸಿ ಸುರಳಿತವಾಗಿ ನೀರಿನ ಪೂರೈಕೆಯನ್ನು ಕೈಗೊಳ್ಳಲಾಯಿತು. ಆ ಪ್ರಯುಕ್ತ ಬಡಾವಣೆಯ ಸಮಸ್ತ ನಾಗರಿಕರು ಅನಿಲ ಗರಗ ರವರ ಸಾಮಾಜಿಕ ಕಳಕಳಿಗೆ ಪ್ರಶಂಷೆಯನ್ನು ವ್ಯಕ್ತಪಡಿಸಿದರು. 

ಈ ಸಂಧರ್ಭದಲ್ಲಿ ಮನೋಹರ ಕುಷ್ಟಗಿ ಪುರಾಣಿಕ್ ಸುಂಕದ ಹಿರೇಮಠ್ ಫಕ್ಕಿರ​‍್ಪ ನಾಯಕ ರವಿ ನಿಡಗುಂದಿ ಮಹಮ್ಮದ್ ವಂಟಮೋರಿ ಅಶೋಕ ಕಲಕೋಟಿ ರಮೇಶ ಸಂಕಣ್ಣವರ, ರಾಘವೇಂದ್ರ ಫತ್ತೆಪೂರ ರಾಜು ತೋಟದ ಶಿವು ಗಾಣಿಗೇರ ವೀರಣ್ಣ ಕಟ್ಟಿ ಉಮೇಶ ಬೇಲೇರಿ ರಝಕ ನವಲಗುಂದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.